Site icon TUNGATARANGA

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಸಂಘದ ವತಿಯಿಂದ ಪ್ರತಿಭಟನೆ

ಶಿವಮೊಗ್ಗ: ಔಷಧಿ ಮತ್ತು ವೈದ್ಯಕೀಯ ಸಾಧನಗಳಿಗೆ ಜಿ.ಎಸ್.ಟಿ. ತೆಗೆದು ಹಾಕುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಸಂಘದ ಶಿವಮೊಗ್ಗ ಘಟಕದ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಪ್ರತಿಭಟನೆ ನಡೆಸಲಾಯಿತು.


ಮಾರಾಟ ಪ್ರಚಾರ ನೌಕರರಿಗೆ ಭದ್ರತೆ ನೀಡಬೇಕು. ಶಾಸನಬದ್ಧ ನಿಯಮಗಳನ್ನು ರೂಪಿಸಬೇಕು. ಸರ್ಕಾರಿ ಆಸ್ಪತ್ರೆಗಳು, ಸಂಸ್ಥೆಗಳು ಮತ್ತು ವೈದ್ಯಕೀಯ ಪ್ರತಿನಿಧಿಗಳ ಪ್ರವೇಶದ ಮೇಲಿನ ಎಲ್ಲಾ ನಿರ್ಬಂಧಗಳನ್ನು ತೆಗೆದು ಹಾಕಬೇಕು. ಗೌಪ್ಯತೆಗಳ ಮೇಲಿನ ಅತಿಕ್ರಮಣ ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.


ಮಾರಾಟ ಪ್ರಚಾರ ನೌಕರರ ಕಾಯಿದೆ ೧೯೭೬ ಅನ್ನು ರಕ್ಷಿಸಬೇಕು. ನ್ಯಾಯಯುತವಾದ ವೇತನ ನೀಡಬೇಕು ಕೆಲಸದ ನಿಯಮಗಳನ್ನು ರೂಪಿಸಬೇಕು. ಮುಖ್ಯವಾಗಿ ಔಷಧಿಯ ಬೆಲೆಗಳನ್ನು ಕಡಿಮೆ ಮಾಡಬೇಕು.

ವೈದ್ಯಕೀಯ ಸಾಧನಗಳ ಮೇಲಿನ ಜಿ.ಎಸ್.ಟಿ. ತೆಗೆದು ಹಾಕಬೇಕು. ಡೇಟಾ ಗೌಪ್ಯತೆ ರಕ್ಷಿಸಬೇಕು. ಮಾರಾಟಕ್ಕೆ ಸಂಬಂಧಿಸಿದಂತೆ ಮಾಲೀಕರುಗಳನ್ನು ಬಲಿಪಶು ಮಾಡುವುದನ್ನು ತಡೆಯಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.


ಪ್ರತಿಭಟನೆಯಲ್ಲಿ ಪ್ರಮುಖರಾದ ಬಿ. ಕುಲಕರ್ಣಿ, ಅಶೋಕ್ ಜಿ.ಎಸ್., ವಿಜಯಕುಮಾರ್, ರಾಘವೇಂದ್ರ ಮೊದಲಾದವರಿದ್ದರು.

Exit mobile version