Site icon TUNGATARANGA

ವಿದ್ಯಾರ್ಥಿಗಳ ಸರ್ವೋತ್ತೋಮುಖ ವಿಕಸನಕ್ಕೆ ಎನ್‌ಎಸ್‌ಎಸ್ ದಾರಿದೀಪ: ಕುಲ ಸಚಿವ ಪ್ರೊ.ಎಸ್.ಎಂ. ಗೋಪಿನಾಥ್

ಶಿವಮೊಗ್ಗ,ಜ.೧೧: ವಿದ್ಯಾರ್ಥಿಗಳ ಸರ್ವೋತ್ತೋಮುಖ ವಿಕಸನಕ್ಕೆ ಎನ್‌ಎಸ್‌ಎಸ್ (ರಾಷ್ಟ್ರೀಯ ಸೇವಾ ಯೋಜನೆ) ದಾರಿದೀಪವಾಗುತ್ತದೆ ಎಂದು ಕುವೆಂಪು ವಿವಿ ಪರೀಕ್ಷಾಂಗ ವಿಭಾಗದ ಕುಲ ಸಚಿವ ಪ್ರೊ.ಎಸ್.ಎಂ. ಗೋಪಿನಾಥ್ ಹೇಳಿದರು.


ಅವರು ಸಹ್ಯಾದ್ರಿ ಕಲಾ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ-ಐಕ್ಯೂಎಸಿಯ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಶಿಬಿರ ಉದ್ಘಾಟಿಸಿ ಮಾತನಾಡಿದರು.


ಎನ್‌ಎಸ್‌ಎಸ್ ವಿದ್ಯಾರ್ಥಿಗಳ ಬದುಕಿನಲ್ಲಿ ಒಂದು ವೇದಿಕೆ ರೂಪಿಸುತ್ತದೆ. ವ್ಯಕ್ತಿತ್ವ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ದೆದೇಶದಲ್ಲಿ ಸುಮಾರು ೪೫ ಲಕ್ಷಕ್ಕೂ ಹೆಚ್ಚು ಎನ್‌ಎಸ್‌ಎಸ್‌ನಲ್ಲಿ ಇದ್ದಾರೆ. ರಾಜ್ಯದಲ್ಲಿ ೪,೫೦೦ಕ್ಕೂ ಹೆಚ್ಚು ಸ್ವಯಂ ಸೇವಕರು ಕೆಲಸ ಮಾಡುತ್ತಿದ್ದಾರೆ. ಸೇವೆಯನ್ನೇ ಮುಖ್ಯ ಗುರಿಯನ್ನಾಗಿ ಇಟ್ಟುಕೊಂಡು ಈ ಸಂಸ್ಥೆ ಕೆಲಸ ಮಾಡುತ್ತಿದೆ. ಸಮಾಜ ಸೇವೆಗೆ ಶಿಸ್ತುಗೆ ಸಮಯ ಪ್ರಜ್ಞೆಗೆ ನಾಯಕತ್ವ ಬೆಳವಣಿಗೆಗೆ ಮತ್ತೊಂದು ಹೆಸರು ಎನ್‌ಎಸ್‌ಎಸ್ ಎಂದರು.


ಪ್ರ್ರಾಸ್ತಾವಿಕವಾಗಿ ಮಾತನಾಡಿದ, ಎನ್‌ಎಸ್‌ಎಸ್ ಘಟಕವೊಂದರ ಕಾರ್ಯಕ್ರಮಾಧಿಕಾರಿ ಡಾ. ಪ್ರಕಾಶ್ ಮರ‍್ಗನಳ್ಳಿ, ಸೇವೆ ಕೂಡ ವಾಣಿಜ್ಯವಾಗುತ್ತಿರುವ ಮೌಲ್ಯ ಕಟ್ಟುವ ಹಿಂದಿನ ದಿನಗಳಲ್ಲಿ ನಿಸ್ವಾರ್ಥದ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಸಮುದಾಯದೊಂದಿಗೆ ಸಹಬಾಳ್ವೆದೊಂದಿಗೆ ಬದುಕುವ ಕಲೆಯನ್ನು ದೇಶಪ್ರೇಮವನ್ನು ಪ್ರಚೋದಿಸುವ ಕೆಲಸವನ್ನು ಇದು ಮಾಡುತ್ತದೆ ಎಂದರು.


ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಕೆ.ಎನ್. ಮಂಜುನಾಥ್ ಮಾತನಾಡಿ, ಪರಿಸರ ಸ್ವಚ್ಚತೆಯ ಪ್ರಜ್ಞೆಯನ್ನು ಇದು ಬೆಳೆಸುತ್ತದೆ. ಶಿಸ್ತು, ಪ್ರಮಾಣಿಕತೆ, ಮನುಷ್ಯ ಪ್ರೇಮ, ಸಾಮರಸ್ಯವನ್ನು ಬೆಸೆಯುತ್ತಿದೆ. ನಮ್ಮ ವಿದ್ಯಾರ್ಥಿಗಳು ಪರಿಸರ ಸ್ವಚ್ಛತೆಯ ಜೊತೆಗೆ ಮನಸ್ಸನ್ನು ಸ್ವಚ್ಚಗೊಳಿಸಬೇಕು ಎಂದರು.


ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲ ಸಯ್ಯದ್ ಸನಾವುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಸಂಯೋಜನಾಧಿಕಾರಿ ಪರಿಸರ ನಾಗರಾಜ್, ವಾಣಿಜ್ಯ ಕಾಲೇಜಿನ ಪ್ರಾಂಶುಪಾಲೆ ಎಂ.ಕೆ.ವೀಣಾ, ಎನ್‌ಎಸ್‌ಎಸ್ ಅಧಿಕಾರಿ ಮುದುಕಪ್ಪ, ಪ್ರಾಚಾರ್ಯರಾದ ಮೇಟಿ ಮಲ್ಲಿಕಾರ್ಜುನ, ಡಾ. ಅವಿನಾಶ್, ಶುಭಮರವಂತೆ, ಕೆ.ಜಿ.ವೆಂಕಟೇಶ್ ಸೇರಿದಂತೆ ಹಲವರಿದ್ದರು.
ಎನ್‌ಎಸ್‌ಎಸ್ ಶಿಬಿರವು ಜ.೧೬ರವರೆಗೆ ನಡೆಯಲಿದ್ದು, ಅನೇಕ ಸಂಪನ್ಮೂಲ ವ್ಯಕ್ತಿಗಳು ಹಲವು ವಿಷಯಗಳಿಗೆ
ಸಂಬಂಧಿಸಿದಂತೆ ಉಪನ್ಯಾಸ ನೀಡಲಿದ್ದಾರೆ. ಸಮಾರೋಪ ಸಮಾರಂಭ ಜ.೧೬ರಂದು ನಡೆಯಲಿದೆ. (ಪೋಟೋ ಇದೆ)

Exit mobile version