Site icon TUNGATARANGA

ನಾಳೆ ಶಿವಮೊಗ್ಗದಲ್ಲಿ ಸುಗುಣೆಂದ್ರತೀರ್ಥ ಶ್ರೀಪಾದರು, ಸುಶೀಂದ್ರತೀರ್ಥ ಶ್ರೀಪಾದರಿಗೆ ನಾಗರೀಕ ಗೌರವ

ಶಿವಮೊಗ್ಗ,ಡಿ.29: ಉಡುಪಿ ಶ್ರೀಕೃಷ್ಣನ ಭಾವಿ ಪರ್ಯಾಯ ಪೀಠಾಧೀಶರಾಗಿ 4ನೇ ಬಾರಿ ಪೀಠ ಅಲಂಕರಿಸುತ್ತಿರುವ ಶ್ರೀ 1008 ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಅವರ ಶಿಷ್ಯರಾದ ಶ್ರೀ1008 ಶ್ರೀಶ್ರೀ ಸುಶೀಂದ್ರತೀರ್ಥ ಶ್ರೀಪಾದ ಯತಿದ್ವಯರು ನಗರಕ್ಕೆ ಆಗಮಿಸುತ್ತಿದ್ದು, ಅವರಿಗೆ ನಾಗರಿಕ ಗೌರವ ಸಮರ್ಪಣೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ನಟರಾಜ್ ಭಾಗವತ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯತಿದ್ವಯರು ಡಿ.30ರಂದು  6.30ಕ್ಕೆ ದುರ್ಗಿಗುಡಿಯ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಆಗಮಿಸುವರು.  ಅಲ್ಲಿ ಅವರಿಗೆ ನಾಗರಿಕ ಗೌರವ ಸಮರ್ಪಣೆ ಮಾಡಲಾಗುತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ ಉಡುಪಿ ಪುತ್ತಿಗೆ ಮಠದ ಡಾ. ಬಿ.ಗೋಪಾಲಾಚಾರ್ ಅಭಿನಂದನಾ ಭಾಷಣ ಮಾಡಲಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ದುರ್ಗಿಗುಡಿ ರಾಯರ ಸೇವಾ ಸಮಿತಿಯ ಕಾರ್ಯದರ್ಶಿ ಸುರೇಶ್ ಮುಂತಾದವರು ಉಪಸ್ಥಿತರಿರುತ್ತಾರೆ ಎಂದರು.

ಸುಗುಣೇಂದ್ರತೀರ್ಥ ಶ್ರೀಪಾದರು ಮೇದಾವಿಗಳು ತಜ್ಞರು ವಿಶ್ವದ ಹಲವೆಡೆ ಭಾರತೀಯ ಸಂಸ್ಕøತಿಯ ಬಗ್ಗೆ ಪ್ರಚಾರ ಮಾಡಿದವರು. ಸಂವಾದ ನಡೆಸಿದವರು, ಹಲವು ರಾಷ್ಟ್ರಗಳ ಮುಖಂಡರೊಡನೆ ಭಾರತೀಯ ಧರ್ಮದ ಬಗ್ಗೆ ಮಾತನಾಡಿದವರು, ವಿಶ್ವ ಧರ್ಮದ ಸಮಿತಿಯ ಅಧ್ಯಕ್ಷರು ಆಗಿದ್ದಾರೆ. ಜಪಾನ್ ಸರ್ಕಾರ ಇವರಿಗೆ ಒಂದು ಕೋಟಿ ಮೊತ್ತದ ಬಹುಮಾನ ನೀಡಿದೆ. 12ನೇ ವರ್ಷದಲ್ಲಿ ಸನ್ಯಾಸಿಯಾದವರು, 4ನೇ ಬಾರಿ ಪರ್ಯಾಯ ಪೀಠವನ್ನು ಅಲಂಕರಿಸಲಿದ್ದಾರೆ ಎಂದರು. 

ಸಾಮಾನ್ಯವಾಗಿ ಪರ್ಯಾಯ ಪೀಠ ಅಲಂಕರಿಸುವವರು ರಾಜ್ಯದ ವಿವಿಧ ಕಡೆಗಳಲ್ಲಿ ಪ್ರವೇಶ ಮಾಡಿ ಮಠದ ಬಗ್ಗೆ ತಿಳಿಸುತ್ತಾರೆ. ಹಾಗೆಯೇ ಶಿವಮೊಗ್ಗಕ್ಕೂ ಪುರ ಪ್ರವೇಶ ಮಾಡಲಿದ್ದಾರೆ. ಅವರನ್ನು ಅತ್ಯಂತ ಭವ್ಯವಾಗಿ ನಾವು ಸ್ವಾಗತಿಸುತ್ತೇವೆ. ಈ ಕಾರ್ಯಕ್ರಮಕ್ಕೆ ನಾಗರಿಕರು ಆಗಮಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ವಿಜಯೇಂದ್ರ ರಾವ್, ಸುಮತೀಂದ್ರಚಾರ್, ಸುರೇಶ್ ಇದ್ದರು.

ReplyForwardAdd reaction
Exit mobile version