Site icon TUNGATARANGA

ರಂಗ ಕಲಾವಿದರಿಗಾಗಿ ನಾಟಕ ಸಿದ್ದತಾ ಶಿಬಿರ/ ಆಯ್ಕೆಯಾದ ಶಿಬಿರಾರ್ಥಿಗಳಿಗೆ ಸಂಭಾವನೆ ಎಷ್ಟು ? ಸಂಪೂರ್ಣ ವಿವರ ಇಲ್ಲಿದೆ ಲಿಂಕ್ ಬಳಸಿ

ಶಿವಮೊಗ್ಗ, ಡಿಸೆಂಬರ್ 22,
    ಶಿವಮೊಗ್ಗ ರಂಗಾಯಣವು ರಂಗಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿದ್ದು ರಂಗ ಕಲೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ನುರಿತ ರಂಗ ನಿರ್ದೇಶಕರಿಂದ ರಂಗ ಕಲಾವಿದರಿಗಾಗಿ ನಾಟಕ ಸಿದ್ದತಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.


    ಶಿಬಿರದಲ್ಲಿ ಹೊಸ ನಾಟಕವನ್ನು ಶಿಬಿರಾರ್ಥಿಗಳಿಂದ ಸಿದ್ದಪಡಿಸಲಾಗುವುದು. ಸಿದ್ದಗೊಂಡ ನಾಟಕ ಪ್ರದರ್ಶನವನ್ನು ರಂಗಾಯಣ, ಶಿವಮೊಗ್ಗದಲ್ಲಿ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ಕನಿಷ್ಟ 05 ಪ್ರದರ್ಶನಗಳನ್ನು ಏರ್ಪಡಿಸಲಾಗುವುದು. ಈ ಶಿಬಿರವು ಜನವರಿ 2024 ರ ಮಾಹೆಯಲ್ಲಿ 20 ದಿನಗಳವರೆಗೆ ಬೆಳಗ್ಗಿನಿಂದ ಸಂಜೆವರೆಗೆ ಪೂರ್ಣಾವಧಿ ತರಬೇತಿ ನಡೆಯುತ್ತದೆ.


    ಶಿಬಿರಾರ್ಥಿಗಳ ವಯಸ್ಸು ಕನಿಷ್ಟ 20 ರಿಂದ ಗರಿಷ್ಟ 40 ದೊಳಗಿರಬೇಕು. ಆಯ್ಕೆಯಾದ ಶಿಬಿರಾರ್ಥಿಗಳಿಗೆ ರೂ.12,000 ಗಳ ಗೌರವ ಸಂಭಾವನೆ ಹಾಗೂ ಮಧ್ಯಾಹ್ನದ ಸಾಮಾನ್ಯ ಊಟ, ಸಂಜೆ ಸ್ನ್ಯಾಕ್ಸ್, ಚಹಾ ಒದಗಿಸಲಾಗುವುದು. 12 ಜನ ಅಭ್ರ್ಥಿಗಳಿಗೆ ಅವಕಾಶವಿದೆ. 20 ದಿನಗಳು ನಿರಂತರವಾಗಿ ಶಿಬಿರ ನಡೆಲಿದೆ.

ರಂಗಾಯಣದ ನಿಬಂಧನೆ ಹಾಗೂ ಷರತ್ತುಗಳಿಗೆ ಒಳಪಟ್ಟು ಆಸಕ್ತ ಕಲಾವಿದರು ಬಿಳಿ ಹಾಳೆಯಲ್ಲಿ ಸ್ವ-ವಿವರದೊಂದಿಗೆ ದಿ: 05-01-2024 ರೊಳಗೆ ಆಡಳಿತಾಧಿಕಾರಿಗಳು, ರಂಗಾಯಣ, ಹೆಲಿಪ್ಯಾಡ್ ಹಿಂಭಾಗ, ಅಶೋಕನಗರ, ಶಿವಮೊಗ್ಗ-577201 ಇಲ್ಲಿಗೆ ಖುದ್ದಾಗಿ, ಅಂಚೆ ಮೂಲಕ ಅಥವಾ ಇ-ಮೇಲ್ admn.rangayanashivamogga@gmail.comಮೂಲಕ ಕಳುಹಿಸಬಹುದು.


   ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಕಚೇರಿ ದೂ.ಸಂ: 08182-256353, 7975229166 ನ್ನು ಸಂಪರ್ಕಿಸಬಹುದೆಂದು ರಂಗಾಯಣದ ಆಡಳಿತಾಧಿಕಾರಿ ತಿಳಿಸಿದ್ದಾರೆ.

Exit mobile version