Site icon TUNGATARANGA

ಮುಸ್ಲಿಂರಿಗೆ 10,000 ಕೋಟಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಖಂಡಿಸಿ | ರಾಜ್ಯ ಸರ್ಕಾರವನ್ನು ವಜಾ ಮಾಡಲು ಅಗ್ರಹ

ಶಿವಮೊಗ್ಗ,ಡಿ.08: ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮುಸ್ಲಿಂರಿಗೆ 10,000 ಕೋಟಿ ಕೊಡುತ್ತೇನೆ ಹೇಳಿರುವುದನ್ನು ಖಂಡಿಸಿ ರಾಜ್ಯ ಸರ್ಕಾರವನ್ನು ವಜಾ ಮಾಡಲು ಆಗ್ರಹಿಸಿ ವಿಶ್ವಹಿಂದೂಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮುಸ್ಲಿಂ ಧರ್ಮ ಗುರುಗಳ ಸಮಾವೇಶದಲ್ಲಿ ಭಾಗವಹಿಸಿದ್ದರು. ಆಗ ಮುಸ್ಲಿಂರಿಗೆ 10 ಸಾವಿರ ಕೋಟಿ ಕೊಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ. ಇದು ಸಂವಿಧಾನ ವಿರೋಧಿಯಾಗಿದೆ ಎಂದು ಪ್ರತಿಭಟನಕಾರರು ತಿಳಿಸಿದರು.

ಅಲ್ಲದೇ ಹುಬ್ಬಳಿಯ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಮುಖ್ಯಮಂತ್ರಿಯವರು ಶಂಕಿತ ಐಸಿಸ್ ಬೆಂಬಲಿಗನೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ ಇದನ್ನು ಕೂಡ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದರು.

ಮುಸ್ಲಿಂರಿಗೆ ಪ್ರತ್ಯೇಕ ಅನುದಾನ ನೀಡಲು ಸಂವಿಧಾನದಲ್ಲಿ ಅವಕಾಶವೇ ಇಲ್ಲ. ಭಾರತದ ಯಾವುದೇ ರಾಜ್ಯ, ಅಥವಾ ಯಾವುದೇ ಭಾಗದಲ್ಲಿ ವಾಸವಾಗಿರುವ ನಾಗರೀಕರ ಯಾವುದೇ ವಿಭಾಗವು ತನ್ನ ಲಿಪಿ ಹಾಗೂ ಸಂಸ್ಕøತಿಯನ್ನು ಹೊಂದಿದ್ದರೆ ಅದನ್ನ

ರಕ್ಷಿಸುವ ಹಕ್ಕು ಇರುತ್ತದೆ. ಆದರೆ ಮುಸ್ಲಿಂ ಸಮುದಾಯಕ್ಕೆ ವಿಶಿಷ್ಟ ಭಾಷೆಯಾಗಲಿ, ಲಿಪಿಯಾಗಲಿ, ಸಂಪ್ರದಾಯವಾಗಲಿ ಇಲ್ಲದೇ ಇರುವುದರಿಂದ ಆರ್ಟಿಕಲ್ 29ರ ಪ್ರಕಾರ ಇಲ್ಲದೇ ಇರುವುದರಿಂದ ಅವರಿಗೆ ಅನುದಾನ ನೀಡಲು ಬರುವುದಿಲ್ಲ ಇದು ಸಂವಿಧಾನ ವಿರೋಧಿಯಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಅಲ್ಲದೇ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ತನ್ವೀರ್‍ಪೀರಾ ಎಂಬ ಮುಸ್ಲಿಂ ಮೌಲಿಗೆ ಶಂಕಿತ ಭಯೋತ್ಪಾದಕರ ಸಂಘಟನೆಗಳ ನಂಟು ಇದೆ. ಈತ ಒಬ್ಬ ದೇಶ ದ್ರೋಹಿ ಇಂತಹವರ ಜೊತೆ ವೇದಿಕೆ ಹಂಚಿಕೊಂಡಿರುವುದು ಸರಿಯಲ್ಲ. ಭಾರತದ ಆಂತರಿಕ ಭದ್ರತೆಗೆ ಸವಾಲಾಗಿರುವ ಈ ಪ್ರಕರಣವನ್ನು ಕೂಡ ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ವಾಸುದೇವ್, ರಾಜೇಶ್‍ಗೌಡ, ನಾರಾಯಣವರ್ಣೇಕರ್, ವಡಿವೇಲ್ ಸೇರಿದಂತೆ ಹಲವರಿದ್ದರು

Exit mobile version