ಶಿವಮೊಗ್ಗ,ಡಿ.೧೯: ಶಿವಮೊಗ್ಗ ತಾಲ್ಲೂಕು ನಿಧಿಗೆ ೨ನೇ ಹೋಬಳಿ ಎರಗನಾಳು ಗ್ರಾಮದಲ್ಲಿ ಹಾಗೂ ಕೊರನಹಳ್ಳಿ ಮತ್ತು ಕಾಚಿನಕಟ್ಟೆ ಗ್ರಾಮದಲ್ಲಿ ಸರ್ವೆ ನಂ.೧೪ರಲ್ಲಿ ಕಳೆದ ೪೫-೫೦ ವರ್ಷಗಳಿಂದ ಸ್ವಾಧೀನಾನುಭವ ಮಾಡಿ ಜಮೀನು ಹಾಗೂ ತೋಟ ಮಾಡಿಕೊಂಡು ಬಂದಿದ್ದು, ಈಗ ಸಕ್ಕರೆ ಕಾರ್ಖಾನೆಯವರು ಅಕ್ರಮವಾಗಿ ನಮ್ಮ ಜಮೀನಿಗೆ ಸ್ವಾಧೀನ ಬರದಂತೆ ತಡೆಯುತ್ತಿದ್ದು, ನ್ಯಾಯಕೊಡಿಸಬೇಕು ಎಂದು ಆಗ್ರಹಿಸಿ ಎರಗನಾಳು ಗ್ರಾಮಸ್ಥರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ಗ್ರಾಮದಲ್ಲಿ ಇರುವ ಜಮೀನನ್ನು ಸಮತಟ್ಟು ಮಾಡಿ ಸಾಗುವಳಿ ಮಾಡುತ್ತ ಬಂದಿದ್ದು, ೧೯೯೧ರಲ್ಲಿ ಫಾರಂ. ೫೦, ೫೩ರಲ್ಲಿ ಅರ್ಜಿಗಳನ್ನು ಸಹ ಸಲ್ಲಿಸಿದ್ದು, ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಹ ಸಲ್ಲಿಸಿದ್ದೇವೆ. ಆದರೆ, ಹಿಂದೆ ಸರ್ಕಾರ ಸಕ್ಕರೆ ಕಾರ್ಖಾನೆಗೆ ಕಬ್ಬು ಬೆಳೆಯಲು ಭೂಮಿಯನ್ನು ಮಂಜೂರು ಮಾಡಿದ್ದು, ಹಲವಾರು ವರ್ಷಗಳ ಹಿಂದೆಯೇ ಆ ಜಮೀನನ್ನು ಅಭಿವೃದ್ಧಿ ಮಾಡದೇ ಕಬ್ಬು ಬೆಳೆಯದೇ ಸಕ್ಕರೆ ಕಾರ್ಖಾನೆ ಮುಚ್ಚಿ ವರ್ಷಗಳೇ ಕಳೆದಿದ್ದು, ಸ್ಥಳೀಯ ರೈತರು ಉಳುಮೆ ಮಾಡಿ ಬಂದಿರುತ್ತಾರೆ
. ಮತ್ತು ಸರ್ಕಾರಿ ಆದೇಶದಂತೆ ಉಳುಮೆ ಮಾಡುವ ಭೂಮಿ ಹಕ್ಕಿಗೆ ಅರ್ಜಿಯನ್ನು ಸಲ್ಲಿಸಿರುತ್ತಾರೆ. ಕೆಲವರಿಗೆ ಹಿಂದೆ ನ್ಯಾಯಾಲಯದಿಂದ ಪಹಣಿ ಕೂಡ ದೊರೆತಿದೆ. ಸರ್ಕಾರದ ಅಂಗನವಾಡಿ, ಶಾಲೆ ಇನ್ನಿತರ ಕಟ್ಟಡಗಳು ಅಲ್ಲಿಯೇ ಇದೆ. ಸರ್ಕಾರಿ ಪಡ ಎಂದು ದಾಖಲಾಗಿದೆ. ಆದರೂ ಕೂಡ ಈಗ ಹಟತ್ತಾಗಿ ನ್ಯಾಯಾಲಯದ ಆದೇಶ ಎಂದು ಬಿಂಭಿಸುತ್ತ
, ಕೆಲವು ಭೂ ಮಾಫೀಯ ಜೊತೆಗೆ ಸೇರಿಕೊಂಡು ಸರ್ಕಾರಿ ಭೂಮಿಯನ್ನು ಒಡೆಯುವ ಸಂಚು ಮಾಡಲಾಗಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ಹಲವಾರು ವರ್ಷಗಳಿಂದ ತೋಟ-ಜಮೀನು ಮಾಡಿಕೊಂಡು ಬಂದ ರೈತರಿಗೆ ಸ್ವಾಧೀನದ ಹಕ್ಕು ಪತ್ರ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಎರಗನಾಳು ಭಾಗದ ಸರ್ವೆ ನಂ. ೧೪ರ ಹಲವಾರು ಫಲಾನುಭವಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.