Site icon TUNGATARANGA

ಎಂಪಿಎಂ ಆರಂಭಕ್ಕೆ ಶಾಸಕ ರುದ್ರೇಗೌಡರಿಂದ ಸಮಗ್ರ ಮಾಹಿತಿಯೊಂದಿಗಿನ ಒತ್ತಾಯ, ಅದಿವೇಶನದ ಒತ್ತಾಯ, ವೀಡಿಯೋ ನೋಡಿ

ಎಂಪಿಎಂ ಆರಂಭಕ್ಕೆ ಶಾಸಕ ರುದ್ರೇಗೌಡರಿಂದ ಸಮಗ್ರ ಮಾಹಿತಿಯೊಂದಿಗಿನ ಒತ್ತಾಯ.  #belagaviadhiveshan

ಭದ್ರಾವತಿಯ ಎಂಪಿಎಂ ಪುನರಾರಂಭಿಸಲು ವಿಧಾನ ಪರಿಷತ್ ಶಾಸಕ ಹಾಗೂ ವಿಶೇಷವಾಗಿ ಕೈಗಾರಿಕೋದ್ಯಮಿ, ಕಾರ್ಮಿಕರ ನೋವು ನಲಿವು ಬಲ್ಲವರಾಗಿರುವ ಎಸ್. ರುದ್ರೇಗೌಡರು ಇಂದು ಅದಿವೇಶನದಲ್ಲಿ ಒತ್ತಾಯಿಸಿದರು.

ಭದ್ರಾವತಿ ನಗರದ ಮೈಸೂರು ಕಾಗದ ಕಾರ್ಖಾನೆಯ ಸ್ಥಿತಿಗತಿಯ ಬಗ್ಗೆ ಸವಿಸ್ತಾರವಾಗಿ, ಇಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ತಮ್ಮ ಚುಕ್ಕಿ ಪ್ರಶ್ನೆಯ ಮೂಲಕ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಅವರನ್ನು ಪ್ರಶ್ನಿಸಿ ಕೂಡಲೇ ಕಾರ್ಖಾನೆ ಆರಂಭಿಸಲು ಆಗ್ರಹಿಸಿದರು.

ಈ ಸುದ್ದಿಗಳನ್ನೂ ಓದಿ

20 ದಿನಗಳಲ್ಲಿ 17 ಬೈಕ್ ಕದ್ದ ಅಂತರ ಜಿಲ್ಲಾ ಬೈಕ್ ಕಳ್ಳನೊಬ್ಬ ಬಂಧಿಸುವಲ್ಲಿ ಯಶಸ್ವಿಯಾದ ಪೋಲಿಸರು/ ಹೇಗೆ ಗೊತ್ತಾ ಎಸ್.ಪಿ ಮಿಥುನ್‌ಕುಮಾರ್ ಸಂಪೂರ್ಣ ವಿವರ https://tungataranga.com/?p=25944

ಅಂಚೆನೌಕರರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ/ ಗ್ರಾಮೀಣ ಅಂಚೆ ನೌಕರರ ಸಂಘದ ವತಿಯಿಂದ ಅನಿರ್ಧಿಷ್ಟಾವಧಿ ಮುಷ್ಕರ https://tungataranga.com/?p=25950

ಮೇಲಿನ 👆👆ಸಂಪೂರ್ಣ ಸುದ್ದಿ ಓದಲು ಕೊಟ್ಟಿರುವ ಲಿಂಕ್ ಬಳಸಿ


ವಿಧಾನಪರಿಷತ್ ಶಾಸಕರಾದ ಶ ಎಸ್ ರುದ್ರೇಗೌಡರು ಮಾತನಾಡುತ್ತಾ ಎಂಪಿಎಂ ಆರಂಭಿಸದೇ ವರ್ಷದಿಂದ ವರ್ಷಕ್ಕೆ, ಹಾಗೆಯೇ ಬಿಡುತ್ತಿದ್ದು, ಇದರ ಖರ್ಚು ವೆಚ್ಚಗಳು ಹಾಗೆ ಜಾಸ್ತಿಯಾಗುತ್ತಾ ಹೋಗುತ್ತದೆ, ಇದರಿಂದ ಸರ್ಕಾರಕ್ಕೆ ನಷ್ಟವೂ ಆಗುತ್ತದೆ, ಇತ್ತ ಜನರಿಗೆ, ರೈತರಿಗೆ ಕಾರ್ಮಿಕರಿಗೆ ಕೆಲಸವೂ ಇಲ್ಲದೆ, ಸರ್ ಎಂ ವಿಶ್ವೇಶ್ವರಯ್ಯ ನವರು ಕಟ್ಟಿ ಬೆಳೆಸಿದ ಈ ಕಾರ್ಖಾನೆಯನ್ನು ಪುನರಾರಂಭಿಸದೆ, ಸರ್ಕಾರ ನಿರ್ಲಕ್ಷ ವಹಿಸುತ್ತಿದೆ. ಮೂರು ವರುಷದಿಂದ ಎಷ್ಟು ಬಾರಿ ಹೇಳಿದರೂ ಕಾರ್ಖಾನೆಯನ್ನು ಪುನರಾರಂಭಿಸದೆ, ಸರ್ಕಾರ ನಿರ್ಲಕ್ಷಿಸಿರುವುದು ದುರಾದೃಷ್ಟಕರ ಸಂಗತಿ ಎಂದರು.
ರಾಜ್ಯ ಸರ್ಕಾರ ಈ ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಈ ಎಂಪಿಎಂ ಕಾರ್ಖಾನೆಯನ್ನು ಪುನರಾರಂಭಿಸಿ, ರೈತರಿಗೆ, ಜನರಿಗೆ ಉದ್ಯೋಗ ಸಿಗುವ ಹಾಗೆ ಗಮನ ಹರಿಸಬೇಕು, ಎಂದು ಸರ್ಕಾರವನ್ನ ಒತ್ತಾಯಿಸಿದರು.
ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.

Exit mobile version