Site icon TUNGATARANGA

ಬಾಹುಸಾರ ವಿಷನ್ ನಿಂದ ಸಾರ್ವಜನಿಕರ ಉಪಯೋಗಕ್ಕಾಗಿ ಉಚಿತ ಮೃತದೇಹ ಶೀತಲೀಕರಣ ಫ್ರೀಜರ್ ಬಾಕ್ಸ್‌/ ಉಸ್ತುವಾರಿ ಹೊತ್ತ ಸರ್ಜಿ ಫೌಂಡೇಷನ್‌ಗೆ ಹಸ್ತಾಂತರ

ಶಿವಮೊಗ್ಗ,ಜ.೧೧: ಭಾವಸಾರ ವಿಜನ್ ಇಂಡಿಯಾ ಪ್ರೇರಣಾ ಸಂಸ್ಥೆಯು ನಗರದಲ್ಲಿ ಮೊದಲ ಬಾರಿಗೆ ಸಾರ್ವಜನಿಕರ ಉಪಯೋಗಕ್ಕಾಗಿ ಉಚಿತ ಮೃತದೇಹ ಶೀತಲೀಕರಣ ಫ್ರೀಜರ್ ಬಾಕ್ಸ್‌ನ್ನು ಸರ್ಜಿ ಫೌಂಡೇಷನ್‌ಗೆ ಇಂದು ಹಸ್ತಾಂತರಿಸಿತು.


ಫ್ರೀಜರ್ ಬಾಕ್ಸ್ ಹಸ್ತಾಂತರಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಾಹುಸಾರ ಇಂಡಿಯಾ ಪ್ರೇರಣಾ ಶಿವಮೊಗ್ಗ ಶಾಖೆಯ ಅಧ್ಯಕ್ಷ ಮಿಥುನ್ ಉತ್ತರಕರ್, ಮೃತದೇಹವನ್ನು ಕೊನೆಯ ಕ್ಷಣದಲ್ಲಿ ನೋಡಬೇಕೆಂಬ ಆಸೆ ಮೃತರ ಕುಟುಂಬದವರಿಗೆ ಇರುತ್ತದೆ, ಮೃತರ ಸಂಬಂಧಿಕರು, ಮಕ್ಕಳು ಬೇರೆ ಬೇರೆ ದೇಶ, ರಾಜ್ಯಗಳಲ್ಲಿದ್ದರೆ ಬರುವುದು ತಡವಾಗುತ್ತದೆ, ಮೃತಪಟ್ಟ ನಂತರ ಸಾಮಾನ್ಯವಾಗಿ ದೇಹವು ಕ್ರಮೇಣ ವಾಸನೆ ಬರಲು ಶುರುವಾಗುತ್ತದೆ, ಇದನ್ನು ತಡೆಗಟ್ಟಲು ಮತ್ತು ಅಂತ್ಯಕ್ರಿಯೆ ವಿಳಂಬವಾದಾಗ ಫ್ರೀಜರ್ ಬಾಕ್ಸ್ ಪೂರಕವಾಗುತ್ತದೆ. ಇದರಲ್ಲಿ ೨೪ ಗಂಟೆಯಿಂದ ೪೮ ಗಂಟೆಗಳ ಕಾಲ ಇಡಬಹುದಾಗಿದೆ ಎಂದರು.


ಬಾವುಸಾರ ವಿಜನ್ ಇಂಡಿಯಾ ಸಂಸ್ಥೆಯು ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನೀಡುತ್ತ ಬಂದಿದೆ. ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ರೋಟರಿ ಚಿತಗಾರಕ್ಕೆ ಒಲೆಗಳ ನೀಡಿಕೆ, ಅನಾಥಾಶ್ರಮಗಳಿಗೆ ಸಾಮಾಗ್ರಿ ವಿತರಣೆ ನೀಡುತ್ತಿದೆ. ಅದರ ಮುಂದುವರೆದ ಭಾಗವಾಗಿ ಮೃತದೇಹ ಶೀತಲೀಕರಣ ಬಾಕ್ಸ್‌ನ್ನು ಸರ್ಜಿ ಪೌಂಡೇಶನ್‌ಗೆ ಹಸ್ತಾಂತರ ಮಾಡಿದ್ದೇವೆ ಎಂದರು.


