Site icon TUNGATARANGA

ಬೇರಿಸ್ ಸಿಟಿ ಸೆಂಟರ್ ವತಿಯಿಂದ ಡಿ.23 ರಂದು ಪರಿಸರ ಉಳಿವಿಗಾಗಿ ಮ್ಯಾರಥನ್ ಓಟ /23ರಿಂದ 26 ರವರೆಗೆ ಶಾಪಿಂಗ್ ಫೆಸ್ಟಿವಲ್ : ಮ್ಯಾನೇಜರ್ ಮೋಹಿದ್ದಿನ್

ಶಿವಮೊಗ್ಗ,ಡಿ.೨೧:ಇಲ್ಲಿನ ಬೇರಿಸ್ ಸಿಟಿ ಸೆಂಟರ್(ಮಾಲ್)ನ ವತಿಯಿಂದ ಡಿ.೨೩ರಂದು ಪರಿಸರ ಉಳಿವಿಗಾಗಿ ಮ್ಯಾರಥನ್ ಓಟ ಮತ್ತು ೨೩ರಿಂದ ೨೬ರವರೆಗೆ ಶಾಪಿಂಗ್ ಫೆಸ್ಟಿವಲ್ ಹಮ್ಮಿಕೊಳ್ಳಲಾಗಿದೆ ಎಂದು ಸಿಟಿ ಸೆಂಟರ್‌ನ ಮ್ಯಾನೇಜರ್ ಮೋಹಿದ್ದಿನ್ ಹೇಳಿದರು.


ಅವರು ಇಂದು ಸಿಟಿ ಸೆಂಟರ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೇರಿಸ್ ಸೆಂಟರ್ ಪರಿಸರ ಉಳಿವಿಗಾಗಿ ಹಲವು ಕಾರ್ಯಕರ್ಮಗಳನ್ನು ಆಯೋಜಿಸುತ್ತ ಬಂದಿದೆ. ಪರಿಸರ ನಾಶದಿಂದ ಉಂಟಾಗುವ ಪರಿಣಾಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಹಿನ್ನಲೆಯಲ್ಲಿ ಈ ಫ್ಯಾಮಿಲ್ ರನ್ ಆಯೋಜಿಸಲಾಗಿದೆ ಎಂದರು.


ಈ ಓಟದ ಮೂಲಕ ಸಮುದಾಯವನ್ನು ಒಟ್ಟುಗೋಡಿಸುವುದು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದು ಪರಿಸರ ವಿನಾಶದ ಬಗ್ಗೆ ತಿಳಿಸುವುದು ಜಾಗೃತಿ ಮೂಡಿಸುವುದು ಈ ನಡೆಗೆಯ ಉದ್ದೇಶವಾಗಿದೆ ಎಂದರು.


ಈ ನಡೆಗೆಗೆ ೨೩ರ ಬೆಳಿಗ್ಗೆ ೬.೩೦ಕ್ಕೆ ಪದ್ಮಶ್ರೀ ತುಳಸಿಗೌಡ ಅವರು ಚಾಲನೆ ನೀಡುವರು. ಈ ಓಟವು ನೆಹರು ರಸ್ತೆ, ಜಿಲ್ಲಾಧಿಕಾರಿಗಳ ಕಚೇರಿ, ಶಂಕರಮಠ ರಸ್ತೆ, ಬಿ.ಹೆಚ್.ರಸ್ತೆ, ಹೀಗೆ ಸಾಗುತ್ತದೆ. ಸುಮಾರು ೩.೮ ಕಿ.ಮೀ.ನಡೆಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇದರ ಜೊತೆಗೆ ಡಿ.೨೩ರಿಂದ ೨೬ರವರೆಗೆ ಬೇರಿಸ್ ಸಿಟಿ ಸೆಂಟರ್‌ನಲ್ಲಿ ಶಾಪಿಂಗ್ ಫೆಸ್ಟಿವಲ್ ನಡೆಯಲಿದೆ. ಇಡಿ ಕುಟುಂಬ ಸಮೇತ ಬಂದು ಈ ಶಾಪಿಂಗ್‌ನಲ್ಲಿ ಭಾಗವಹಿಸಬಹುದು. ಸರಳವಾದ ಈವೆಂಟುಗಳು ಕೂಡ ಇರುತ್ತವೆ. ಒಳಾಂಗಣದಲ್ಲಿ ಮನೋರಂಜನಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದೊಂದು ಗ್ರಹಕರ ಹಬ್ಬವಾಗಿದೆ. ಸಾರ್ವಜನಿಕರು ಮ್ಯಾರಥನ್ ಓಟ ಮತ್ತು ಗ್ರಾಹಕರ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬೇರಿ ಸೆಂಟರ್‌ನ ಮುಖ್ಯಸ್ಥ ನಂದ್‌ಕುಮಾರ್, ಅಮೃತ್, ಸನ್ನಿ ಇದ್ದರು.

Exit mobile version