Site icon TUNGATARANGA

‘ಜಿಲ್ಲಾ ಸಿರಿಧಾನ್ಯ ಹಬ್ಬ’ ದ ಪ್ರಯುಕ್ತ ಸಿರಿಧಾನ್ಯ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ರವರಿಂದ ಚಾಲನೆ

ಶಿವಮೊಗ್ಗ, ಡಿಸೆಂಬರ್ 22,
      ಕೃಷಿ ಇಲಾಖೆಯಿಂದ ಆಯೋಜಿಸಿರುವ ‘ಜಿಲ್ಲಾ ಸಿರಿಧಾನ್ಯ ಹಬ್ಬ’ ದ ಪ್ರಯುಕ್ತ ಡಿ.22 ರಂದು ಏರ್ಪಡಿಸಲಾಗಿದ್ದ ಸಿರಿಧಾನ್ಯ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ನೆಹರೂ ಕ್ರೀಡಾಂಗಣ ಆವರಣದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಲಾಯಿತು.
    ಸಿರಿಧಾನ್ಯ ಜಾಥಾಕ್ಕೆ ಬೆಳಿಗ್ಗೆ 6.30 ಕ್ಕೆ ಜಿಲ್ಲಾಧಿಕಾರಿಗಳು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರು ಹಾಘೂ ಜಂಟಿ ಕೃಷಿ ನಿರ್ದೇಶಕರು ಚಾಲನೆ ನೀಡಿದರು.


    ಕೃಷಿ ಇಲಾಖೆ ಅಧಿಕಾರಿಗಳು, ವಿವಿಧ ಸಂಸ್ಥೆಗಳ ಅಧಿಕಾರಿಗಳು/ಸದಸ್ಯರು, ವಿದ್ಯಾರ್ಥಿಗಳು ಸಿರಿಧಾನ್ಯಗಳ ಮಹತ್ವ ತಿಳಿಸುವ ಘೋಷಣೆಗಳನ್ನು ಕೂಗುವ ಮೂಲಕ ಅರಿವು ಮೂಡಿಸಲಾಯಿತು. ಜಾಥಾದಲ್ಲಿ ಕೃಷಿ ಕಾಲೇಜು, ಹಿಂದುಳಿದ ವರ್ಗಗಳ ಇಲಾಖೆಯ, ಸಮಾಜ ಕಲ್ಯಾಣ ಇಲಾಖೆಯ, ಪರಿಶಿಷ್ಟ ಪಂಗಡ ಇಲಾಖೆ, ಕ್ರೀಡಾ ಮತ್ತು ಯುವಜನ ಸಬಲೀಕರಣ

https://tungataranga.com/?p=26203
ಅಧಿಕಾರ ಬಯಸದೇ, ಪಕ್ಷದ “ಸಾಧಕ” ಸೇತುವೆ ಕಟ್ಟಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್/ ಐದು ವರುಷದ ಸಾರ್ಥಕ ಕಾರ್ಯ ಸ್ಪೆಷಲ್ ಸುದ್ದಿ ಲಿಂಕ್ ಬಳಸಿ ಓದಿ👆

ಇಲಾಖೆಯ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು, ಶಿವಗಂಗಾ ಯೋಗ ಟ್ರಸ್ಟ್ ಶಿಬಿರಾರ್ಥಿಗಳು,ಜಿಲ್ಲಾ ಕೃಷಿ ಪರಿಕರ ಮಾರಾಟಗಾರರ ಸಂಘದ ಸದಸ್ಯರುಗಳು, ಕೃಷಿ ತಂತ್ರಜ್ಞರ ನಿರ್ವಹಣಾ ಸಂಸ್ಥೆಯ ಸದಸ್ಯರು, ಲೀಡ್ ರಸಗೊಬ್ಬರ ಉತ್ಪಾದಕರ ಸಂಘದ ಸದಸ್ಯರು, ಇಲಾಖೆ ಸಿಬ್ಬಂದಿಗಳು ಸೇರಿದಂತೆ 600 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಾಥಾದಲ್ಲಿ ಪಾಲ್ಗೊಂಡಿದ್ದರು.


    ಜಾಥಾ ನೆಹರೂ ಕ್ರೀಡಾಂಗಣದಿಂದ ಆರಂಬಿಸಿ, ಮಹಾವೀರ ವೃತ್ತ, ಗೋಪಿ ವೃತ್ತ, ದುರ್ಗಿಗುಡಿ ರಸ್ತೆ, ಜೈಲ್ ವೃತ್ತ, ಶಿವಮೂರ್ತಿ ವೃತ್ತ ಮಾರ್ಗವಾಗಿ ಚಲಿಸಿ ನಂತರ ನೆಹರೂ ಕ್ರೀಡಾಂಗಣ ತಲುಪಿತು.

Exit mobile version