ಸರ್ಜಿ ಫೌಂಡೇಷನ್‌ನ ಡಾ.ಧನಂಜಯ ಸರ್ಜಿ ಮಾತನಾಡಿ, ಸರ್ಜಿ ಆಸ್ಪತ್ರೆಯ ಮೂಲಕ ಇದರ ಸಂಪೂರ್ಣ ನಿರ್ವಹಣೆಯನ್ನು ಮಾಡಲಾಗುತ್ತದೆ. ಯಾವುದೇ ಜಾತಿ-ಧರ್ಮಕ್ಕೆ ಇದು ಸೀಮಿತವಲ್ಲ, ಎಲ್ಲಾ ವರ್ಗದ ಜನರಿಗೆ ಉಚಿತವಾಗಿ ಲಭ್ಯ. ಡೆಡ್ ಬಾಡಿ ಪ್ರೀಜರ್‌ನ್ನು ತೆಗೆದುಕೊಂಡು ಹೋಗುವ ಸಾರಿಗೆ ವೆಚ್ಚವನ್ನು ಬಳಕೆದಾರರು ಭರಿಸಬೇಕಾಗುತ್ತದೆ, ಇದಕ್ಕೆ ಅತ್ಯಂತ ಕಡಿಮೆ ದರ ನಿಗದಿ ಮಾಡಲಾಗುತ್ತದೆ. ವಾಹನದ ಜವಾಬ್ದಾರಿ ಮೃತರ ಕುಟುಂಬದವರದ್ದಾಗಿರುತ್ತದೆ. ಅಂತ್ಯಕ್ರಿಯೆ ನಂತರ ಫ್ರೀಜರ್ ಬಾಕ್ಸ್ ಮರಳಿಸಿದ ನಂತರ ಸ್ವಚ್ಛತೆ ಮಾಡಿಕೊಂಡು ನಿರ್ವಹಣೆ ಮಾಡಲಾಗುತ್ತದೆ ಮತ್ತು ಅದರ ನಿರ್ವಹಣೆಗಾಗಿ ಒಬ್ಬರನ್ನು ನೇಮಕ ಮಾಡಲಾಗುತ್ತದೆ ಎಂದರು.


ಪತ್ರಿಕಾಗೋಷ್ಟಿಯಲ್ಲಿ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮೆಡಿಕಲ್ ಸೂಪರಿಂಡೆಂಟ್ ವಾದಿರಾಜ್ ಕುಲಕರ್ಣಿ, ಡಾ.ಸತೀಶ್, ಡಾ.ಚಂದ್ರಶೇಖರ್, ಭಾವಸಾರ ವಿಜನ್ ಇಂಡಿಯಾ ಪ್ರೇರಣಾ ಶಾಖೆಯ ಕಾರ್ಯದರ್ಶಿ ಯಶ್ವಂತ್ ಅಂಬೋರೆ ಹಾಗೂ ಪದಾಧಿಕಾರಿಗಳಾದ ವೆಂಕಟೇಶ್, ಪ್ರದೀಪ್, ಸಾವನ್, ವಿಜಯ್, ಚಂದನ್, ಕಾರ್ತಿಕ್ ಮತ್ತಿತರರು ಹಾಜರಿದ್ದರು. ಹೆಚ್ಚಿನ ವಿವರಕ್ಕೆ ಮೊ.: ೮೮೮೪೩೫೬೬೮೮, ೮೮೮೪೩೭೭೪೮೮ ಸಂಪರ್ಕಿಸಬಹುದಾಗಿದೆ.

Exit mobile version