Site icon TUNGATARANGA

ನಾವು ಕರ ಸೇವಕರು ನಮ್ಮನ್ನು ಬಂಧಿಸಿ ಘೋಷಣೆ ಮೂಲಕ ಬಿಜೆಪಿ ಬೃಹತ್ ಪ್ರತಿಭಟನೆ/ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

ಹುಬ್ಬಳ್ಳಿಯ ಕರಸೇವಕನ ಬಂಧನ ಖಂಡಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಇಂದು ಖಾಸಗಿ ಬಸ್‌ಸ್ಟ್ಯಾಂಡ್ ಬಳಿ ಪ್ರತಿ ಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿ ನಾವು ಕರ ಸೇವಕರು, ನಮ್ಮನ್ನು ಬಂಧಿಸಿ ಎಂದು ಘೋಷಣೆ ಮಾಡಿದರು.


ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿ ನಂತರ ಕರಸೇವಕರನ್ನು ಬಂಧಿಸಿದಂತೆ ನಮ್ಮನ್ನು ಬಂಧಿಸಿ ಎಂಬ ಘೋಷಣೆ ಕೂಗುತ್ತ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಯವರ ಕಚೇರಿಗೆ ನುಗ್ಗಿದ್ದರು. ಪೊಲೀಸರ ತಡೆಯ ನಡುವೆಯೂ ಅವರು ಕಚೇರಿಗೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀ ಸರು ಮಾಜಿ ಸಚಿವ ಈಶ್ವರಪ್ಪ, ಶಾಸಕರಾದ ಎಸ್.ಎನ್. ಚೆನ್ನಬಸಪ್ಪ, ಭಾನುಪ್ರಕಾಶ್ ಮತ್ತಿತರರನ್ನು ಅವರನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದರು.


ಈ ಸಂದರ್ಭದಲ್ಲಿ ಮಾತನಾಡಿದ, ಶಾಸಕ ಎಸ್.ಎನ್.ಚೆನ್ನಬಸಪ್ಪ ಕರಸೇವಕ ಬಂಧನವನ್ನು ತೀವ್ರವಾಗಿ ಖಂಡಿಸಿದರು.ಈ ಹಿಂದೆ ಕರಸೇವಕ ಶ್ರೀಕಾಂತ್ ಪೂಜಾರಿ ಒಳ್ಳೆಯ ನಡೆತೆಯ ಮೇಲೆ ಅವರ ಮೇಲಿದ್ದ ಕೇಸನ್ನು ವಾಪಾಸ್ಸು ತೆಗೆಯಲಾಗಿದೆ. ಕಾಂಗ್ರೆಸ್ ಸರ್ಕಾರವೇ ಶ್ರೀಕಾಂತ್ ಮೇಲಿದ್ದ ರೌಡಿಶೀಟ್‌ನ್ನು ತೆಗೆದಿದ್ದು, ಈಗ ಕರಸೇವಕ ಎಂದು ಬಂಧಿಸಲಾಗಿದೆ. ಇದು ಹಿಂದುತ್ವ ವಿರೋಧಿ ನೀತಿಯಾಗಿದೆ. ಹಿಂದೂ ಧರ್ಮವನ್ನು ಹೊಡೆಯಲು ಯಾವ ಕಾರಣಕ್ಕೂ ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರ ತೊಘಲಕ್ ನೀತಿ ಅನುಸರಿಸುತ್ತಿದೆ ಎಂದ ಅವರು, ಹರಿಪ್ರಸಾದ್ ಹೇಳಿಕೆಯನ್ನು ಖಂಡಿಸಿದರು.


ಕಾಂಗ್ರೆಸ್ಸಿಗರು ಬಾಬರ್ ಸಂಸ್ಕೃತಿಯವರು ಹಾಗಿ ದ್ದಾರೆ. ಇದನ್ನು ನಾಶಮಾಡಲೆಂದೆ ನಾವು ಬದುಕಿ ದ್ದೇವೆ. ಇವರಿಗೆ ತಾಕತ್ತಿದ್ದರೆ ಇದನ್ನು ತಡೆಯಬೇಕು. ಕಾಂಗ್ರೆಸ್ಸಿಗರು ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಿಸಲು ಬಿಡಲಿಲ್ಲ. ಒಂದು ರೀತಿಯಲ್ಲಿ ರಾಷ್ಟ್ರದ್ರೋಹಿಗಳಾಗಿ ದ್ದಾರೆ. ಆಯೋಧ್ಯೆಯಲ್ಲಿ ಭವ್ಯವಾಗಿ ರಾಮಮಂದಿರ ಕಟ್ಟಲಾಗಿದೆ ಎಂಬ ಹೊಟ್ಟೆಹುರಿಯಿಂದ ಈ ರೀತಿ ವರ್ತಿಸುತ್ತಿದ್ದಾರೆ ಎಂದರು.


ಪ್ರತಿಭಟನೆಯಲ್ಲಿ ಶಾಸಕರಾದ ಎಸ್.ರುದ್ರೇಗೌಡ, ಪ್ರಮುಖರಾದ ಹರತಾಳು ಹಾಲಪ್ಪ, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಶಿವರಾಜ್, ಗಿರೀಶ್ ಪಟೇಲ್, ಹರಿಕೃಷ್ಣ, ಜಗದೀಶ್, ಎಸ್.ದತ್ತಾತ್ರಿ, ಈ ವಿಶ್ವಾಸ್, ಬಳ್ಳಕೆರೆ ಸಂತೋಷ್, ವಿನ್ಸೆಂಟ್, ಮಾಲತೇಶ್, ಸುರೇಖಾ, ಸೀತಾಲಕ್ಷ್ಮೀ, ಆರತಿ ಮತ್ತಿತರರು ಇದ್ದರು.

Exit mobile version