ದಿನಾಂಕ 8.1.2024ರ ಸೋಮವಾರ ಬೆಳಿಗ್ಗೆ ನೆಹರು ಸ್ಟೇಡಿಯಂನಲ್ಲಿ ಜಾಗಿಂಗ್ ಮಾಡಬೇಕಾದರೆ ಯುವಕನೊಬ್ಬನಿಗೆ ಎದೆ ನೋವು ಬಂತು. (ಚೇತನ್ ದೇವಸಿ ಎಂಬ 17 ವರ್ಷದ ಯುವಕ. ಗಾಂಧಿಬಜಾರ್ ಕುಚುಲಕ್ಕಿ ಕೇರಿ ನಿವಾಸಿ.)
ಸಮಯ ಬೆಳಿಗ್ಗೆ 7:30 ಯುವಕನಿಗೆ ನೋವು ಜಾಸ್ತಿಯಾಗಿ ಉಸಿರಾಡಲು ಕಷ್ಟವಾಗತೊಡಗಿತ್ತು.
ಅಂದರೆ ಆ ಯುವಕನಿಗೆ ಹಾರ್ಟ್ ಅಟ್ಯಾಕ್ ಆಗಿತ್ತು.
ಅಲ್ಲಿ ವಾಕ್ ಮಾಡುತ್ತಿದ್ದ ಕೆಲವು ವೈದ್ಯರು ಅವನಿಗೆ ತಕ್ಷಣ CPR ಮಾಡಿದರು.
ನಂತರ ಅವನಿಗೆ ಸ್ಟೇಡಿಯಂ ಪಕ್ಕದಲ್ಲಿರುವ ಒಂದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಆದರೆ ಯುವಕನಿಗೆ ಹೆಚ್ಚಿನ ತುರ್ತು ಚಿಕಿತ್ಸೆ ಅವಶ್ಯಕತೆಯಿದ್ದುದರಿಂದ ಇಂದು ಮಧ್ಯಾಹ್ನ ಅವನನ್ನು ಶಿವಮೊಗ್ಗ ಏರ್ಪೋರ್ಟ್ ನಿಂದ ಮಧ್ಯಾಹ್ನ 1:00 ಗಂಟೆಗೆ ಮಂಗಳೂರಿಗೆ ಏರ್ ಆಂಬುಲೆನ್ಸ್ ನಲ್ಲಿ ಏರ್ ಲಿಫ್ಟ್ ಮಾಡಲಾಯಿತು . ಮಧ್ಯಾಹ್ನ 1.40 PMಗೆ ಏರ್ ಅಂಬುಲೆನ್ಸ್ ಮಂಗಳೂರು ಏರ್ ಪೋರ್ಟ್ ತಲುಪಿತ್ತು. ಅಲ್ಲಿಂದ ರಸ್ತೆ ಮುಖಾಂತರ ಆಂಬುಲೆನ್ಸ್ ನಲ್ಲಿ ಅವನನ್ನು ಮಣಿಪಾಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಅಲ್ಲಿ ಚಿಕಿತ್ಸೆ ಮುಂದುವರೆದಿದ್ದು ಯುವಕ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.