Site icon TUNGATARANGA

ರಾಜ್ಯದಲ್ಲಿ ಮೊದಲಬಾರಿಗೆ ಶಾಲಾ ಮಕ್ಕಳಿಗೆ ಶಿವಮೊಗ್ಗದಲ್ಲಿ ಐಡಿಯಾಥಾನ್ ಆಯೋಜನೆ


‘Idea rules the world’ ಜಗತ್ತನ್ನು ಮುಂದುವರೆಸುವುದು ಸೃಜನಶೀಲ ಆಲೋಚನೆಗಳು ಮಾತ್ರ.
     ಮುಂದಿನ ಸಮಾಜವನ್ನು, ನಮ್ಮ ಮನೆಯಾದ ಭುವಿಯನ್ನು, ಜೀವ ಜಗತ್ತಿನ ಚೈತನ್ಯಗಳನ್ನು ಕಾಪಾಡುವ ಕೆಲಸ ಪ್ರತಿ ಮಾನವರದ್ದಾಗಿದೆ. ಇದಕ್ಕೆಲ್ಲಾ ಬೇಕಿರುವುದು ಸೃಜನಶೀಲತೆ. ಪ್ರಸ್ತುತ ವರ್ಷ ಮಕ್ಕಳ ಸೃಜನಶೀಲತೆಯನ್ನು ಪ್ರೋತ್ಸಾಹಿಸಲು ಡಯಟ್ ಶಿವಮೊಗ್ಗ, ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್ ಮತ್ತು ಶಿವಮೊಗ್ಗ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆಗಳು ಐಡಿಯಾಥಾನ್ ಸ್ಪರ್ಧೆಯನ್ನು ದಿ:11/01/24ರ   ಬೆಳಗ್ಗೆ 10.00 ಕ್ಕೆ ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್ ಜ್ಯಾವಳಿ, ಶಿವಮೊಗ್ಗ ಇಲ್ಲಿ ಹಮ್ಮಿಕೊಳ್ಳಲಾಗಿರುತ್ತದೆ.

(ಮಕ್ಕಳ ಐಡಿಯಾಗಳಿಗೆ ಯಾವ ನಿಯಂತ್ರಣ, ಯಾವ ಬಂಧನಗಳಿರುವುದಿಲ್ಲ. ಇದು ಸಾಧ್ಯವಾ ? ಎಂದು ಅನುಮಾನಿಸಬೇಕಿಲ್ಲ. ಯಾವ ಐಡಿಯಾವನ್ನೂ ನಾವು ವಿಮರ್ಶಿಸುವುದಿಲ್ಲ).


ಈ ಸ್ಪರ್ಧೆಯಲ್ಲಿ ಭಾಗವಹಿಸಲು ಜಿಲ್ಲೆಯ ಖಾಸಗೀ ಮತ್ತು ಸರ್ಕಾರೀ ಶಾಲಾ ಮಕ್ಕಳನ್ನು ಆಹ್ವಾನಿಸಲಾಗಿದೆ. ಸರ್ಕಾರೀ ಶಾಲೆಗಳಿಗೆ ಬಂದಾಗ ಒಂದು ತಾಲ್ಲೂಕಿನಿಂದ ಮೂರು ಹಿರಿಯ ಪ್ರಾಥಮಿಕ ಶಾಲೆಗಳು, ಮೂರು ಪ್ರೌಢ ಶಾಲೆಗಳು ಭಾಗವಹಿಸಲು ಅವಕಾಶವಿದೆ. ಹಿರಿಯ ಪ್ರಾಥಮಿಕ ಶಾಲೆಯ ಒಂದು ತಂಡದಲ್ಲಿ ಆರು ಮತ್ತು ಏಳನೇ ತರಗತಿಯ ಒಬ್ಬೊಬ್ಬ

ವಿದ್ಯಾರ್ಥಿ ಇರುತ್ತಾರೆ. (ಒಬ್ಬ ವಿದ್ಯಾರ್ಥಿ ಮತ್ತು ಒಬ್ಬ ವಿದ್ಯಾರ್ಥಿನಿ) ಹಾಗೆಯೇ ಪ್ರೌಢ ಶಾಲೆಯ ಒಂದು ತಂಡದಲ್ಲಿ ಎಂಟು ಮತ್ತು ಒಂಬತ್ತನೆಯ ತರಗತಿಯ ತರಗತಿಯ ಒಬ್ಬೊಬ್ಬ ವಿದ್ಯಾರ್ಥಿ ಇರುತ್ತಾರೆ. (ಒಬ್ಬ ವಿದ್ಯಾರ್ಥಿ ಮತ್ತು ಒಬ್ಬ ವಿದ್ಯಾರ್ಥಿನಿ). ಅಲ್ಲಿಗೆ ಒಂದು ತಾಲ್ಲೂಕಿನಿಂದ ಆರು ಶಾಲೆಗಳ (ಮೂರು ಹಿ.ಪ್ರಾ, ಮೂರು ಪ್ರೌಢ) ಮತ್ತು ಹನ್ನೆರಡು ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಇವರಲ್ಲಿ ಆರು ಜನ ಬಾಲಕರು ಮತ್ತು ಆರು ಜನ ಬಾಲಕೀಯರು ಇರುತ್ತಾರೆ.


