Site icon TUNGATARANGA

ಪರ್ಸನಲ್ ವಿಷಯಕ್ಕೆ ಕೈ ಹಾಕಿದ್ರೆ ಜನ್ಮ ಜಾಲಾಡಿಸುವೆ: ಸಚಿವ ಮಧು ಬಂಗಾರಪ್ಪ ಬಿಜೆಪಿ ನಾಯಕರ ವಿರುದ್ದ ಗರಂ

ನನ್ನ ಖಾಸಗಿ ವಿಚಾರಕ್ಕೆ ಸಂಬಂಧಿಸಿ ದಂತೆ ರಾಜೀನಾಮೆ ಕೇಳಲು ಬಿಜೆಪಿ ನಾಯಕರಿಗೆ ಯಾವ ಯೋಗ್ಯತೆ ಇಲ್ಲ. ಮಾದ್ಯಮಗಳೇ ಇದನ್ನು ಅರಿತುಕೊಳ್ಳಿ ಎಂದು ಸಚಿವ ಮಧು ಬಂಗಾರಪ್ಪ ಇಂದಿಲ್ಲಿ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ನಾಯಕರಾದ ಆರ್. ಅಶೋಕ್, ಬಿ.ವೈ. ವಿಜಯೇಂದ್ರ, ನಳಿನ್ ಕುಮಾರ್ ಕಟೀಲ್ ಮತ್ತು ರವಿಕುಮಾರ್ ಅವರು ನನ್ನ ರಾಜೀನಾಮೆ ಕೇಳಿದ್ದಾರೆ. ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನೆ ಮಾಡಿದರು.


ವಿಪಕ್ಷ ನಾಯಕ ಆರ್. ಅಶೋಕ್ ಸಾವಿನಲ್ಲೂ ದುಡ್ಡು ಮಾಡಿದವರು. ಅವರಿಗೆ ಮಾನ ಮರ‍್ಯಾದೆ, ನೈತಿಕತೆ ಇದ್ದರೆ ನನ್ನ ರಾಜೀನಾಮೆ ಕೇಳುವುದನ್ನು ಬಿಟ್ಟು ಅವರು ರಾಜೀನಾಮೆ ಕೊಡಬೇಕು.

ಹಾಗೆಯೇ ಬಿಜೆಪಿ ರಾಜ್ಯಾಧ್ಯಕ್ಷನಾಗಿದ್ದ ನಳಿನ್ ಕುಮಾರ್ ಕಟೀಲ್ ಬಿಜೆಪಿಯನ್ನು ಈ ಬಾರಿ ಎಲ್ಲಿಗೆ ತಂದಿಟ್ಟಿದ್ದಾರೆ ಎಂದು ಅವರೇ ಹೇಳಲಿ. ಅವರೂ ಕೊರೋನಾ ಸಂದರ್ಭದಲ್ಲಿ ಭ್ರಷ್ಟಾಚಾರ ಮಾಡಿದವರೇ. ಅವರು ಒಂದು ಸೋಲಿನ ಪಕ್ಷದ ಅಧ್ಯಕ್ಷ. ಕರಾವಳಿ ಭಾಗದಲ್ಲಿ ಪ್ರವೀಣ್ ನೆಟ್ಟಾರು ಸೇರಿದಂತೆ ಯಾರ ಯಾರ ಸಾವಿಗೆ ಕಾರಣ ರಾಗಿದ್ದಾರೆ

ಎಂದು ಒಮ್ಮೆ ಯೋಚನೆ ಮಾಡಲಿ. ಆರ್.ಎಸ್.ಎಸ್., ಬಜರಂಗ ದಳದವರೇ ಅವರನ್ನು ಗೋ ಬ್ಯಾಕ್ ಎಂದು ವಿರೋಧಿಸಿದ್ದರು ಎಂದು ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.


ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜ ಯೇಂದ್ರ ಅವರ ವಿರುದ್ಧ ಹರಿಹಾಯ್ದ ಮಧು ಬಂಗಾರಪ್ಪ, ವಿಜಯೇಂದ್ರ ಯಾವ ಆಧಾರದಲ್ಲಿ ರಾಜ್ಯಾಧ್ಯಕ್ಷರಾಗಿದ್ದಾರೋ ಅದು ನನಗೆ ಗೊತ್ತಿಲ್ಲ. ಆದರೆ, ಅವರು ತಿಳಿದುಕೊಳ್ಳಲಿ. ೨೦೦೪ರಲ್ಲಿಯೇ ನಾನು ಅವರ ತಂದೆ ಪರ ಪ್ರಚಾರ ಮಾಡಿದ್ದೆ. ನಮ್ಮ ತಂದೆ ಬಂಗಾರಪ್ಪ ಅವರು ಬಿಜೆಪಿಗೆ ಬರದಿದ್ದರೆ ಈಗ ಬಿಜೆಪಿಯವರ ಅಡ್ರಸ್ಸೇ ಇರುತ್ತಿರಲಿಲ್ಲ. ವಿಜಯೇಂದ್ರ ಈಗ ಪ್ರಚಾರ ಮಾಡುತ್ತಿದ್ದಾರೆ. ನಾನು ಆಗಲೇ ಪ್ರಚಾರ ಮಾಡಿದ್ದೇನೆ. ನನ್ನ ಖಾಸಗಿತನಕ್ಕೆ ಕೈಹಾಕುವ ಮುನ್ನ ಎಚ್ಚರಿಕೆಯಿಂದ ಇರಬೇಕು. ಅವರ ಭ್ರಷ್ಟಾಚಾರಗಳನ್ನು ಬಯಲು ಮಾಡುವುದು ನನಗೇನೂ ದೊಡ್ಡದಲ್ಲ ಎಂದರು.


