Site icon TUNGATARANGA

ಜ.07 ರಂದು ಮಲೆನಾಡು ಮುದ್ರಕರ ಸಂಘದ ವತಿಯಿಂದ ಮುದ್ರಕರ ಹಬ್ಬ ಆಚರಣೆ : ಸಂಘದ ಅಧ್ಯಕ್ಷ ಎಂ. ಮಾಧವಚಾರ್ ವಿವರಣೆ

ಶಿವಮೊಗ್ಗ,ಜ.೦೪:ಮಲೆನಾಡು ಮುದ್ರಕರ ಸಂಘದ ವತಿಯಿಂದ ಜ.೦೭ರಂದು ಅಂಬೇಡ್ಕರ್ ಭವನದಲ್ಲಿ ಮುದ್ರಕರ ಹಬ್ಬವನ್ನು ದಿನವಿಡಿ ಆಚರಿಸಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಎಂ. ಮಾಧವಚಾರ್ ಹೇಳಿದರು.


ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮುದ್ರಕರ ಹಬ್ಬವು ಬೆಳಿಗ್ಗೆ ೯:೩೦ಕ್ಕೆ ನಾಗರಿಕ ಹಿತರಕ್ಷಣಾ ಸಮಿತಿಯ ಕೆ.ವಿ.ವಸಂತಕುಮಾರ್ ಉದ್ಘಾಟಿಸುವರು. ಪುರುಷರ ಕ್ರೀಡಾಕೂಟವನ್ನು ಸಮುದಾಯ ಬಳಗದ ಕೆ.ಜಿ.ವೆಂಕಟೇಶ್ ಉದ್ಘಾಟಿಸುವರು. ಕ್ರೀಡಾಕೂಟಕ್ಕೆ ನೈಟಿಂಗಲ್ ರಾಷ್ಟ್ರೀಯ ಪ್ರಶಸ್ತಿ ಪಡೆದ ನಾಗರತ್ನ ಶಂಕರ್ ಚಾಲನೆ ನೀಡುವರು ಎಂದರು.


ಬೆಳಗಿನ ಕಾರ್ಯಕ್ರಮದಲ್ಲಿ ಮುದ್ರಕರಿಗಾಗಿ ಮಾತ್ರ ಸಂಪೂರ್ಣ ಕುಟುಂಬ ಸಹಿತ ಪಾಲ್ಗೊಳ್ಳಬಹುದಾದ ವಿವಿಧ ಕ್ರೀಡೆಗಳು, ಕ್ವಿಜ್, ಮುದ್ರಣ ಸಂಬಂಧಿ ವಿವಿಧ ಸ್ಪರ್ಧೆಗಳು ಇದ್ದು, ಈ ಸಂದರ್ಭದಲ್ಲಿ ನೆರವೇರಲಿದ್ದು ಸ್ಥಳದಲ್ಲಿಯೇ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ನೀಡಲಾಗುತ್ತದೆ.
ಬೆಂಗಳೂರಿನ ಜೂನಿಯರ್ ಪುನೀತ್ ರಾಜ್‌ಕುಮಾರ್‌ರವರೊಡನೆ ಫೋಟೋ ತೆಗೆದುಕೊಳ್ಳಲು ಮುದ್ರಕರ ಕುಟುಂದವರಿಗೆ ಅವಕಾಶವಿರುತ್ತದೆ. ಅಲ್ಲದೆ ಜೂನಿಯರ್ ಪುನೀತ್ ರಾಜ್‌ಕುಮಾರ್‌ರವರಿಂದ ಪುನೀತ್ ಅಭಿನಯದ ಪ್ರದರ್ಶನ ಇತ್ಯಾದಿಗಳನ್ನು ಒಳಗೊಂಡ ಮನರಂಜನೆ ಕಾರ್ಯಕ್ರಮಗಳು ಇರುತ್ತದೆ ಎಂದರು.


