Site icon TUNGATARANGA

ಸಿರಿಧಾನ್ಯ ಜಾಗೃತಿ ಮತ್ತು ಮಹತ್ವ ಕಾರ್ಯಕ್ರಮ | ಸಿರಿಧಾನ್ಯಗಳ ಸೇವನೆಯಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ: ಶಿಕ್ಷಣ ನಿರ್ದೇಶಕ ಡಾ.ಬಿ. ಹೇಮ್ಲಾನಾಯಕ್

ಕೋಡೂರಿನಲ್ಲಿ

ಹೊಸನಗರ : ವಾಣಿಜ್ಯ ಬೆಳೆಗಳಾದ ಅಡಿಕೆ ಮತ್ತು ಶುಂಠಿಯನ್ನು ಬೆಳೆಯಲಾಗುತ್ತಿರುವ ಮಲೆನಾಡಿನಲ್ಲಿ ಭತ್ತದ ಬೆಳೆಯ ನಂತರ ಭೂಮಿಯ ತೇವಾಂಶವನ್ನು ನೋಡಿ ಸಿರಿಧಾನ್ಯವನ್ನು ಬೆಳೆಯುವುದರಿಂದಾಗಿ ಭೂಮಿಯ ಫಲವತ್ತತೆ ಮತ್ತು ರೈತರು ಸಿರಿಧಾನ್ಯ ಬಳಸುವುದರಿಂದ ದೇಹದಲ್ಲಿ ಪೌಷ್ಟಿಕಾಂಶದ ಕೊರತೆಯನ್ನು ಕಡಿಮೆ ಮಾಡುವುದರೊಂದಿಗೆ ಸದೃಢರಾಗಲು ಸಿರಿಧಾನ್ಯ ಸಹಕಾರಿಯಾಗುವುದೆಂದು ಕೆಳದಿ ಶಿವಪ್ಪನಾಯಕ ತೋಟಗಾರಿಕಾ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ.ಬಿ. ಹೇಮ್ಲಾನಾಯಕ್ ಹೇಳಿದರು.

ಕೋಡೂರು ಗ್ರಾಮ ಪಂಚಾಯ್ತಿ ಅವರಣದಲ್ಲಿ ಇರುವಕ್ಕಿ ಕೆಳದಿ ಶಿವಪ್ಪನಾಯಕ ಕೃಷಿ ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ ಭಾರತೀಯ ಸಿರಿಧಾನ್ಯಗಳ ಸಂಶೋಧನಾ ಸಂಸ್ಥೆ ಹೈದರಾಬಾದ್ ಮತ್ತು ಹೊಸನಗರ ಕೃಷಿ ಇಲಾಖೆ ಹಾಗೂ ಕೋಡೂರು ಗ್ರಾಮ ಪಂಚಾಯಿತಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ `ಸಿರಿಧಾನ್ಯ ಜಾಗೃತಿ ಮತ್ತು ಮಹತ್ವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿರುವ ಸಿರಿಧಾನ್ಯಗಳನ್ನು ಮಲೆನಾಡಿನ ಶಿವಮೊಗ್ಗ ಜಿಲ್ಲೆಯಲ್ಲಿ ರೈತರು ಬೆಳೆಯುವುದರೊಂದಿಗೆ ಆಹಾರವನ್ನಾಗಿ ಸೇವಿಸುವುದರಿಂದಾಗಿ ಉತ್ತಮ ಅರೋಗ್ಯವಂತರಾಗಿ ಇರಲು ಸಾಧ್ಯವೆಂದರು.

ಮಕ್ಕಳಲ್ಲಿ ಮತ್ತು ದೊಡ್ಡವರಲ್ಲಿ ಪೌಷ್ಟಿಕಾಂಶದ ಕೊರತೆ ಕಾಣಿಸಿದರೆ ವೈದ್ಯಾಧಿಕಾರಿಗಳು ಹೆಚ್ಚು ಪೌಷ್ಟಿಕಾಂಶದ ಮಾತ್ರೆಗಳ ಸೇವನೆಗೆ ಚೀಟಿ ಬರೆಯುತ್ತಾರೆ. ಅದೇ ನಮ್ಮ ರೈತರು ಪೌಷ್ಟಿಕಾಂಶದ ಸಿರಿಧಾನ್ಯಗಳ ಬಳಸುವ ಮೂಲಕ ರಕ್ತ ಹೀನತೆ ದೂರ ಮಾಡುವುದರೊಂದಿಗೆ ದೃಢಕಾಯರಾಗಲು ಸಾಧ್ಯವೆಂದು ಹೇಳಿ ರಾಗಿ ಮುದ್ದೆ, ರೊಟ್ಟಿ ತಿಂದು ಗಟ್ಟಿಯಾಗಿರಿ ಎಂದರು.

