Site icon TUNGATARANGA

ವಿಮಾ ಪರಿಹಾರ ಪಾವತಿಸಲು ನಿರಾಕರಿಸಿದಕ್ಕೆ ಓರಿಯಂಟಲ್ ಇನ್ಸೂರೆನ್ಸ್ ಕಂಪನಿಗೆ ಬಿದ್ದ ದಂಡವೆಷ್ಟು ?

ಶಿವಮೊಗ್ಗ, ಜನವರಿ 04, : ಓರಿಯಂಟಲ್ ಇನ್ಸೂರೆನ್ಸ್ ಕಂಪನಿಯವರ ವಿರುದ್ಧ ಸೇವಾನ್ಯೂನ್ಯತೆ ಕುರಿತು ಆಪಾದಿಸಿ ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರ ಪೀಠವು ಅರ್ಜಿದಾರರಿಗೆ ಪರಿಹಾರ ಒದಗಿಸುವಂತೆ ಆದೇಶಿಸಿದೆ.


 ನಗರದ ವಿನೋಬನಗರ ವಾಸಿ ವೇದಾವತಿ ಜಿ.ಆರ್. ಎಂಬುವವರ ಪತಿ ದ್ವಿಚಕ್ರ ವಾಹನ ಅಫಘಾತದಲ್ಲಿ ಮರಣ ಹೊಂದಿದ್ದು, ಈ ವಾಹನಕ್ಕೆ ರೂ. 15.00 ಲಕ್ಷಗಳ ಪರಿಹಾರದ ವಿಮಾ ಯೋಜನೆಯ ಪಾಲಿಸಿ ಪಡೆದಿರುತ್ತಾರೆ. .

 ಆದರೆ ಓರಿಯಂಟಲ್ ಇನ್ಸೂರೆನ್ಸ್ ಕಂಪನಿಯವರು ನಾನಾ ಕಾರಣಗಳನ್ನು ನೀಡಿ ವಿಮಾ ಪರಿಹಾರ ಪಾವತಿಸಲು ನಿರಾಕರಿಸಿ ಸೇವಾನ್ಯೂನ್ಯತೆ ತೋರಿದ್ದು, ಈ ಪ್ರಕರಣವು ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಸೂಕ್ತ ಪರಿಹಾರ ಕೋರಿ ದಾಖಲು ಮಾಡಿರುತ್ತಾರೆ.


ಆಯೋಗವು ಎಲ್ಲಾ ಅಂಶಗಳನ್ನು ಪರಿಶೀಲಿಸಿ ಕಂಪನಿಯೂ ನೀಡಿರುವ ಕಾರಣವು ಸೂಕ್ತವಲ್ಲ ಮತ್ತು ಸೇವಾನ್ಯೂನತೆ ಎಂದು ಪರಿಗಣಿಸಿ ವಿಮಾ ಕಂಪನಿಯುವ ಶ್ರೀಮತಿ ವೇದಾವವತಿ ಜಿ.ಆರ್. ಎಂಬುವವರಿಗೆ ರೂ. 15.00 ಲಕ್ಷಗಳ ವಿಮಾ ಪರಿಹಾರ ಮೊತ್ತವನ್ನು ವಾರ್ಷಿಕ ಶೇ. 9% ಬಡ್ಡಿಯೊಂದಿಗೆ ಪಾವತಿಸಬೇಕೆಂದು ಮತ್ತು ಫಿರ್ಯಾದುದಾರರಿಗೆ ಉಂಟಾದ ಮಾನಸಿಕ

ಹಾನಿಗೆ ರೂ. 40,000/-ಗಳ ಪರಿಹಾರವನ್ನು ಪಾವತಿಸಬೇಕಂದು ಹಾಗೂ ನ್ಯಾಯಾಲಯದ ಖರ್ಚುವೆಚ್ಚಗಳನ್ನು ಆದೇಶವಾದ 45 ದಿನಗಳೊಳಗಾಗಿ ಪಾವತಿಸಬೇಕೆಂದು ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ, ಮಹಿಳಾ ಸದಸ್ಯೆ ಶ್ರೀಮತಿ ಸವಿತಾ ಬಿ. ಪಟ್ಟಣಶೆಟ್ಟಿ ಮತ್ತು ಬಿ.ಡಿ. ಯೋಗಾನಂದ ಭಾಂಡ್ಯ ಇವರ ಪೀಠವು ಅದೇಶ ನೀಡಿದೆ.
——————–

Exit mobile version