Site icon TUNGATARANGA

ಜಿಲ್ಲಾಡಳಿತದಿಂದ ನಿಷೇದಾಜ್ಞೆಗೆ ಹುರುಪು: ತೆರವಿನ ಬಗ್ಗೆ ದಿವ್ಯ ಮೌನ, ಜನಸಾಮಾನ್ಯರ ಪಾಡೇನು…?

ನಿಷೇದಾಜ್ಞೆ ಆದೇಶ ಹೊರಬಂದಾಗ ಹೊರಜಿಲ್ಲೆಯ, ಹೊರ ತಾಲೂಕಿನ ಪೊಲೀಸರು ಶಿವಮೊಗ್ಗ ನಗರದ ಬೀಟಿಗೆ ಬಂದಾಗ ಜನರಿಗೆ, ವ್ಯಾಪಾರಸ್ಥರಿಗೆ ನಿತ್ಯದ ಕೂಳನ್ಮು ಹುಡುಕುವ ಜನರಿಗೆ ಹೇಳಿದ ಅಶ್ಲೀಲ ಪದಗಳು ಇಂದಿಗಾದರೂ ಮುಗಿಯುತ್ತವೆಯೇ….? ಈ ಪ್ರಶ್ನೆಗೆ ಉತ್ತರಿಸುವವರು ಯಾರು…?

ಶಿವಮೊಗ್ಗ, ಡಿ.14:
ಕಳೆದ ಹತ್ತು ದಿನಗಳಿಂದ ಶಿವಮೊಗ್ಗ ನಗರದ ಜನತೆ ನರಳುವಂತೆ ಮಾಡಿದ ನಿಷೇದಾಜ್ಞೆ ಹಾಗೂ ಕೆಲವೆಡೆಯ ಕರ್ಪ್ಯೂ ಇಂದು ಬೆಳಿಗ್ಗೆ ಹತ್ತಕ್ಕೆ ಮುಕ್ತಾಯವಾಗಿದೆ. ಆದರೆ ನಂತರದ ಸ್ಥಿತಿ ಹೇಳುವಲ್ಲಿ ಇಡೀ ವ್ಯವಸ್ಥೆ ಸೋತಿದೆ.
ನಿಷೇದಾಜ್ಞೆಯನ್ನು ಹಾಗೂ ಕರ್ಪ್ಯೂ ಆದೇಶವನ್ನು ಬಹು ದೊಡ್ಡದಾಗಿ ಬಿಂಬಿಸಿದಂತಹ ಜಿಲ್ಲಾಡಳಿತ, ಅದರಲ್ಲೂ ಶಿವಮೊಗ್ಗ ತಹಸಿಲ್ದಾರ್ ನಾಗರಾಜ್ ಅವರು ನಿಷೇದಾಜ್ಞೆ ಕ್ರಮ ತೆರವಾದಾಗ ಜನರಿಗೊಂದಿಷ್ಟು ನಿತ್ಯದ ದುಡಿಮೆಯ ಮಾರ್ಗದ ಅವಧಿಯನ್ನು ಹೇಳಬೇಕಿತ್ತು.
ಕೇವಲ ಬಂದ್, ನಿಷೇಧಾಜ್ಞೆ, ಸೆಕ್ಷನ್ , ಕರ್ಫ್ಯೂ ಮತ್ತಿತರ ಮಾಹಿತಿಗಳನ್ನು ದೊಡ್ಡದಾಗಿ ಬಿಂಬಿಸಿ ಹೇಳುವ ಮೂಲಕ ಇಡೀ ವ್ಯವಸ್ಥೆಯನ್ನು ತೆಗೆದುಕೊಳ್ಳುವ ಆಡಳಿತ ವ್ಯವಸ್ಥೆ ಕನಿಷ್ಠಪಕ್ಷ ಅದರ ಅವಧಿ ಮುಗಿದಾಗ ಈ ಕ್ಷಣದವರೆಗೆ ನೀವು ಹೀಗೆ ಕೆಲಸ ಮಾಡಬಹುದು, ನಿಮ್ಮ ಬದುಕು ಕಟ್ಟಿಕೊಳ್ಳಬಹುದು ನಿಮ್ಮ ದುಡಿಮೆ ಮಾಡಬಹುದು ಎಂದು ಹೇಳಬಹುದಿತ್ತು.
ಅಂತಹ ಯಾವುದೇ ಮಾಹಿತಿಯನ್ನು ತಾಲ್ಲೂಕು ಆಡಳಿತ ನೀಡದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಪತ್ರಿಕೆಗೆ ಲಭಿಸಿದ ಮಾಹಿತಿ ಅನುಸಾರ ಇಂದು ರಾತ್ರಿ ಒಂಬತ್ತರವರೆಗೆ ವ್ಯವಹಾರ ಮಾಡಬಹುದು. ನಂತರ ಎಲ್ಲಾ ಕ್ಲೋಜ್. ಎಣ್ಣೆಯಂಗಡಿ ವ್ಯಾಪಾರ ವಹಿವಾಟು ಸೇರಿದಂತೆ ಎಲ್ಲೆಡೆ ರಾತ್ರಿ ಎಂಟು ಗಂಟೆ ಕೊನೆ ಕ್ಷಣವಂತೆ.
ಮಿಕ್ಕ ಮಾಹಿತಿ ಸಿಕ್ಕಾಕ್ಷಣ ನಿಮ್ಮ ಮುಂದಿರುತ್ತೆ

Exit mobile version