Site icon TUNGATARANGA

ಶಿಕ್ಷಕರು ಪ್ರತಿ ಮಗುವಿನ ಸರ್ವೋತ್ತಮ ಬೆಳವಣಿಗೆಗೆ ಸಹಕರಿಸಿ ಮಕ್ಕಳ ವಾರ್ಷಿಕೋತ್ಸವ ಸಮಾರಂಭದಲ್ಲಿ :ಶಿಕ್ಷಾಣಾಧಿಕಾರಿ ನಾಗರಾಜ್

ಶಿವಮೊಗ್ಗ, ಡಿ.೨೩: ಶಿಕ್ಷಕರು ಪ್ರತಿ ಮಗುವಿನ ಸರ್ವೋತ್ತಮ ಬೆಳವಣಿಗೆಗೆ ಸಹಕರಿಸಬೇಕು ಎಂದು ಕ್ಷೇತ್ರ ಶಿಕ್ಷಾಣಾಧಿಕಾರಿ ನಾಗರಾಜ್ ಹೇಳಿದರು.


ಅವರು ನಿನ್ನೆ ಸಂಜೆ ಕುವೆಂಪು ರಂಗಮಂದಿರದಲ್ಲಿ ನಗರದ ಗೋಪಾಲಗೌಡ ಬಡಾವಣೆಯಲ್ಲಿರುವ ಪೋದಾರ್ ಇಂಟರ್‌ನ್ಯಾಷನಲ್ ಶಾಲೆಯ ಮಕ್ಕಳ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.


ಶಿಕ್ಷಣ ಎಂಬುವುದು ತುಂಬ ವಿಶಾಲವಾದದ್ದು ಸರ್ಕಾರ, ಸಮಾಜ, ಪೋಷಕ, ಖಾಸಗಿ ಶಾಲೆಗಳು ಹೀಗೆಯೇ ಎಲ್ಲರ ಸಹಕಾರದಲ್ಲಿ ಅದು ಪ್ರಗತಿಯಾಗಬೇಕಾಗಿದೆ. ಮುಖ್ಯವಾಗಿ ಮಗುವೇ ಶಿಕ್ಷಣದ ಕೇಂದ್ರಬಿಂದುವಾಗಿದ್ದು,

ಶಿಕ್ಷಕರ ಜವಬ್ದಾರಿ ಹೆಚ್ಚಿದೆ. ಮಕ್ಕಳಲ್ಲಿ ಮೌಲ್ಯ ಬೆಳೆಸಬೇಕು, ಕೀಳರಿಮೆ ಬೆಳೆಸಬಾರದು, ಮಕ್ಕಳಲ್ಲಿರುವ ದೌರ್ಬಲ್ಯಗಳನ್ನು ಗುರುತಿಸಿ ಅದನ್ನು ಹೋಗಲಾಡಿಬೇಕು. ಅವರಲ್ಲಿರುವ ನ್ಯೂನತೆಗಳನ್ನು ಸರಿಪಡಿಸಬೇಕು. ಪ್ರತಿಮಗುವಿಗೂ ತಾಯ್ತನ ನೀಡಬೇಕು ಎಂದರು.


ಪೋದಾರ್ ಶಾಲೆಯ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಜವಬ್ದಾರಿ ಹೊಂದಿದೆ. ಒಳ್ಳೆಯ ವಾತವರಣವನ್ನು ಮೂಡಿಸುತ್ತಿದೆ. ಕಲಿಕೆಯಲ್ಲಿ ಮಕ್ಕಳು ಉತ್ತಮವಾಗಿದ್ದಾರೆ. ನನ್ನ ಎರಡು ಮಕ್ಕಳು ಈ ಶಾಲೆಯಲ್ಲಿ ಓದುತ್ತಿರುವುದರಿಂದ

ಮಕ್ಕಳ ಬೆಳವಣಿಗೆ ನನಗೆ ಗೊತ್ತಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪೋದಾರ್ ಶಾಲೆಯ ಪ್ರಾಂಶುಪಾಲ ಸುಕೇಶ್ ಸೇರಿಗಾರ್, ಗೋಪಾಲಗೌಡ ಬಡಾವಣೆ ಶಾಲೆಯ ಸರೋಜ ಬಿ. ಶಿಲ್ಲಿನ್, ಹುಬ್ಬಳ್ಳಿಯ ಶೀತಲ್ ಕಾಮಂತ್, ಅರಸಿಕೆರೆಯ ಸರೋಜಿನಿ ಮುಂತಾದವರು ಇದ್ದರು.


ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಬಂಗಾರಪ್ಪ ಕುಟುಂಬದ ಸಹೋದರರು ಒಂದಾಗಬೇಕು ಎಂಬ ಹರತಾಳು ಹಾಲಪ್ಪ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು.

Exit mobile version