Site icon TUNGATARANGA

ಅಪ್ರಾಪ್ತರು ವಾಹನ ಚಲಾಯಿಸಿದಲ್ಲಿ 50,000 ದಂಡ…!

ಉಳ್ಳಾಲ: ಕೊರೊನಾ ಸಂಕಷ್ಟ ಹಿನ್ನೆಲೆಯಲ್ಲಿ ಮಾನವೀಯತೆ ತೋರಿಸಿದ್ದೇವೆ. ಇನ್ನು ಮುಂದೆಯೂ ಅಪ್ರಾಪ್ತರು ವಾಹನ ಚಲಾಯಿಸುವುದು ಕಂಡುಬಂದಲ್ಲಿ ಸರಕಾರ ನಿಗದಿಪಡಿಸಿದ ರೂ. 50,000 ದಂಡವನ್ನು ಕಟ್ಟುನಿಟ್ಟಾಗಿ ಪಾವತಿಸಬೇಕಾದೀತು ಎಂದು ಉಳ್ಳಾಲ ಇನ್ಸ್ ಪೆಕ್ಟರ್ ಸಂದೀಪ್ ಜಿ ಹೇಳಿದರು.

ಅವರು ತೊಕ್ಕೊಟ್ಟು ಕ್ಲಿಕ್ ಸಭಾಂಗಣದಲ್ಲಿ ಸೋಮವಾರವ ನಡೆದ ಉಳ್ಳಾಲ ಪೊಲೀಸ್ ಠಾಣೆಯ ಅಪರಾಧ ತಡೆ ಮಾಸಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕೊರೊನಾ ಸಂಕಷ್ಟ ದಿಂದ ದುಡಿಮೆ ಇಲ್ಲದೆ ಜನ ತೊಂದರೆಗೀಡಾಗಿದ್ದಾರೆ. ಈ ಸಂದರ್ಭ ವಾಹನ ಸಂಚಾರದ ಕಾನೂನಿನಲ್ಲಿ ಮಾನವೀಯತೆ ತೋರಿಸಿದ್ದೇವೆ. ಆದರೆ ಇನ್ನು ಮುಂದಿನ ದಿನಗಳಲ್ಲಿ ವಾಹನದ ಆರ್.ಸಿ, ಡಿ.ಎಲ್, ಇನ್ಶುರೆನ್ಸ್ , ಎಮಿಷನ್ ಇಲ್ಲದೇ ಇದ್ದಲ್ಲಿ ಸರಕಾರ ನಿಗದಿ ಮಾಡಿರುವ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ಹೆಚ್ಚಾಗಿ ಅಪ್ರಾಪ್ತರು ವಾಹನ ಸಂಚಾರ ನಡೆಸುತ್ತಿರುವುದು ಕಂಡುಬರುತ್ತಿದೆ. ಇದರಿಂದ ಅವರ ಜೀವಕ್ಕೂ ಅಪಾಯ, ಹೊರಗಿನವರಿಗೂ ಅಪಾಯ. ಈ ನಿಟ್ಟಿನಲ್ಲಿ ಅಂತಹವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡು ಸರಕಾರ ನಿಗದಿ ಮಾಡಿದ ರೂ.50,000 ದಂಡವನ್ನು ಹಾಕಲಾಗುವುದು ಎಂದು ಎಚ್ಚರಿಸಿದ ಅವರು ವಂಚನೆ ಪ್ರಕರಣಗಳು ಅಧಿಕವಾಗುತ್ತಿದೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಿದೆ. ಮೊಬೈಲ್ ಮೂಲಕವೂ ಎಟಿಎಂ ನಂಬರ್ ಕೇಳುವ ಜಾಲವೂ ಅಧಿಕವಾಗಿದೆ. ಮನೆ ಅಥವಾ ವ್ಯಾಪಾರ ಕೇಂದ್ರಗಳಲ್ಲಿ ಮಾಲೀಕರು ಸಿಸಿಟಿವಿ ಅಳವಡಿಸಿದಲ್ಲಿ ಪ್ರಕರಣಗಳು ನಡೆಯದಂತೆಯೂ, ನಡೆದರೂ ಅಪರಾಧಿಗಳನ್ನು ತಕ್ಷಣ ಪತ್ತೆಹಚ್ಚಲು ಸಾಧ್ಯ. ಈ ಮೂಲಕ ಕ್ಯಾಮರಾಗಳಿಗೆ ಒನ್ ಟೈಂ ಇನ್ವೆಸ್ಟ್ ಮೆಂಟ್ ಮಾಡಿದಲ್ಲಿ ಇಡೀ ಊರನ್ನು ಸುರಕ್ಷಿತವಾಗಿಸಬಹುದು. ವಾಹನ ಚಲಾವಣೆ ಸಂದರ್ಭ ಪೊಲೀಸರಿಗಾಗಿ ಹೆಲ್ಮೆಟ್ ಧರಿಸದರಿ. ಜೀವನ ಕಾಪಾಡುವ ಸಲುವಾಗಿ ಹೆಲ್ಮೆಟ್ ಧರಿಸಿ. ಟಿಂಟೆಡ್ ಗಾಜು ಇರುವ ವಾಹನಗಳಲ್ಲಿ ಗಾಂಜಾ, ಕಿಡ್ನಾಪ್ , ಅಪರಾಧ ಕೃತ್ಯಗಳು ನಡೆಯುತ್ತವೆ. ಉಳ್ಳಾಲ ಭಾಗದಲ್ಲಿ ಕೆಲ ವಾಹನಗಳು ಟಿಂಟ್ ಹಾಕಿ ತಿರುಗುತ್ತಿರುವುದು ಹೆಚ್ಚಾಗಿ ಕಂಡುಬಂದಿದೆ. ಅಂತವರ ವಿರುದ್ಧ ಕಠಿಣ ಕಾನೂನಿನಡಿ ಶಿಕ್ಷೆ ಖಂಡಿತ ಎಂದು ಎಚ್ಚರಿಸಿದರು.

ಈ ಸಂದರ್ಭ ಸಬ್ ಇನ್ಸ್ ಪೆಕ್ಟರ್ ಗಳಾದ ಶಿವಕುಮಾರ್, ರೇವಣ್ಣ ಸಿದ್ದಪ್ಪ, ವರ್ತಕರ ಸಂಘದ ಅಧ್ಯಕ್ಷ ಚಂದ್ರಕಾಂತ್, ಪ್ರ. ಕಾ ಜೀವನ್ ಕುಮಾರ್ ತೊಕ್ಕೊಟ್ಟು, ಉದ್ಯಮಿ ಲತೀಫ್, ರಹಿಮಾನ್ , ಅಬ್ದುಲ್ ಕರೀಂ, ದೇವದಾಸ್ ಟೈಲರ್ , ದೇವದಾಸ್ ಕೊಲ್ಯ, ರಮೇಶ್ ಮಾಡೂರು, ಸುಧಾಕರ್ , ರೈಮಂಡ್ ಡಿಸೋಜ, ಮನೋಜ್ ಶೆಟ್ಟಿ, ಅಲಿಯಬ್ಬ ಮುಂತಾದವರು

Exit mobile version