ಶಿವಮೊಗ್ಗ: ರಾಜ್ಯದಾದ್ಯಂತ ಕೊರೋನಾ ಉಪತಳಿ ಸೋಂಕು ಏರಿಕೆಯಾಗುತ್ತಿರುವಂತೆಯೇ, ಜಿಲ್ಲೆಯಲ್ಲೂ ಸಹ ಮೂರು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಮಾಹಿತಿಯ ಅನ್ವಯ, ಜಿಲ್ಲೆಯಲ್ಲಿ ಈವರೆಗೂ ಮೂವರಲ್ಲಿ ಪಾಸಿಟಿವ್ ಪತ್ತೆಯಾಗಿದ್ದು, ಒಬ್ಬರು ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ, ಇನ್ನಿಬ್ಬರು ಹೋಂ ಐಸೋಲೇಶನ್ ಆಗಿದ್ದಾರೆ.
ವರ್ಷದ ನಂತರ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಇದು ಕೊರೋನಾ ಸೋಂಕಾ ಅಥವಾ ಉಪತಳಿಯಾ ಎಂಬುದು ತಿಳಿದುಬರಬೇಕಿದೆ.
ಸೋಂಕು ಪತ್ತೆಯಾಗಿರುವ ಮೂವರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ ಎಂದು ತಿಳಿದುಬಂದಿದೆ.
ರಾಜ್ಯದಾದ್ಯAತ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 30 ಆಕ್ಸಿಜನ್ ಬೆಡ್, 12 ಐಸಿಯು ಬೆಡ್’ಗಳನ್ನು ಸಿದ್ದಪಡಿಸಲಾಗಿದೆ.
ಜಿಲ್ಲೆಯಲ್ಲಿ ಸೋಂಕು ಪತ್ತೆಯಾಗಿದ್ದರೂ, ಸಾರ್ವಜನಿಕರು ಆತಂಕ ಪಡಬೇಡಿ. ಬದಲಾಗಿ, ಮುಂಜಾಗ್ರತೆಯನ್ನು ವಹಿಸಿಕೊಳ್ಳಿ. ಸಾರ್ವಜನಿಕ ಸ್ಥಳಗಳಿಗೆ ತೆರಳುವಾಗ ಮಾಸ್ಕ್ ಧರಿಸಿ, ಪ್ರಮುಖವಾಗಿ 60 ವರ್ಷ ದಾಟಿದವರು ಮನೆಯಿಂದ ಹೊರಕ್ಕೆ ತೆರಳುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ.
ಯಾವುದೇ ರೀತಿಯ ಜ್ವರ, ಶೀತ, ಸುಸ್ತು ಸೇರಿದಂತೆ ಆರೋಗ್ಯ ಸಂಬAಧಿತ ಸಮಸ್ಯೆಗಳು ಕಾಣಿಸಿಕೊಂಡರೆ ತತಕ್ಷಣವೇ ವೈದ್ಯರನ್ನು ಭೇಟಿಯಾಗಿ ಪರೀಕ್ಷಿಸಿಕೊಳ್ಳಿ.