Site icon TUNGATARANGA

ಕಲ್ಕಡ ಪ್ರಭಾಕರ್ ವಿರುದ್ಧ ಪ್ರಕರಣ ದಾಖಲಿಸುವಂತೆ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ

ಶಿವಮೊಗ್ಗ,ಡಿ.೩೦: ಪ್ರಚೋದನಕಾರಿ ಭಾಷಣ ಮಾಡಿದ ಕಲ್ಕಡ ಪ್ರಭಾಕರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕು ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕ ಇಂದು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿತು.


ಪ್ರಭಾಕರ್ ಭಟ್ ಎನ್ನುವವರು ಶ್ರೀರಂಗ ಪಟ್ಟಣದಲ್ಲಿ ಹಿಂದೂ ಜಾಗರಣಾ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾನೆ. ಮುಸ್ಲಿಂ ಮಹಿಳೆಯರಿಗೆ ದಿನಕ್ಕೆ ಒಬ್ಬ ಗಂಡ, ಅವರಿಗೆ ಪರ್ಮನೆಂಟ್ ಗಂಡ ಇರೋಲ್ಲ,

ಪರ್ಮನೆಂಟ್ ಗಂಡ ಕೊಟ್ಟಿದ್ದು ಮೋದಿ ಸರ್ಕಾರ ಎಂದಿದ್ದಾರೆ. ಇದು ಅತ್ಯಂತ ಖಂಡನೀಯ ಮತ್ತು ಅವಹೇಳನಕಾರಿ ಹೇಳಿಕೆಯಾಗಿದೆ ಎಂದು ಮನವೀದಾರರು ಆರೋಪಿಸಿದ್ದಾರೆ.


ಕಲ್ಕಡ ಪ್ರಭಾಕರ್ ಭಟ್ ಇವರ ವಿರುದ್ಧ ಈ ಹಿಂದೆ ರಾಜ್ಯದಾದ್ಯಂತ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈ ವ್ಯಕ್ತಿ ಪ್ರಚೋದನಾಕಾರಿ ಭಾಷಣ ಮಾಡಲು, ಕೋಮುಗಲಭೆ ಸೃಷ್ಠಿಸಲು ಕಾರಣರಾಗುತ್ತಾನೆ.

ಇಂತಹ ವ್ಯಕ್ತಿಯಿಂದ ರಾಜ್ಯಕ್ಕೆ ಅಪಾಯವಿದೆ. ಕೂಡಲೇ ಈತನನ್ನು ಬಂಧಿಸಿ, ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಮುಜಮಿಲ್ ಪಾಷ್ (ಮುಜ್ಜು), ಕಾಲೀಂ ಪಾಶ, ಶಿ.ಜು.ಪಾಶ, ಸೇರಿದಂತೆ ಹಲವರಿದ್ದರು

Exit mobile version