Site icon TUNGATARANGA

ಜ.4 ರಂದು ಕರ್ನಾಟಕ ರಾಜ್ಯ ಗೆಳೆಯರ ಬಳಗದಿಂದ 68 ನೇ ಕನ್ನಡ ರಾಜ್ಯೋತ್ಸವ /ಹಾಗೂ 13 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ: ರಾಜ್ಯಾಧ್ಯಕ್ಷ ಎಂ.ಆರ್. ಅನಿಲ್‌ಕುಂಚಿ

ಶಿವಮೊಗ್ಗ,ಡಿ.೩೦: ಕರ್ನಾಟಕ ರಾಜ್ಯ ಗೆಳೆಯರ ಬಳಗದಿಂದ ಜ.೪ರಂದು, ಸಂಜೆ ೬ಕ್ಕೆ ಗೋಪಿ ವೃತ್ತದಲ್ಲಿ ೬೮ನೇ ಕನ್ನಡ ರಾಜ್ಯೋತ್ಸವ ಹಾಗೂ ೧೩ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಾಧ್ಯಕ್ಷ ಎಂ.ಆರ್. ಅನಿಲ್‌ಕುಂಚಿ ಹೇಳಿದರು.
ಅವರು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,

ಅಂದು ಸಂಜೆ ೪ಕ್ಕೆ ದುರ್ಗಿಗುಡಿಯ ದೀನದಯಾಳು ರಸ್ತೆಯಲ್ಲಿರುವ ಕಾಯಕ ಕಾಂಪ್ಲೆಕ್ಸ್‌ನ ಕಚೇರಿ ಆವರಣದಲ್ಲಿ ಧ್ವಜಾರೋಹಣವಿರುತ್ತದೆ. ಅಲ್ಲಿಂದ ಮೆರವಣಿಗೆಯ ಮೂಲಕ ಗೋಪಿ ವೃತ್ತಕ್ಕೆ ಸಾಗಿ ಅಲ್ಲಿ ವೇದಿಕೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.


ಈ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಶಾಸಕರಾದ ಬಿ.ಕೆ. ಸಂಗಮೇಶ್, ಶಾರದ ಪೂರ‍್ಯನಾಯ್ಕ್, ಚನ್ನಬಸಪ್ಪ, ಬಿ.ಎಸ್. ಅರುಣ್, ರುದ್ರೇಗೌಡರು, ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್, ಮುಖಂಡ ಎಂ. ಶ್ರೀಕಾಂತ್, ಜಿಲ್ಲಾಧಿಕಾರಿ, ಜಿಲ್ಲಾರಕ್ಷಣಾಧಿಕಾರಿ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.


ಇದೇ ಸಂದರ್ಭದಲ್ಲಿ ಸರಿಗಮಪ ಖ್ಯಾತಿಯ ದಿಶಾಹೆಗಡೆ, ಸಾನ್ವಿ ಜಿ.ಭಟ್, ದಿಯಾ ಹೆಗಡೆ, ಕಲಾವಿದ ರೋಹನ್‌ರಾಜ್ ಅವರನ್ನು ಸನ್ಮಾನಿಸಲಾಗುವುದು. ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಮಜಾ ಭಾರತ ಕಲಾವಿದ ಪ್ರೇಮ್

ಇವರಿಂದ ನೃತ್ಯ, ಸಂಗೀತ, ಗಾಯನ, ಮಿಮಿಕ್ರಿ ಮುಂತಾದ ಮನೋರಂಜನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ರಾಜ್ಯ ಸಂಘಟನೆ ಸಲಹೆಗಾರ, ಪುರಷೋತ್ತಮ ಎಸ್.ಟಿ.ಮಾತನಾಡಿ, ಕನ್ನಡನಾಡಿನಲ್ಲಿ ಕನ್ನಡ ಭಾಷೆಯೇ ಪ್ರಧಾನವಾದದ್ದು, ಈಗಾಗಲೇ ನಾಮಫಲಕಗಳಲ್ಲಿ ಶೇ.೬೦ ರಷ್ಟು ಕನ್ನಡ ಭಾಷೆ ಇರಬೇಕು ಎಂಬ

ನಿಯಮವಿದೆ. ಈ ನಿಯಮವನ್ನು ಮೀರಿಯೂ ನಾಮಫಲಕಗಳನ್ನು ಹಾಕಿದರೆ, ಅವುಗಳನ್ನು ತೆರವುಗೊಳಿಸಲಾಗುವುದು. ಮಹಾನಗರಪಾಲಿಕೆ ಇದಕ್ಕೆ ಅವಕಾಶ ಕೊಡದಂತೆ ವರ್ತಕರಿಗೆ ಕಡ್ಡಾಯ ಆದೇಶ ನೀಡಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಉಷಾ ಆರ್.ನಾಯಕ, ಪರಮೇಶ್ವರ್, ರವಿ, ಜಯಮ್ಮ, ಮಂಜು ಮುಂತಾದವರು ಇದ್ದರು.

Exit mobile version