ಆದರೆ. ಅವರ ಪಕ್ಷದವರೇ ಆದ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಜಯೇಂದ್ರ ಸೇರಿದಂತೆ ಅವರ ಕುಟುಂಬ ದವರ ವಿರುದ್ಧ ಭ್ರಷ್ಟಾಚಾರದ ಮೂಟೆ ಯನ್ನೇ ಹೊರಿಸಿದ್ದಾರೆ. ಅವರ ತಟ್ಟೆಯ ಲ್ಲಿಯೇ ಹೆಗ್ಗಣ ಬಿದ್ದಿದೆ. ನನ್ನ ತಟ್ಟೆಯ ಚಿಂತೆ ಅವರಿಗೇಕೆ? ಅವರಿಗೂ ನನ್ನ ರಾಜೀನಾಮೆ ಕೇಳುವ ನೈತಿಕತೆಯೂ ಇಲ್ಲ, ಯೋಗ್ಯತೆ ಯೂ ಇಲ್ಲ. ನಾನೇನು ನಕಲಿ ಸಹಿ ಮಾಡಿಲ್ಲ. ಈ ರವಿಕುಮಾರ್ ಎಂಬಾತ ಎಂದೂ ಚುನಾವಣೆಯಲ್ಲಿ ಗೆದ್ದಿಲ್ಲ. ಗ್ರಾಮ ಪಂಚಾ ಯಿತಿಯಲ್ಲಿ ಗೆದ್ದು ಬರುವ ಯೋಗ್ಯತೆಯೂ ಅವನಿಗಿಲ್ಲ. ಇವರು ನನಗೆ ಟ್ವೀಟ್ ಮಾಡು ತ್ತಾರೆ. ಈ ಎಲ್ಲರೂ ಟ್ವೀಟ್ ಮಾಡಲೆಂದೇ ಕೆಲವು ಜನರನ್ನು ಇಟ್ಟುಕೊಂಡಿದ್ದಾರೆ. ಅದೇನು ಹಣ ಕೊಟ್ಟು ಟ್ವೀಟ್ ಮಾಡಿಸು ತ್ತಾರೋ ಗೊತ್ತಿಲ್ಲ ಎಂದರು.