ಕಾರ್ಯಾಗಾರಕ್ಕೆ ಶಾಲಾ ಮಕ್ಕಳನ್ನು ಒಬ್ಬ ಮಾರ್ಗದರ್ಶಿ ಶಿಕ್ಷಕರು ಕರೆತರಬೇಕಾಗುತ್ತದೆ. ಬಂದು ಹೋಗುವ ಭತ್ಯೆಯನ್ನು ನಿಯಮಾನುಸಾರ ಪಾವತಿಸಲಾಗುವುದು. ಆಯ್ಕೆಯಾದ ಮೂರು ಉತ್ತಮ ಐಡಿಯಾಗಳಿಗೆ ಬಹುಮಾನಗಳಿರುತ್ತವೆ. ಹಾಗೂ ಮಕ್ಕಳ ಎಲ್ಲಾ ಐಡಿಯಾಗಳನ್ನು ಸಂಸ್ಥೆಯ ವೆಬ್ ಸೈಟ್, ಓಪನ್ ಮೈಂಡ್ ಶಾಲಾ ವೆಬ್ ಸೈಟ್ ಅಲ್ಲಿ ಐಡಿಯಾಗಳನ್ನು ಡಿಜಿಟಲೀಕರಣಗೊಳಿಸಲಾಗುವುದು. ಈ ಐಡಿಯಾಗಳಿಗೆ ಆಯಾ ಮಕ್ಕಳದೇ ಯಜಮಾನ್ಯ ಇರುವಂತೆ ಮುಂದೊಂದು ದಿನ ಮಕ್ಕಳು ತಮ್ಮ ಆಲೋಚನೆಗಳ ಬಗ್ಗೆ ಕೆಲಸ ಮಾಡಲು ಸಹಾಯವಾಗುವಂತೆ ವೆಬ್ ಪೇಜ್ ಸೃಜಿಸಲಾಗುತ್ತದೆ. ಮಕ್ಕಳು ತಮ್ಮ ಸ್ವಂತ ಆಲೋಚನೆಗಳಿಂದ ಕೆಲಸ ನೀಡುವವರಾಗಲಿ ಎಂಬ ಆಶಯ ಆಯೋಜಕರದ್ದಾಗಿರಯತ್ತದೆ.


ಈ ಸ್ಪರ್ಧೆಯ ನಂತರ ಬಹುಮಾನ ವಿತರಣೆಯನ್ನು ಮಾನ್ಯ ವಿಧಾನ ಪರಿಷತ್ ಶಾಸಕರಾದ ಶ್ರೀ ಎಸ್. ರುದ್ರೇಗೌಡರು ಮಾಡಲಿದ್ದು, ಅಧ್ಯಕ್ಷತೆಯನ್ನು ಶಿಕ್ಷಣ ಇಲಾಖೆಯ ಅಭಿವೃದ್ಧಿ ಉಪನಿರ್ದೇಶಕರಾದ ಶ್ರೀ ಬಸವರಾಜಪ್ಪ ಬಿ.ಆರ್ ವಹಸುತ್ತಾರೆ. ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಶ್ರೀ.ಎನ್.ಗೋಪಿನಾಥ ಸ್ಪರ್ಧೆಯನ್ನು  ಉದ್ಘಾಟಿಸಲಿದ್ದು,¸ ಸಹಾಕಾರ್ಯದರ್ಶಿ ಶ್ರೀ ಜಿ.ವಿಜಯಕುಮಾರ್, ಅಡ್ವಾನ್ಸ್ಡ್ ಸ್ಕಿಲ್ ಅಕಾಡೆಮಿ ಅಥವಾ ಕಾರೈನಿರ್ವಾಹಕಿ ಶ್ರೀಮತಿ. ಸವಿತಾ ಮಾಧವ, ಒಪನ್ ಮೈಂಡ್ಸ್ ಶಾಲೆಯ ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಕಿರಣ್ ಕುಮಾರ್ ಕೆ ಇವರು ಉಪಸ್ಥಿತರಿರುತ್ತಾರೆ. . ಕರಿಯಕರಮಾಡ ಹೆಚ್ಚಿನ ಮಹಿಟಿಗಿ ಸಂಪರ್ಕಕಿಸಿ, (1) ಅಮೃತಾ  -7996498415  (2) ಚೈತ್ರಾ  – 9036160204.

Exit mobile version