Site icon TUNGATARANGA

ಬಂದ್ ಮಾಡಲಾಗಿದ್ದ ‌ಫುಡ್ ಕೋರ್ಟ್ ಇಂದಿನಿಂದ ಆರಂಭ


ಶಿವಮೊಗ್ಗ: ಮಲ್ಲಿಕಾರ್ಜುನ ಚಿತ್ರ ಮಂದಿರ ಬಳಿ ಇರುವ ಫುಡ್‌ಕೋರ್ಟ್ ಇಂದು ಮಧ್ಯಾಹ್ನ 1ಗಂಟೆಯಿಂದ ಪುನರಾರಂಭಗೊಂಡಿದೆ.
ಕಳೆದ ಮಾರ್ಚ್‌ನಿಂದ ಕೊರೊನ ಹಿನ್ನೆಲೆಯಲ್ಲಿ ಫುಡ್‌ಕೋರ್ಟ್‌ನ್ನು ಜಿಲ್ಲಾಡಳಿತ ಮತ್ತು ಪಾಲಿಕೆ ಆದೇಶದ ಮೇರೆಗೆ ಬಂದ್ ಮಾಡಲಾಗಿತ್ತು. ಇದರಿಂದ ನೂರಾರು ಬಡ ಕುಟುಂಬಗಳು ಮತ್ತು ಇದನ್ನು ಆಶ್ರಯಿಸಿದ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು.
ಜುಲೈನಲ್ಲಿ ತಾತ್ಕಾಲಿಕವಾಗಿ ತೆರೆಯಲು ಮುಂದಾದಾಗ ಸ್ಮಾರ್ಟ್ ಸಿಟಿ ಕಾಮಗಾರಿ ನೆಪವೊಡ್ಡಿ ಮತ್ತೆ ಬಂದ್ ಮಾಡಲಾಗಿತ್ತು. ಇದೀಗ ಸ್ಮಾರ್ಟ್ ಸಿಟಿ ವತಿಯಿಂದ ಯುಜಿಡಿ, ಬಾಕ್ಸ್ ಚರಂಡಿ ಮತ್ತು ಗ್ರಾಹಕರಿಗೆ ಕುಳಿತುಕೊಳ್ಳಲು ಗ್ರಾನೈಟ್ ಹಾಕಿ ಆಸನ ಕಲ್ಪಿಸಿದ್ದು, ಸುಣ್ಣ ಬಣ್ಣ ಬಳಿದು ಸುಸಜ್ಜಿತವಾಗಿ ಮರು ನಿರ್ಮಾಣ ಮಾಡಿದ್ದು, ಮತ್ತೆ ಫುಡ್‌ಕೋರ್ಟ್ ಕಾರ್ಯನಿರ್ವಹಿಸಲಿದೆ ಎಂದು ಫುಡ್‌ಕೋರ್ಟ್ ವ್ಯಾಪರಸ್ಥರ ಸಂಘದ ಅಧ್ಯಕ್ಷ ಜೆ.ರಮೇಶ್ ಮತ್ತು ಉಪಾಧ್ಯಕ್ಷರಾದ ಧರ್ಮರಾಜ್, ಕಾರ್ಯದರ್ಶಿ ನಾರಾಯಣರಾವ್ ಹೇಳಿದ್ದಾರೆ.

Exit mobile version