Site icon TUNGATARANGA

ಅತಿ ಹೆಚ್ಚು ಮತ ಪಡೆದು ದಾಖಲೆ ನಿರ್ಮಿಸಿದ ಡಾ.ಶ್ರೀಧರ್, ಡಾ.ರವಿಕಿರಣ್/ ವಿಶ್ವೇಶ್ವರಯ್ಯ ಕೋ-ಅಪರೇಟಿವ್ ಸೊಸೈಟಿಗೆ ಆಯ್ಕೆಯಾದವರಿವರು ನೋಡಿ

Dr. Sridar


ಶಿವಮೊಗ್ಗ, ಡಿ.25:
ಇಲ್ಲಿನ ಸರ್.ಎಂ.ವಿಶ್ವೇಶ್ವರಯ್ಯ ಕೋ-ಅಪರೇಟಿವ್ ಸೊಸೈಟಿಯು ಮುಂದಿನ ಐದು ವರ್ಷಗಳ ಕಾಲದ ನಿರ್ದೇಶಕರ ಆಯ್ಕೆಯ ನಿಮಿತ್ತ ನಡೆಸಿದ ಚುನಾವಣೆಯಲ್ಲಿ ಮಲ್ನಾಡ್ ಇಎನ್‌ಟಿ ಇನ್ಸ್ಯೂಟ್ಯೂಟ್ ರಿಸರ್ಚ್ ಸೆಂಟರ್‌ನ ಪ್ರಮುಖರು ಹಾಗೂ ಮೆಗ್ಗಾನ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ.ಎಸ್.ಶ್ರೀಧರ್ ಅತಿಹೆಚ್ಚು ಮತಗಳನ್ನು (1762) ಪಡೆಯುವ ಮೂಲಕ ಜಯಶಾಲಿಯಾಗಿದ್ದರೆ, ಸುಮುಖ ದಂತ ಚಿಕಿತ್ಸಾಲಯದ ದಂತ ವೈದ್ಯ ಡಾ.ರವಿಕಿರಣ್ ಹೆಚ್.ಕೆ., ಎರಡನೇ ಅತಿ ಹೆಚ್ಚು (1761) ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ.


ಅಂತೆಯೇ ಕ್ರಮವಾಗಿ ದೀನದಯಾಳು ಹೆಚ್.ಕೆ. (1709), ಎಂ.ಎಸ್.ಸೂರ್ಯನಾರಾಯಣ್ (ಸೂರಿ 1662), ಚಂದ್ರಶೇಖರ ಎಸ್.ಜಿ (ರಾಜುಕೋಟೆ (1597), ಪಾಲಿಕೆ ಮಾಜಿ ಉಪಮೇಯರ್ ಸುರೇಖ ರವರ ಪತಿ ಮುರುಳೀಧರ ಅವರು (1426) ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ.


ಜಿ.ಕೆ.ಮಾಧು (ಅಡುಗೆ1415), ಎಂ.ಎನ್.ಸಿ. ಮಣಿ (ಮೊಬೈಲ್ 1298), ಸಂತೋಷ್ ಕುಮಾರ್ (ಶ್ಯಾಮ್ 1245), ಭೀಮೇಶ್ (ಪಾತ್ರೆ 1243), ಜಿ.ಎಸ್.ಅನಂತ (1218), ಶಶಿಕಾಂತ್ ನಾಡಿಗ್ ಸಿ.ಎಸ್. (1158), ರಾಜರಾಮಗೋಪಾಲ ಭಟ್ (1136), ಮಹಿಳಾ ಕೂಟದಲ್ಲಿ ಭಾಗ್ಯ ಕೆ.ಮೂರ್ತಿ, ಜ್ಯೋತಿ ಬಿ ಅವರು ಆಯ್ಕೆಯಾಗಿದ್ದಾರೆ.
ಸುಮಾರು 3600 ಮತಳಗಳನ್ನು ಹೊಂದಿರುವ ವಿಶ್ವೇಶ್ವರಯ್ಯ ಕೋ-ಅಪರೇಟಿವ್ ಸೊಸೈಟಿಯಲ್ಲಿ ಶೇ.80ಕ್ಕೂ ಹೆಚ್ಚು ಮತಗಳು ಚಲಾವಣೆಯಾಗಿದ್ದು, ನಿನ್ನೆ ಇಡೀದಿನ ಕಸ್ತೂರಿ ಬಾ ಪದವಿ ಪೂರ್ವ ಕಾಲೇಜು ಆವರಣ ಚುನಾವಣೆಯ ಗುಂಗಿನಲ್ಲಿ ತೇಲಿತ್ತು.

Exit mobile version