ಶಿವಮೊಗ್ಗ,ಜ.೦೩: ಸುಬ್ಬಯ್ಯ ಮೆಡಿಕಲ್ ಕಾಲೇಜ್ ಹಾಸ್ಪಿಟಲ್ ಹಾಗೂ ಮ್ಯಾಕ್ಸ್ ಆಸ್ಪತ್ರೆಯ ಸಹಯೋಗದಲ್ಲಿ ರೇಡಿಯೋ ಶಿವಮೊಗ್ಗ ಸಮುದಾಯ ಬಾನುಲಿಯಲ್ಲಿ ಆರೋಗ್ಯದ ಕುರಿತಾದ ಸರಣಿ ಕಾರ್ಯಕ್ರಮವು ಜ.೪ರಿಂದ ಪ್ರತಿ ಗುರುವಾರ ಸಂಜೆ ೫:೩೦ರಿಂದ
೬ಗಂಟೆಯವರೆಗೆ ಪ್ರಸಾರವಾಗಲಿದೆ ಎಂದು ಸುಬ್ಬಯ್ಯ ಮೆಡಿಕಲ್ ಕಾಲೇಜ್ ಹಾಸ್ಪಿಟಲ್‌ನ ವೈದ್ಯಕೀಯ ಅಧೀಕ್ಷಕ ಡಾ.ವಿನಾಯಕ್ ತಿಳಿಸಿದರು.
ಅವರು ಇಂದುನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಬ್ಬಯ್ಯ ಮೆಡಿಕಲ್ ಕಾಲೇಜ್ ಹಾಸ್ಪಿಟಲ್ ಹಾಗೂ ಮ್ಯಾಕ್ಸ್ ಆಸ್ಪತ್ರೆಯಲ್ಲಿರುವ ವಿವಿಧ ವಿಭಾಗಗಳಲ್ಲಿನ ತಜ್ಞ ವೈದ್ಯರು ಭಾಗವಹಿಸಲಿದ್ದು, ರೇಡಿಯೋ ಶಿವಮೊಗ್ಗದ ಆರ್‌ಜೆಗಳೊಂದಿಗೆ ಮಾತುಕತೆಯ ಸ್ವರೂಪದಲ್ಲಿ ಈ ಸರಣಿ ಕಾರ್ಯಕ್ರಮ ನಡೆಯಲಿದೆ ಎಂದರು.
ಈ ಕಾರ್ಯಕ್ರಮ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದಾಗಿದ್ದು ಅತಿಸಾರ ಸೇರಿದಂತೆ ವಿವಿಧ ಕಾಯಿಲೆಗಳ ಬಗ್ಗೆ ತಜ್ಞ ವೈದ್ಯರು ಮಾತನಾಡಲಿದ್ದಾರೆ ಎಂದರು.
ಸರಣಿಯ ಮೊದಲ ಕಾರ್ಯಕ್ರಮದಲ್ಲಿ ಉಭಯ ಆಸ್ಪತ್ರೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ನಾಗೇಂದ್ರ ಅವರು ಮನುಷ್ಯನ ಶರೀರದ ವಿವಿಧ ಆಯಾಮಗಳ ಬಗ್ಗೆ ಮಾತನಾಡಲಿದ್ದಾರೆ. ಪ್ರತಿಯೊಬ್ಬರ ಸಮಗ್ರ ಆರೋಗ್ಯದಿಂದ ಸವಾಂಗೀಣ ಸಮಾಜದ ಪ್ರಗತಿ ಸಾಧ್ಯ ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದರು.
ಈ ಆರೋಗ್ಯ ಸರಣಿಯು ಮಲೆನಾಡಿನ ಪ್ರತಿಯೊಬ್ಬರನ್ನು ತಲುಪಬೇಕಾಗಿದೆ. ಎಲ್ಲರೂ ಈ ಸರಣಿಯನ್ನು ಆಲಿಸುವಂತೆ ಕೋರಿದ ಅವರು, ರೇಡಿಯೋ ಶಿವಮೊಗ್ಗ ೯೦೮ ಎಫ್‌ಎಂ ಸಮುದಾಯ ಬಾನುಲಿಯಲ್ಲಿ ದಿನದ ೨೪ ಗಂಟೆಯೂ ಪ್ರಸಾರವಾಗುತ್ತಿದೆ. ರೇಡಿಯೋ ಶಿವಮೊಗ್ಗ ಆಪ್ ನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಸ್ಟೋ ನಿಂದ ಡೌನ್ ಲೋಡ್ ಮಾಡಿಕೊಂಡು ಆಲಿಸಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಕಮಲಪಾಂಡೆನ್, ಡಾ.ಸುಚೇತ್, ಡಾ. ವಿಕ್ರಮ್ ಎಸ್.ಕುಮಾರ್, ರೇಡಿಯೋ ಎಫ್.ಎಂ.ನ ಗುರುಪ್ರಸಾದ್ ಉಪಸ್ಥಿತರಿದ್ದರು.