Site icon TUNGATARANGA

ಸಿಎಂ ಸಿದ್ದರಾಮಯ್ಯ ಸರ್ಕಾರ ಬಹಳದಿನ ಇರಲ್ಲ ಎಂದು ಮಾಜಿ ಉಪಮುಖ್ಯಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದ್ದೇಕೆ ? ಸಂಪೂರ್ಣ ವಿವರ ಇಲ್ಲಿದೆ

ಶಿವಮೊಗ್ಗ,ಡಿ.೨೩: ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ದಲಿತರನ್ನು ರಾಜಕೀಯ ಗೊಂಬೆಗಳನ್ನಾಗಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಬಹಳದಿನ ಇರುವುದಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯರವರು ಅಹಿಂದ ವರ್ಗದವರ ಮೂಗಿಗೆ ತುಪ್ಪ ಹಚ್ಚುವ ಕೆಲಸವನ್ನು ಮಾಡುತ್ತಿದ್ದಾರೆ. ಮತ್ತು ಹಾಸ್ಯಸ್ಪದ ಹೇಳಿಕೆಯನ್ನು ನೀಡುತ್ತಿದ್ದಾರೆ. ಮುಸ್ಲಿಂರಿಗೆ ೧೦ ಸಾವಿರ ಕೋಟಿ ಹಣ ನೀಡುವುದಾಗಿ ಘೋಷಿಸಿದ ಬೆನ್ನಲೆ ಹಿಜಾಬ್ ರದ್ಧತಿಯನ್ನು ತೆಗೆದು ಹಾಕುವುದಾಗಿ ಹೇಳಿದ್ದಾರೆ. ಅಲ್ಲದೇ, ಮಲ್ಲಿಕಾರ್ಜುನ ಖರ್ಗೆರವರನ್ನು ಪ್ರಧಾನಿ ಮಾಡುತ್ತೇವೆ ಎಂಬುವುದು ಕೂಡ ದಲಿತರ ಮೂಗಿಗೆ ತುಪ್ಪ ಹಚ್ಚಿದಂತಾಗುತ್ತದೆ. ಜನಗಣಿತ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದವರು ಇದುವರೆಗೂ ಮಾಡಿಲ್ಲ.

ಹೀಗೆ ಸಿದ್ದರಾಮಯ್ಯ ಮತ್ತು ಅವರ ಸರ್ಕಾರ ಹಿಂದುಳಿದ, ದಲಿತರ, ಅಲ್ಪಸಂಖ್ಯಾತರ ಮೂಗಿಗೆ ತುಪ್ಪ ಹಚ್ಚುತ್ತಿದ್ದಾರೆ ಎಂದು ಆರೋಪಿಸಿದರು.
ಹಿಜಾಬ್ ವಿಷಯವೇ ಈಗ ಇಲ್ಲ. ಇಡೀ ರಾಜ್ಯ ಶಾಂತಿಯಿಂದ ಇದೆ. ಯಾವ ಮುಸ್ಲಿಂರು ಈ ಬಗ್ಗೆ ಮಾತನಾಡುತ್ತಿಲ್ಲ

. ಈಗಾಗಲೇ ಈ ವಿಷಯ ಸುಪ್ರೀಂ ಕೋರ್ಟ್‌ನಲ್ಲಿ ಇದೆ. ಈಗಿದ್ದರು ಕಾನೂನಿನ ಅರಿವು ಇಲ್ಲದೇ ಮುಖ್ಯಮಂತ್ರಿಗಳು ಹಿಜಾಬ್ ವಿಷಯ ಎತ್ತಿ ಗೊಂದಲದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ಇದಕ್ಕೆ ಕಾನೂನು ಮಂತ್ರಿ ಕೂಡ ಸುಮ್ಮನಿದ್ದಾರೆ. ಇವರಿಗೆ ಕಾನೂನಿನ ಅರಿವಿಲ್ಲವೆ ಎಂದು ಪ್ರಶ್ನೆ ಮಾಡಿದರು.