ಕಾರ್ಯದರ್ಶಿ ಗಣೇಶ್ ಬಿಳಗಿ ಮಾತನಾಡಿ, ಸಂಜೆ ೫:೦೦ ಗಂಟೆಗೆ ಬೆಂಗಳೂರಿನ ಸವಿಗಾನ ತಂಡದಿಂದ ’ಮೆಲ್ಲುಸಿರೇ ಸವಿಗಾನ’ ಎಂಬ ವಿಶೇಷ ಹಳೆಯ ಕನ್ನಡ ಚಿತ್ರಗೀತೆಗಳ ಗಾಯನ ಇರುತ್ತದೆ. ಪ್ರತಿ ಗಂಟೆಗೊಮ್ಮೆ ಹಾಜರಿದ್ದವರಲ್ಲಿ ಮಾತ್ರ ಅದೃಷ್ಟವಂತರ ಆಯ್ಕೆಯನ್ನು ಡ್ರಾ ಮೂಲಕ ಆಯ್ಕೆ ಮಾಡಿ ಸಾರ್ವಜನಿಕರಿಗೂ ಬೆಳ್ಳಿ ನಾಣ್ಯ ಬಹುಮಾನ ನೀಡಲಾಗುವುದು ಎಂದರು.


ಸಮಾರೋಪ ಸಮಾರಂಭವು ೬:೩೦ಕ್ಕೆ ಆರಂಭವಾಗಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಂಘದ ಅಧ್ಯಕ್ಷರಾದ ಎಂ.ಎನ್. ಸುಂದರ್‌ರಾಜ್‌ರವರು ಹಾಗೂ ಹಿರಿಯ ಪತ್ರಕರ್ತ ಎಸ್. ಚಂದ್ರಕಾಂತ್ ಅಭಿನಂದನಾ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ವೇದಿಕೆಯಲ್ಲಿ ಪ್ರಮುಖರಾದ ಮುದ್ರಣಕಾರರ ಸಂಘದ ರಾಜ್ಯ ವಲಯ ಸಂಚಾಲಕರಾದ ಕೆ.ಆರ್. ಚಂದ್ರಪ್ಪ, ಹಾಸನ ಮುದ್ರಕ ಸಂಘದ ಕಿರಣ್ ಗೌಡ ಕಿರಗಡಲು, ಬೆಂಗಳೂರಿನ ಸ್ಮಿತ್ ಗ್ರಾಫಿಕ್ಸ್ ಲಿಂಕ್‌ನ ಬಿ.ವಿ. ಮೋಹನ್ ಉಪಸ್ಥಿತರಿರುತ್ತಾರೆ ಎಂದರು.


ಈ ಸಂದರ್ಭದಲ್ಲಿ ಮಲೆನಾಡು ವ್ಯಾಪ್ತಿಯ ಹಿರಿಯ ಮುದ್ರಕರಿಗೆ ಹಾಗೂ ಮುದ್ರಣ ಕಾರ್ಮಿಕರುಗಳಿಗೆ ಸನ್ಮಾನ, ಮುದ್ರಕ ಕುಟುಂಬದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಎಂ.ಮಾಧವಾಚಾರ್‌ರವರು ವಹಿಸಲಿದ್ದಾರೆ ಎಂದರು.


ಸಾರ್ವಜನಿಕರಿಗೆ ಉಚಿತ ಪ್ರವೇಶವಿರುತ್ತದೆ. ಅಲ್ಲದೆ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಮುದ್ರಕ ಹಬ್ಬದ ಸಿಹಿ ಹಂಚಿಕೆ ಇರುತ್ತದೆ. ಮೇಲ್ಕಂಡ ಮುದ್ರಕ ಹಬ್ಬದ ಎಲ್ಲಾ ಕಾರ್ಯಕ್ರಮಗಳಲ್ಲೂ ಮಲೆನಾಡು ವ್ಯಾಪ್ತಿಯ ಮುದ್ರಕರು ಕುಟುಂಬ ಸಹಿತ ಹಾಗೂ ಸಾರ್ವಜನಿಕರು ಸಂಜೆ ೫ ಗಂಟೆಗೆ ಮೆಲ್ಲುಸಿರೆ ಸವಿಗಾನ ಸವಿಯಲು ಆಗಮಿಸಿ, ಯಶಸ್ವಿಗೊಳಿಸಿಕೊಡಬೇಕಾಗಿ ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಬಿ.ಇ.ರವಿ, ಮಂಜುನಾಥ್ ಹೆಚ್.ಎಂ., ಮೋಹನ್ ಕೆ.ಟಿ., ರಮೇಶ್ ಎನ್.ಎಸ್., ಯೋಗೀಶ್ ಎನ್.ಜಿ., ಗಿರೀಶ್‌ಕುಮಾರ್ ಎಸ್.ಎಸ್., ಮುರುಳಿ ಕೃಷ್ಣ ಹೆಚ್.ಸಿ., ಚಂದ್ರಶೇಖರ್ ಬಿ.ಆರ್. ಇದ್ದರು.

Exit mobile version