ಶಿವಮೊಗ್ಗ, ಡಿ.21:
ಕುವೆಂಪು ವಿಶ್ವವಿದ್ಯಾಲಯ ಸಂಸ್ಕೃತ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಶಿವಮೊಗ್ಗ ( ಸಹ್ಯಾದ್ರಿ ಕಾಲೇಜು ಆವರಣ) ಇಲ್ಲಿ ಕೇವಲ ಒಬ್ಬರೇ ಖಾಯಂ ಪ್ರಾಧ್ಯಾಪಕರಿದ್ದು ಅತಿಥಿ ಉಪನ್ಯಾಸಕರಿಲ್ಲದೆ ವಿದ್ಯಾರ್ಥಿಗಳಿಗೆ ಪಾಠ ಪ್ರವಚನದ ತೊಂದರೆಯಾಗಿದೆ ಎಂದು ಎಮ್.ಏ. ಪ್ರಥಮ ವರ್ಷದ ವಿದ್ಯಾರ್ಥಿ ಅ.ನಾ.ವಿಜೇಂದ್ರ ರಾವ್ ಮತ್ತು ಸಹಪಾಠಿಗಳು ದೂರಿದ್ದಾರೆ.
ಈಗಾಗಲೇ ಸುಮಾರು 17 ವಿದ್ಯಾರ್ಥಿಗಳು ಪ್ರವೇಶವನ್ನು ಪಡೆದಿರುತ್ತಾರೆ. ಡಿಸೆಂಬರ್ ಒಂದರಿಂದ ತರಗತಿಗಳು ಆರಂಭವಾಗಿದ್ದು ಇಲ್ಲಿ ಅತಿಥಿ ಉಪನ್ಯಾಸಕರು ಇಲ್ಲದೆ ತರಗತಿಯನ್ನು ಇರುವ ಒಬ್ಬರೆ ಪ್ರಾಧ್ಯಾಪಕರು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಇನ್ನೂ ಉಳಿದ ಪಾಠಗಳು ಸರಿಯಾಗಿ ನಡೆಯದೆ ತೊಂದರೆಯಾಗಿದೆ.
ಹಾಗಾಗಿ ಸಂಬಂಧಪಟ್ಟವರು ಕೂಡಲೇ ಇದನ್ನ ಸರಿಪಡಿಸಬೇಕಾಗಿ ಕೇಳಿಕೊಳ್ಳಲಾಗುವುದು ಈಗಾಗಲೇ ಇತರೆ ಕಾಲೇಜುಗಳಲ್ಲಿ ಕೂಡ ಅತಿಥಿ ಉಪನ್ಯಾಸಕರ ಕೊರತೆಯಿಂದಾಗಿ ಮುಷ್ಕರಗಳು ಕೂಡ ನಡೆದಿದೆ. ಮುಷ್ಕರಕ್ಕೆ ಅವಕಾಶ ಕೊಡದಂತೆ ಶೀಘ್ರದಲ್ಲಿಯೇ ಉಪನ್ಯಾಸಕರನ್ನು ನೇಮಕ ಮಾಡುವಂತೆ ಆಗ್ರಹಿಸಿದ್ದಾರೆ.