Site icon TUNGATARANGA

ಶಿವಮೊಗ್ಗದಲ್ಲಿ ಸೆಕ್ಷನ್ 144 ಮುಂದುವರಿಕೆ: ವ್ಯಾಪಾರ ವಹಿವಾಟಿಗೆ ಸಮಯ ವಿಸ್ತರಣೆ..?

ಶಿವಮೊಗ್ಗ : ನಗರದಲ್ಲಿ ಡಿ.03ರಿಂದ ಜಾರಿಯಲ್ಲಿರುವ ಸೆಕ್ಷನ್ 144 ನಿಷೇದಾಜ್ಞೆಯನ್ನು ಡಿ.14ರ ಬೆಳಗ್ಗೆ 10ರ ವರೆಗೆ ವಿಸ್ತರಿಸಲಾಗಿದ್ದು, ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ವಹಿವಾಟು ನಡೆಸಲು ರಾತ್ರಿ 8ರವರೆಗೆ ಅವಕಾಶ ಕಲ್ಪಿಸಲಾಗಿದೆ.
ನಗರದಲ್ಲಿ ಭಜರಂಗದಳದ ಕಾರ್ಯಕರ್ತ ನಾಗೇಶ್ ಮೇಲೆ ಹಲ್ಲೆ ನಡೆದ ನಂತರ ಪ್ರಕ್ಷುಬ್ದ ವಾತಾವರಣ ನಿರ್ಮಣಗೊಂಡ ಹಿನ್ನೆಲೆಯಲ್ಲಿ 144 ಸೆಕ್ಷನ್ ಹೇರಲಾಗಿತ್ತು.


ಮೊದಲು ಅಂಗಡಿ ಬಂದ್ ಮಾಡಿಸಲಾಗಿತ್ತು. ವರ್ತಕರ ಪ್ರಬಲ ವಿರೋಧಿಸಿದ ಹಿನ್ನೆಲೆಯಲ್ಲಿ ಮೂರು ಠಾಣಾ ವ್ಯಾಪ್ತಿಯಲ್ಲಿ ವಹಿವಾಟು ನಡೆಸಲು ಸಂಜೆ 6ರ ತನಕ ಅವಕಾಶ ನೀಡಲಾಗಿತ್ತು. ಇದೀಗ ನಗರದಲ್ಲಿ ವಹಿವಾಟು ನಡೆಸಲು ರಾತ್ರಿ 8ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜ್ ತಿಳಿಸಿದ್ದಾರೆ.

Exit mobile version