ಪಾಶ್ಚಿಮಾತ್ಯ ದೇಶಗಳ ಆಹಾರ ಸೇವನೆಯಿಂದಾಗಿ ರೋಗದ ಬಾಧೆ ಕಾಣಿಸಿಕೊಳ್ಳುವಂತಾಗಿದೆ ಅದೇ ಸ್ವದೇಶಿ ಆಹಾರ ಸೇವನೆಯಿಂದಾಗಿ ಮಕ್ಕಳು ಸದೃಢರಾಗುವುದರೊಂದಿಗೆ ಹೆಚ್ಚು ಜ್ಞಾನವಂತರಾಗುವರು. ಇದರಿಂದ ಮುಂದಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯು ಸಿರಿಧಾನ್ಯ ಕ್ರಾಂತಿಯನ್ನಾಗಿಸುವ ನಿರ್ಧಾರ ರೈತರದಾಗಬೇಕು ಎಂದು ಹೇಳಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಿರಿಧಾನ್ಯಗಳಿಗೆ ಬೇಡಿಕೆ ಸಹ ಹೆಚ್ಚಾಗಿದ್ದು ರೈತರು ಇಂತಹ ಬೆಳೆಗಳನ್ನು ಬೆಳೆದು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದರಿಂದ ಸ್ವಾವಲಂಬಿ ಬದುಕು ಹೊಂದಬಹುದು ಎಂದರು.

Click

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಡೂರು ಗ್ರಾಮ ಪಂಚಾಯ್ತಿ ಆಧ್ಯಕ್ಷ ಕೆ.ಎಸ್.ಉಮೇಶ್ ವಹಿಸಿದ್ದರು.

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಸಚಿವರು ಮತ್ತು ವಿಶೇಷಾಧಿಕಾರಿ ಡಾ.ಕೆ.ಸಿ.ಶಶಿಧರ್, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಬಿ.ಎಂ.ದುಶ್ಯಂತ ಕುಮಾರ್, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದವಿಸ್ತರಣಾ ನಿರ್ದೇಶಕ ಡಾ.ಕೆ.ಟಿ.ಗುರುಮೂರ್ತಿ, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಡೀನ್ (ಸ್ನಾತಕೋತ್ತರ) ಡಾ.ದಿನೇಶ್‌ಕುಮಾರ್, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ನಿರ್ದೇಶಕರು (ವಿದ್ಯಾರ್ಥಿಕಲ್ಯಾಣ) ಡಾ.ಶಿವಶಂಕರ್, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ.ಬಿ.ಸಿ.ಗಿರಿಜೇಶ್ ಜಿ.ಕೆ. ಹಾಗೂ ಹೈದರಾಬಾದ್ ಭಾರತೀಯ ಸಿರಿಧಾನ್ಯಗಳ ಸಂಶೋಧನಾ ಸಂಸ್ಥೆ ಕೃಷಿ ವಿಜ್ಞಾನಿ (ಕೃಷಿ ವಿಸ್ತರಣೆ) ಡಾ.ಸಂಗಪ್ಪ, ಕೃಷಿ ಅಧಿಕಾರಿಗಳಾದ ಮಾರುತಿ, ಪ್ರತಿಮಾ ಸೇರಿದಂತೆ ಕೋಡೂರು ಗ್ರಾಮ ಪಂಚಾಯ್ತಿ ಸದಸ್ಯರು ಪಾಲ್ಗೊಂಡಿದರು.

ಕೃಷಿ ವಿವಿ ಅಂತಿಮ ವರ್ಷದ ವಿದ್ಯಾರ್ಥಿನಿ ಕು|| ಮಹಾಲಕ್ಷ್ಮಿ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಕೃಷಿ ವಿಶ್ವವಿದ್ಯಾಲಯದ ಅರುಣ್‌ಕುಮಾರ್ ಮಾತನಾಡಿದರು. ವಿದ್ಯಾರ್ಥಿ ಸಾಗರ್ ವಂದಿಸಿದರು.

ಇದಕ್ಕೂ ಮೊದಲು ಕೋಡೂರು ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಂದ, ಕೋಡೂರು ಗ್ರಾಮ ಪಂಚಾಯ್ತಿಯಿಂದ ಕೃಷಿ ವಿಶ್ವವಿದ್ಯಾಲಯದ ಸಿರಿಧಾನ್ಯ ಜಾಗೃತಿ ಮಹತ್ವದ ಕುರಿತು ರೈತನಾಗರೀಕರಲ್ಲಿ ಜಾಗೃತಿ ಮೂಡಿಸುವ ಜಾಗೃತಿ ಜಾಥಾ ಜರುಗಿತು.

Exit mobile version