Site icon TUNGATARANGA

ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಬಿಜಿಎಸ್ ವಸತಿ ಶಾಲೆಯಲ್ಲಿ ಡಿ.29 ರಂದು ತಾಲ್ಲೂಕು 10 ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ/ರಾಷ್ಟ್ರಕವಿ ಕುವೆಂಪು ವಿಶ್ವಮಾನವ ದಿನಾಚರಣೆ

ಶಿವಮೊಗ್ಗ,ಡಿ.೨೭:ಜಿಲ್ಲಾ ಕನ್ನಡ ಸಾಂಸ್ಕೃತಿಕ ವೇದಿಕೆ, ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟ್, ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ, ಇವರ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ತಾಲ್ಲೂಕು ೧೦ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ, ರಾಷ್ಟ್ರಕವಿ ಕುವೆಂಪುರವರ ವಿಶ್ವಮಾನವ ದಿನಾಚರಣೆಯನ್ನು ಡಿ.೨೯ರಂದು ಬೆಳಿಗ್ಗೆ ೧೦.೩೦ಕ್ಕೆ ಗುರುಪುರದ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಬಿಜಿಎಸ್ ವಸತಿ ಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಮಂಜುನಾಥ್ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕು.ರಕ್ಷಾ ಎಸ್.ಬಿ. ಆಯ್ಕೆಯಾಗಿದ್ದಾರೆ. ಸಮ್ಮೇಳನದ ಸಾನಿಧ್ಯವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ವಹಿಸುವರು. ದೇಶಿಯ ವಿದ್ಯಾಶಾಲೆಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ ತೇಜಸ್ವಿ ಕೃಷ್ಣ ಕಾರ್ಯಕ್ರಮ ಉದ್ಘಾಟಿಸುವರು.

ಸಾಹಿತಿ ಡಾ. ಹೆಚ್.ಟಿ. ಕೃಷ್ಣಮೂರ್ತಿ, ವಿಶ್ವಮಾನವ ದಿನದ ಸಂದೇಶ ನೀಡುವರು. ಬಿ.ಇ.ಓ. ನಾಗರಾಜ್ ಪ್ರಮುಖರಾದ ಡಿ.ವಿ. ಸತೀಶ್, ಕೆ.ಸತೀಶ್, ಶೋಭ ವೆಂಕಟರಮಣ, ಮಹಾದೇವಿ, ಸುರೇಶ್ ಹೆಚ್.ಎಸ್. ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದರು.
ಕತೆ,ಕವನ, ಪ್ರಬಂಧ ಹಾಗೂ ವಿಚಾರಗೋಷ್ಠಿಗಳು ಈ ಸಮ್ಮೇಳನದಲ್ಲಿ ನಡೆಯಲಿವೆ. ಕತೆ ಗೋಷ್ಠಿಯಲ್ಲಿ ವರ್ಷ ಅಧ್ಯಕ್ಷ ವಹಿಸಿದರೆ,

ಕವನಗೋಷ್ಠಿಯನ್ನು ಸಹನ ವಹಿಸುವರು. ಪ್ರಬಂಧದ ಗೋಷ್ಠಿಯಲ್ಲಿ ಅಧ್ಯಕ್ಷತೆಯನ್ನು ಕು. ಸ್ವಾತಿ ವಹಿಸುವರು. ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ನಿತ್ಯ ಎಂ. ಕುಲಕರ್ಣಿ ವಹಿಸುವರು. ತೀರ್ಪುಗಾರರಾಗಿ ನವೀನ್‌ಕುಮಾರ್, ನಳಿನಾಕ್ಷಿ, ಮಂಜಪ್ಪ, ಸತೀಶ್, ಶ್ರೀನಿವಾಸ್ ನೆಗಲಾಪುರ, ನೇತ್ರಾವತಿ ಬಿ.ಸಿ., ಬಿ.ಟಿ. ಅಂಬಿಕಾ, ಭಾರತಿ ಬಾಯಿ, ಸುಶೀಲಾ ಷಣ್ಮುಗಂ ಭಾಗವಹಿಸುವರು ಎಂದರು.


ಕಥಾ ಗೋಷ್ಠಿಯಲ್ಲಿ ಹರ್ಷಿತ ನಕುಲ್, ಎನ್.ಕೆ. ಸ್ಕಂದ, ಪ್ರಣತಿ, ಜೆ.ಹರೀಣಿ, ಶ್ರೀವತ್ಸ, ದೀಕ್ಷಿತ್, ಅಮೂಲ್ಯ, ಮಧುಶ್ರೀ, ನಿಧಿಶ್ರೀ, ಘನಶ್ಯಾಮ್, ಅನುಷ್, ಮುಂತಾದವರು ಭಾಗವಹಿಸುವರು. ಕವನದ ಗೋಷ್ಠಿಯಲ್ಲಿ ಪ್ರಣಮಿ, ತರುಣ್, ಗಗನ್, ಕೃತಿಕಾ, ತೇಜಸ್ವಿನಿ, ಮೋಹನ್, ನಯನ, ಸೂಕ್ತಿ ಮುಂತಾದವರು ಭಾಗವಹಿಸುವರು. ಪ್ರಬಂಧದಲ್ಲಿ ಚಿರಂತನ, ವೇದಾಂತ, ಪ್ರಾಪ್ತಿ, ಪ್ರೇರಣಾ, ಲಾವಣ್ಯ, ಅವೀಶ್ ಪ್ರಿಯಾಗೌಡ, ಭಾಗವಹಿಸುವರು.


ವಿಚಾರಗೋಷ್ಠಿಯಲ್ಲಿ ಅಮೋಘ, ನೇಹಾಹೊಸಮನಿ, ದವನ್ ಪಿ. ಮುಂತಾದವರು ಭಾಗವಹಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಡಿ.ಗಣೇಶ್, ಸೋಮಿನಕಟ್ಟಿ, ಎ.ಎಸ್. ನಾರಾಯಣ, ಶಿವಪ್ಪ ಗೌಡ ಇದ್ದರು.

Exit mobile version