ಶಿವಮೊಗ್ಗ,ಜ.10: ಮಲೆನಾಡು ಕಲಾ ತಂಡದ ವತಿಯಿಂದ ಮೊಟ್ಟ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಜ.29 ರಿಂದ 31ರವರೆಗೆ ಕುವೆಂಪು ರಂಗಮಂದಿರದಲ್ಲಿ ‘ನಾರೀ…..ನಾ‘ನೊಂದ’ “ಕಥೆ ಹೇಳುವೆ” ಎಂಬ ಶಿರ್ಷಿಕೆಯಡಿ ಮಹಿಳಾ ಪ್ರಧಾನ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ.
ನಾಟಕೋತ್ಸವದಲ್ಲಿ ಸುಮಾರು 45 ಹೆಚ್ಚು ಕಲಾವಿದರು ಭಾಗವಹಿಸುತ್ತಿದ್ದು ಈಗಾಗಲೇ ಒಂದು ತಿಂಗಳಿನಿಂದ ಇದರ ತಯಾರಿ ನಡೆದಿದೆ. ಶಿವಮೊಗ್ಗದ ಕಮಲಾ ನೆಹರೂ ಕಾಲೇಜಿನಲ್ಲಿ ಬಸವಕೇಂದ್ರದ ಡಾ. ಬಸವ ಮರುಳಸಿದ್ಧ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಪೆÇ್ರೀ.ಕಿರಣ್‍ದೇಸಾಯಿ. ಮಾನಸ ಶಿವರಾಮಕೃಷ್ಣ, ದೀಪಾಕುಬಸದ್ ಅವರು ಕ್ರಮವಾಗಿ ಮೂರು ನಾಟಕಗಳ ಸಂಭಾಷಣೆಯನ್ನು ಹೇಳುವುದರ ಮೂಲಕ ವಿಭಿನ್ನವಾಗಿ ಚಾಲನೆ ದೊರೆತಿದೆ ಎಂದು ನಿರ್ದೇಶಕ ಗಣೇಶ್ ಆರ್. ಕೆಂಚನಾಳ ಇಂದು ಮೀಡಿಯಾ ಹೌಸ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಾಟಕೋತ್ಸವದ ಯಶಸ್ವಿಗೆ ಮಹಿಳೆಯರೇ ಒಳಗೊಂಡಂತ ಒಂದು ಸಮಿತಿಯನ್ನು ರಚಿಸಿದ್ದು. ಅಧ್ಯಕ್ಷರಾಗಿ ದಿವ್ಯಪ್ರೇಮ್, ಕಾರ್ಯದರ್ಶಿಯಾಗಿ, ರೇಣುಕಾ ನಾಗರಾಜ್, ಖಜಾಂಚಿಯಾಗಿ, ಶಕುಂತಲ ಜಗದೀಶ್ ಸೇರಿದಂತೆ ಹಲವು ಮಹಿಳಾ ಪ್ರಮುಖರು ಮತ್ತು ಮಹಿಳಾ ಸಂಘಗಳು ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಜ.29ರಂದು ‘ಉಡು-ತಡಿ’…ನಾಟಕ ಪ್ರದರ್ಶನಗೊಳ್ಳಲಿದ್ದು, ಮಂಜುಳಾ ಬಾದಾಮಿ ನಿರ್ದೇಶನವಿದೆ. 30ರಂದು ರಾಮ ಸುವ್ರಾಯ್ ಸೇಟ್ ರಚನೆಯ ಹಾಗೂ ಗಣೇಶ್ ಆರ್. ಕೆಂಚನಾಳ ನಿರ್ದೇಶನದ ‘ಅಂಬೆ’ ಹಾಗೂ 31ರಂದು ಕರಿಬಸವಯ್ಯ ರಚನೆಯ “ದಕ್ಷಿಣಾಧೀಶ್ವರಿ” ಕೆಳವಿ ರಾಣಿಚೆನ್ನಮ್ಮ ನಾಟಕ ಪ್ರದರ್ಶನಗೊಳ್ಳಲಿದೆ. ಪ್ರತಿದಿನ ಸಂಜೆ 7ಗಂಟೆಗೆ ನಾಟಕ ಪ್ರದರ್ಶನವಿದ್ದು, ಪ್ರತಿ ನಾಟಕಕ್ಕೆ 99 ರೂ. ಗೌರವ ಪ್ರವೇಶವಿದೆ. ಹೆಚ್ಚಿನ ಮಾಹಿತಿಗಾಗಿ 9481691337 ಅಥವಾ 9902356019ರಲ್ಲಿ ಸಂಪರ್ಕಿಬಹುದು ಎಂದರು.
ಮಲೆನಾಡು ಕಲಾ ತಂಡದಿಂದ ಈಗಾಗಲೇ “ಚಮ್ಮಾವುಗೆ, ಮಹಾಕ್ರಾಂತಿ, ಬಸವನೆಡಗೆ, ಭಾಮತಿ, ಶಾಲಾಭಂಜಿಕ, ಭಾರತಾಂಬೆ, ಕೆರೆಗಹಾರ, ಜಲಗಾರ, ಮಾತೆ ಮಂಡೋಧಲಿ, ಅತಿಮಾನುಷ, ಸಾಯೋತನಕ ಕಾಯಬೇಡ, ಸೇರಿದಂತೆ ಹಲವು ನಾಟಕಗಳು ಶಿವಮೊಗ್ಗ, ಸಾಣೆಹಳ್ಳಿ, ಧಾರವಾಡ, ಉಡುಪಿ, ಬೆಂಗಳೂರು, ರಂಗಾಯಣ, ಸೇರಿದಂತೆ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನಗೊಂಡಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದಿವ್ಯ ಪ್ರೇಮ್, ರೇಣುಕಾ ನಾಗರಾಜ್, ಬಿ.ವಿ.ತಿಪ್ಪಣ್ಣ, ಮಹಾದೇವನ್ ಉಪಸ್ಥಿತರಿದ್ದರು.