ನನಗೆ ಮತ್ತೊಂದು ಅನುಕೂಲ ಮಾಡಿಕೊಟ್ಟಿದ್ದಾರೆ. ಇದನ್ನು ಕೇಳಿದ ಅನೇಕ ಗೆಳೆಯರು ನನಗೆ ೧೦೦ ಕೋಟಿ ರೂ. ಕೊಡಲು ಮುಂದೆ ಬಂದಿದ್ದಾರೆ. ಇದು ೬ ಕೋಟಿ ರೂ. ಪ್ರಕರಣ. ನನ್ನ ಹತ್ತಿರ ದುಡ್ಡು ಇಲ್ಲವೆಂದಲ್ಲ. ಆದರೆ ಅದೊಂದು ವ್ಯವಹಾರ ಅದನ್ನು ವ್ಯಹಾರಿಕವಾ ಗಿಯೇ ಬಗೆಹರಿಸಬೇಕು. ನ್ಯಾಯ ನನ್ನ ಕಡೆಗೇ ಇದೆ ಎಂದರು.
ಮಾಧ್ಯಮಗಳ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ ಅವರು ನನ್ನ ಖಾಸಗಿತನದ ವಿಚಾರ ಪ್ರಚಾರ ಮಾಡುವ ಮುನ್ನ ಮಾಧ್ಯಮದವರು ನನ್ನ ಕೇಳಬಹುದಿತ್ತು. ಪ್ರಶ್ನೆ ಮಾಡಬಹುದಿತ್ತು. ಆದರೆ ಹಾಗೆ ಮಾಡದೇ ಹೆಚ್ಚು ಪ್ರಚಾರ ಮಾಡಿದ್ದು ಸರಿಯಲ್ಲ ಎಂದರು.
ಸಂಸದ ಪ್ರತಾಪ್ ಸಿಂಹ ಅವರಿಗೆ ತಿರುಗೇಟು ನೀಡಿದ ಮಧು ಬಂಗಾರಪ್ಪ ವಿಚಾರ ಡೈವರ‍್ಟ್ ಮಾಡಲು ನನ್ನ ತಮ್ಮನ ವಿಚಾರ ಎತ್ತಲಾಗಿದೆ ಎನ್ನುತ್ತಾರೆ. ನನ್ನ ವಿಚಾರ ಎಲ್ಲಿ? ಮರಗಳ್ಳತನದ ವಿಚಾರ ಎಲ್ಲಿ? ಇವನೇನು ದೊಡ್ಡ ಮನುಷ್ಯನಾ? ಅರಣ್ಯ ಕಡಿದು ಮರಗಳ್ಳತನ ಮಾಡಿದ್ದರೆ ನನಗೇನು ಸಂಬಂಧ? ಎಂದರು.
ಸಿದ್ಧರಾಮಯ್ಯ ಅವರಿಗೆ ಅಯೋಧ್ಯೆಗೆ ಆಹ್ವಾನ ನೀಡದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಧು ಬಂಗಾರಪ್ಪ, ಶ್ರೀರಾಮ ಎಲ್ಲರ ರಾಮ. ರಾಮ ಎಲ್ಲಿದ್ದರೇನು? ಒಂದೇ ಅಲ್ಲವೇ? ಮೊದಲು ಹೃದಯದಲ್ಲಿರಬೇಕು. ಈಗಾಗಲೇ ರಾಮಮಂದಿರಕ್ಕೆ ಸಂಬಂಧಿಸಿದಂತೆ ಅವ್ಯವಹಾರದ ಕೂಗು ಕೇಳಿ ಬರುತ್ತಿದೆ. ನಾನೇ ಪ್ರಧಾನಿಗಳಿಗೆ ತನಿಖೆ ಮಾಡುವಂತೆ ಆಗ್ರಹಿಸುತ್ತೇನೆ ಎಂದರು.
ಇನ್ನು ಧಾರ್ಮಿಕ ಭಾವನೆಗಳನ್ನು ಮುಂದಿಟ್ಟುಕೊಂಡು ಗೆಲ್ಲುತ್ತೇವೆ ಎಂಬ ಬಿಜೆಪಿಯವರ ಕನಸು ನನಸಾಗುವುದಿಲ್ಲ. ಏನಿದ್ದರೂ ಅಭಿವೃದ್ಧಿ ಯೋಜನೆಗಳು ಮುಖ್ಯವಾಗುತ್ತವೆ. ಗ್ಯಾರಂಟಿ ಯೋಜನೆಗಳು ತಲುಪಿಲ್ಲ ಎನ್ನುವ ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದ ಅವರು ಮೊದಲು ಬಿಜೆಪಿ ಕಾರ್ಯಕರ್ತರಿಗೆ ಈ ಎಲ್ಲಾ ಯೋಜನೆಗಳು ಎಷ್ಟು ಸಿಕ್ಕಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ. ಇಲ್ಲವೇ ಬಿಜೆಪಿ ಕಾರ್ಯಕರ್ತರಿಗೆ ಈ ಯೋಜನೆಗಳೇ ಬೇಡ ಎಂದು ಹೇಳಲಿ ಎಂದು ಸವಾಲು ಹಾಕಿದರು.
ಶಾಲೆಗಳಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾನು ಸಚಿವನಾದ ಮೇಲೆ ಆದಷ್ಟು ಸಮಸ್ಯೆ ಬಗೆಹರಿಸಿದ್ದೇನೆ. ಒಂದು ಮೊಟ್ಟೆ ಬದಲಿಗೆ ಎರಡು ಮೊಟ್ಟೆ ಕೊಟ್ಟಿದ್ದೇವೆ. ಹಾಲು ನೀಡಿದ್ದೇವೆ. ಶಾಲೆಗಳ ಕಟ್ಟಡ, ಶೌಚಾಲಯಗಳ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಶಿಕ್ಷಕರನ್ನು ನೇಮಕ ಮಾಡಿದ್ದೇವೆ. ಶಾಲಾ ಮಕ್ಕಳ ಕೈಗೆ ಪೊರಕೆ ಕೊಟ್ಟವರು ಬಿಜೆಪಿಯವರು. ಇಳಿಸುತ್ತಿರುವುದು ನಾವು. ಇನ್ನೊಂದು ವರ್ಷದಲ್ಲಿ ಯಾವ ಮಕ್ಕಳನ್ನು ನೆಲದ ಮೇಲೆ ಕೂರಿಸುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಹೆಚ್.ಎಸ್. ಸುಂದರೇಶ್, ಆಯನೂರು ಮಂಜುನಾಥ್, ಪ್ರಸನ್ನಕುಮಾರ್, ಎನ್. ರಮೇಶ್, ವೈ.ಹೆಚ್. ನಾಗರಾಜ್, ಎಸ್.ಕೆ. ಮರಿಯಪ್ಪ, ಕಲಗೋಡು ರತ್ನಾಕರ್, ಎಸ್.ಪಿ. ದಿನೇಶ್, ಇಕ್ಕೇರಿ ರಮೇಶ್, ಕಲೀಂ ಪಾಶ, ಜಿ.ಡಿ. ಮಂಜುನಾಥ್, ವಿಜಯಕುಮಾರ್ ಮುಂತಾದವರಿದ್ದರು.

Exit mobile version