Site icon TUNGATARANGA

ರಾಷ್ಟ್ರದಲ್ಲೇ ಪ್ರಥಮ ಬಾರಿ ಹ್ಯಾಂಡಲ್ ಇಲ್ಲದ ಬೈಕ್‌ ಓಡಿಸಿ, ಕನ್ನಡ ಜಾಗೃತಿ ಅಭಿಯಾನ

ಶಿವಮೊಗ್ಗ,ಡಿ.೨೯: ೬೮ನೇ ಕನ್ನಡ ರಾಜ್ಯೋತ್ಸವ ಹಾಗೂ ೫೦ನೇ ವರ್ಷದ ಸುವರ್ಣ ಕರ್ನಾಟಕ ಸಂಭ್ರಮ ಮಹೋತ್ಸವ-೨೦೨೩ರ ಅಂಗವಾಗಿ ಕನ್ನಡ ನಾಡು, ನುಡಿಯ ವಿಶಿಷ್ಠ ಜಾಗೃತಿಗಾಗಿ ಕಲ್ಬುರ್ಗಿಯ ಜಿಲ್ಲಾಡಳಿತ ಭವನದಿಂದ ಬೆಂಗಳೂರು ವಿಧಾನ ಸೌಧದವರೆಗೆ ರಾಷ್ಟ್ರದಲ್ಲೇ ಪ್ರಥಮ ಬಾರಿ ಹ್ಯಾಂಡಲ್ ಇಲ್ಲದ ಬೈಕ್‌ನ್ನು ಓಡಿಸಿ, ಕನ್ನಡ ಜಾಗೃತಿ ಅಭಿಯಾನ ಮಾಡುತ್ತಿರುವ ಈರಣ್ಣ ಜಿ. ಕುಂದರಗಿಮಠ ಅವರನ್ನು ಇಂದು ಶಿವಪ್ಪನಾಯಕ ವೃತ್ತದಲ್ಲಿ ಕನ್ನಡಿಗರ ಕಾರ್ಮಿಕ ವೇದಿಕೆಯಿಂದ ಅಭಿನಂದಿಸಲಾಯಿತು.


ಕಲಬುರಗಿ ಯಿಂದ ಬೆಂಗಳೂರು ವರೆಗೆ ೮೬೦ ಕಿಮೀ ಹ್ಯಾಂಡಲ್ ಇಲ್ಲದ ಬೈಕ್ ನ್ನು ಓಡಿಸಿ ವಿಶೇಷ ಬೈಕ್ ಸಾಹಸ ಕ್ರೀಡೆಯ ಮೂಲಕ ಕನ್ನಡ ನಾಡು ನುಡಿಗೆ ವಿಶಿಷ್ಟ ಜಾಗೃತಿ ಅಭಿಯಾನದ ಈ ಹ್ಯಾಂಡಲ್ ಇಲ್ಲದ ಬೈಕ್ ಗೆ ಕಲಬುರಗಿ ಶಾಸಕ ಅಲ್ಲಮ ಪ್ರಭು ಪಾಟೀಲರು ಕಲಬುರಗಿ ಜಗತ್ ಸರ್ಕಲ್‌ನಿಂದ ಡಿ.೨೭ ರಂದು ಬೆಳಿಗ್ಗೆ ಕನ್ನಡ ಧ್ವಜದೊಂದಿಗೆ ಚಾಲನೆ ನೀಡಿದರು.