ದಲಿತರ ಪರವಾಗಿ ಮಾತನಾಡುವ ಇವರು ಮಲ್ಲಿಕಾರ್ಜುನ ಖರ್ಗೆಯವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಬಹುದಿತ್ತಲ್ಲವೇ ಅದನ್ನು ಬಿಟ್ಟು ಈಗ ಅವರನ್ನು ಪ್ರಧಾನಿಯನ್ನಾಗಿ ಮಾಡುತ್ತೇವೆ ಎಂದು ಹೇಳುತ್ತಿರುವುದು ಹಾಸ್ಯಸ್ಪದವಲ್ಲವೇ, ಅಷ್ಟಕ್ಕೂ ಕಾಂಗ್ರೆಸ್ಸಿನ ಯಾವ ನಾಯಕರು ಖರ್ಗೆಯನ್ನು ಪ್ರಧಾನಿ ಮಾಡಿ ಎಂದು ಹೇಳಿಲ್ಲ. ಹೇಳಿರುವುದು ಕೇಜ್ರಿವಾಲ್ ಮತ್ತು ಮಮತಾ ಬ್ಯಾನರ್ಜಿ ಅವರ ಹೇಳಿಕೆಯನ್ನು ರಾಜ್ಯದ ಕೆಲವು ನಾಯಕರನ್ನು ಬಿಟ್ಟರೇ, ದೇಶದ ಯಾವ ಕಾಂಗ್ರೆಸ್ ನಾಯಕರು ಸ್ವಾಗತಿಸಿಲ್ಲ ಎಂದರು.


ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿಯಾಗಲು ಸಾಧ್ಯವಿಲ್ಲ. ಏಕೆಂದರೆ ಕೇಂದ್ರದಲ್ಲಿ ಈ ಜನ್ಮದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಅವರು ಕನಸು ಕಾಣುತ್ತಿದ್ದಾರೆ ಅಷ್ಟೇ ವಿಶ್ವನಾಯಕ ಮೋದಿಯೇ ಪ್ರಧಾನಿಯಾಗುತ್ತಾರೆ.

ಕರ್ನಾಟಕದಲ್ಲಿ ಎಲ್ಲ ೨೮ ಸ್ಥಾನಗಳನ್ನು ನಾವು ಗೆಲ್ಲುತ್ತೇವೆ. ಈಗಾಗಲೇ ಜೆಡಿಎಸ್ ವೈಕುಂಠ ಏಕಾದಶಿ ದಿನದಂದೇ ಕೇಂದ್ರದ ಬಿಜೆಪಿ ನಾಯಕರ ಜೊತೆ ಮಾತನಾಡಿದ್ದಾರೆ ಇದು ಹರ್ಷದ ಸಂಗತಿ .ಹೆಚ್. ಡಿ.ಕುಮಾರಸ್ವಾಮಿಯವರು ಕೂಡ ನಾವು ಚುನಾವಣೆಗೆ

ನಿಲ್ಲದಿದ್ದರೂ ಕೂಡ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಹೇಳಿದ್ದಾರೆ. ರಾಜ್ಯದ ರಾಜಕಾರಣದಲ್ಲಿ ಇದೊಂದು ಮಹತ್ವದ ತಿರುವಾಗಿದೆ. ವಿಜಯೇಂದ್ರ ಪ್ರಧಾನಿಯನ್ನು ಭೇಟಿ ಮಾಡಿದ್ದಾರೆ. ಒಟ್ಟಾರೆ ಈ ಇಬ್ಬರ ಇಂದಿನ ಭೇಟಿ ಎಲ್ಲಾ ೨೮ ಕ್ಷೇತ್ರಗಳನ್ನು ಗೆಲ್ಲಲು ಕಾರಣವಾಗಿದೆ ಎಂದರು.

Exit mobile version