Site icon TUNGATARANGA

ಬಸವಕೇಂದ್ರದ ವತಿಯಿಂದ ಮೂರು ದಿನಗಳು ಚಿಂತನ ಕಾರ್ತಿಕ ಸಮಾರಂಭ : ಡಾ.ಶ್ರೀ ಬಸವ ಮರುಳ ಸಿದ್ಧ ಸ್ವಾಮೀಜಿ

ಬಸವಕೇಂದ್ರದ ವತಿಯಿಂದ ಡಿ.೧೮,೧೯ ಮತ್ತು ೨೦ರಂದು ಚಿಂತನ ಕಾರ್ತಿಕ ಸಮಾರೋಪ,, ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ೨೮೬ನೇ ಶರಣ ಸಂಗಮ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿದೆ ಎಂದು ಬಸವಕೇಂದ್ರದ ಡಾ.ಶ್ರೀ ಬಸವ ಮರುಳ ಸಿದ್ಧ ಸ್ವಾಮೀಜಿ ಹೇಳಿದರು.


ಅವರು ಇಂದು ಬಸವಕೇಂದ್ರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಿಂತನ ಕಾರ್ತಿಕದ ಸಮಾರೋಪ ಮತ್ತು ಪ್ರಶಸ್ತಿ ಸಮಾರಂಭ ಡಿ. ೧೮ ರಂದು ಆರ್‌ಟಿಓ ಕಚೇರಿ ರಸ್ತೆಯಲ್ಲಿ ಸರ್ಕಾರಿ ನೌಕರರ ಭವನದಲ್ಲಿ ಸಂಜೆ ೬ಕ್ಕೆ ನಡೆಯುವುದು. ಇದರ ಸಾನಿಧ್ಯವನ್ನು ಬೆಕ್ಕಿನಕಲ್ಮಠ ಶ್ರೀಗಳಾದ ಡಾ.ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸುವರು ಎಂದರು.


ಬಸವಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಶಾಸಕ ಬಿ.ಕೆ. ಸಂಗಮೇಶ್, ಎಸ್.ರುದ್ರೇಗೌಡ, ಹೆಚ್.ಡಿ.ತಮ್ಮಯ್ಯ, ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ ಹಾಗೂ ಪ್ರಮುಖರಾದ ಎಸ್.ಎಸ್.ಜ್ಯೋತಿ ಪ್ರಕಾಶ್, ಡಾ.ಧನಂಜಯ ಸರ್ಜಿ, ನಾಗರಾಜ್ ಕಂಕಾರಿ, ಎಸ್.ಯೋಗೀಶ್, ಎಸ್.ಪಿ. ದಿನೇಶ್, ಅನಿತಾ ರವಿಶಂಕರ್, ಈ.ವಿಶ್ವಾಸ್, ಯಮುನಾ ರಂಗೇಗೌಡ, ರೇಖಾ ರಂಗನಾಥ್, ದೀನರಾಜ್ ಹೊನ್ನಾವಿಲೆ ಮುಂತಾದವರು ಉಪಸ್ಥಿತರಿರುವರು ಎಂದರು.
ಸಹಕಾರ ರತ್ನ ಪ್ರಶಸ್ತಿ ಪಡೆದ ಹೆಚ್.ಎಲ್. ಷಡಾಕ್ಷರಿರವರನ್ನು ಅಭಿನಂದಿಸಲಾಗುವುದು ಇದೇ ದಿನ ವಚನ ನೃತ್ಯವನ್ನು ಆಯೋಜಿ ಸಲಾಗಿದೆ ಎಂದರು.


ಡಿ.೧೯ರಂದು ಸಂಜೆ ೬.೩೦ಕ್ಕೆ ಬಸವ ಕೇಂದ್ರದಲ್ಲಿ ಗಣಪರ್ವ ಏರ್ಪಡಿಸಿದ್ದು ಇದರಲ್ಲಿ ಚೌಕಿ ಮಠ ಶ್ರೀಗಳಾದ ನೀಲಕಂಠ ಸ್ವಾಮಿ, ಸಿದ್ದರಹಳ್ಳಿಯ ಮಲ್ಲಿಕಾರ್ಜುನ ಸ್ವಾಮಿ, ಗರಡಿಗವಿ ಮಠದ ಶಿವಶಂಕರ ಶಿವಯೋಗಿ ಸ್ವಾಮಿ, ವಿರಕ್ತಮಠದ ಚನ್ನಬಸವ ಸ್ವಾಮಿ, ತಂಗನ ಹಳ್ಳಿಯ ಬಸವಮಹಾಲಿಂಗಸ್ವಾಮಿ ಸಾನಿಧ್ಯ ವಹಿಸಲಿದ್ದು, ಸಮಾಜದ ಬಾಂಧವರು ತಮ್ಮ ತಮ್ಮ ಮನೆಗಳಿಂದ ರೊಟ್ಟಿ ಬುತ್ತಿ ತಂದು ಸಾಮೂಹಿಕ ಭೋಜನ ಮಾಡುವರು ಎಂದರು.


ಇದರ ಸಾನಿಧ್ಯವನ್ನು ಹಾರನಹಳ್ಳೀ ಕೋಡಿಮಠ ಮಹಾಸಂಸ್ಥಾನದ ಶ್ರೀಗಳಾದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ವಹಿಸುವರು. ವಿಶೇಷ ಆಹ್ವಾನಿ ತರಾಗಿ ಈಶ್ವರಿ ವಿಶ್ವವಿದ್ಯಾಲಯದ ಡಾ. ಮೃತ್ಯಂಜಯ ಅಣ್ಣಾಜಿ, ಡಾ. ಬಸವರಾಜ ರಾಜಋಷಿ ಭಾಗವಹಿಸುವರು.
ವಿಶ್ರಾಂತ ಪ್ರಾಧ್ಯಾಪಕ ಡಾ. ಹೆಚ್.ಎಸ್. ಶಿವಪ್ರಕಾಶ ಭಾರತೀಯ ಸಂಸ್ಕೃತಿ ಮತ್ತು ಯುವಜನಾಂಗ ಕುರಿತು ಉಪನ್ಯಾಸ ನೀಡುವರು. ವಚನ ಗಾಯನ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಬಸವಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ, ಪ್ರಮುಖರಾದ ರುದ್ರಮುನಿ ಸಜ್ಜನ್, ಎ.ಎಸ್.ಚಂದ್ರಶೇಖರ್, ಹೆಚ್. ಸಿ.ಯೋಗೀಶ್, ಪಿ.ಚಂದ್ರಪ್ಪ, ಆರ್.ಸ್ವಾಮಿ, ಚಂದ್ರಶೇಖರ್ ಇದ್ದರು.

Exit mobile version