ಕನ್ನಡ ನಾಡು ನುಡಿಗೆ ಜಾಗೃತಿಯನ್ನು ಮೂಡಿಸುತ್ತ ಕೆಎ ೨೯ ಹ್ಯಾಂಡಲ್ ಇಲ್ಲದ ಬೈಕ್ ಮೇಲೆ ಕನ್ನಡ ಧ್ವಜವನ್ನು ಹಿಡಿದುಕೊಂಡು ಈಗಾಗಲೇ ೨೦೦ ಕಿಲೋ ಮೀ ಕ್ರಮಿಸಿ ರಾತ್ರಿ ಮಸ್ಕಿಯ ಶ್ರೀಗಚ್ಚಿನ ಮಠದಲ್ಲಿ ವಸತಿ ಮಾಡಲಾಗಿದೆ. ಮಾರ್ಗದುದ್ದಕ್ಕೂ ಸಂಘ -ಸಂಸ್ಥೆಯವರು, ಕನ್ನಡ ಅಭಿಮಾನಿಗಳು, ಯುವಕರು, ಕನ್ನಡ ಪರ ಸಂಘಟನೆಗಳು ಪ್ರೀತಿ ಗೌರವಾಭಿಮಾನದಿಂದ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ ಎಂದರು.


ಹ್ಯಾಂಡಲ್ ಇಲ್ಲದ ಬೈಕ್ ಮೇಲೆ ವಿಶೇಷವಾಗಿ ತಾಯಿ ಭುವನೇಶ್ವರಿ ಭಾವಚಿತ್ರ, ಹಾಗೂ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ನಾಮ ಫಲಕವನ್ನು ಅಳವಡಿಸಿಕೊಂಡು ಕೈಯಲ್ಲಿ ಕನ್ನಡ ಧ್ವಜವನ್ನು ಹಿಡಿದುಕೊಂಡು ಬೈಕ್ ನ್ನು ಓಡಿಸುತಿದ್ದೇನೆ. ಅಲ್ಲದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬಹುಮಾನವನ್ನು ಪಡೆದ ಕರ್ನಾಟಕದ ಲಾಂಛನವನ್ನು ಸಹ ಬೈಕ್ ಮೇಲೆ ಅಳವಡಿಸಲಾಗಿದೆ


ಇವರ ಈ ಸಾಹಸ ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಲಿಮ್ಕಾ ದಾಖಲೆಯಲ್ಲಿ ದಾಖಲಾಗಿದ್ದು ಕಲ್ಬುರ್ಗಿಯ ಶಾಸಕರು ಬೈಕ್ ಕೊಡುಗೆ ನೀಡಿದ್ದಾರೆ ಅಲ್ಲದೆ ದಾರಿಯುದ್ದಕ್ಕೂ ಹಲವು ಸಂಘ ಸಂಸ್ಥೆಗಳು ನನಗೆ ಆರ್ಥಿಕ ಸಹಾಯ ನೀಡಿವೆ ಎಂದು ತಿಳಿಸಿದರು.


ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲ್ಲೂಕಿನವನಾದ ನಾನು ಹಿಂದೆ ಹಲವು ಬಾರಿ ಈ ರೀತಿಯ ಸಾಹಸಗಳನ್ನು ಮಾಡಿದ್ದೇನೆ. ಜಾತಿ, ಮತ, ಪಂಥ ಬೇದವಿಲ್ಲದೆ ಎಲ್ಲರೂ ಸಮಾನತೆಯಿಂದ ಇರಬೇಕು.

ಎಲ್ಲರಿಗು ಸಮಾನ ಪಾಲು ಸಿಗಬೇಕು ಕನ್ನಡ ಯಾರು ಮರೆಯಬಾರದು. ಸುವರ್ಣ ಸಂಭ್ರಮದ ಈ ವರ್ಷದಲ್ಲಿ ರಾಜ್ಯಾದದ್ಯಾಂತ ಕನ್ನಡ ಜಾಗೃತಿಯನ್ನು ಮೂಡಿಸುವುದೇ ಈ ಸಾಹಸ ಯಾತ್ರೆಯ ಉದ್ದೇಶ ಎಂದರು.
ಈ ಸಂದರ್ಭದಲ್ಲಿ ಕನ್ನಡ ಕಾರ್ಮಿಕ ವೇದಿಕೆಯ ವಾಟಾಳ್ ಮಂಜುನಾಥ್ ಹಾಗೂ ಇತರರು ಉಪಸ್ಥಿತರಿದ್ದರು

Exit mobile version