Site icon TUNGATARANGA

ಶಿವಮೊಗ್ಗ ವಿನೋಬನಗರದಲ್ಲಿ ಬೈಕ್ ವ್ಹೀಲಿಂಗ್ ಮಾಡ್ತಿದ್ದೋರಿಗೆ ಬಿದ್ದ ದಂಡವೆಷ್ಟು ಗೊತ್ತಾ?


ಶಿವಮೊಗ್ಗ, ಡಿ.08
ಜನರು ಹೆಚ್ಚಾಗಿರುವ ವಿನೋಬನಗರ ನೂರಡಿ ರಸ್ತೆಯಲ್ಲಿ ಬೈಕ್ ಗಳಲ್ಲಿ ವ್ಹೀಲಿಂಗ್ ಮಾಡುತ್ತಾ, ಜನರಲ್ಲಿ ಆತಂಕ ಉಂಟು ಮಾಡುತ್ತಿದ್ದ ಆರೋಪಿಗಳಿಬ್ಬರು ಹಾಗೂ ಬೈಕ್ ಮಾಲಿಕನಿಗೆ ನ್ಯಾಯಾಲಯ ದಂಡ ವಿಧಿಸಿದೆ.


ಸಮಗ್ರ ವಿವರ ದಿನಾಂಕ:15/08/2023 ರಂದು ಬೆಳಿಗ್ಗೆ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ವಿನೋಬನಗರ ಡಿ.ವಿ.ಎಸ್. ಶಾಲೆ ಮುಂಭಾಗದ 100 ಅಡಿ ರಸ್ತೆಯಲ್ಲಿ *ಫೈಸಲ್ ಅಹ್ಮದ್ ಮತ್ತು ಸೂಫಿಯಾನ್ ಖಾನ್ ಎಂಬ ಯುವಕರಿಬ್ಬರು ಎರಡು YAMAHA RX ಬೈಕಿಗಳಲ್ಲಿ ಅತಿ ವೇಗ, ಅಜಾಗರುಕತೆ ಮತ್ತು ಅಪಾಯಕಾರಿ ರೀತಿಯಲ್ಲಿ ಸಾರ್ವಜನಿಕರ ಮತ್ತು ತನ್ನ ಪ್ರಾಣಕ್ಕೆ ಹಾನಿಯಾಗುವಂತೆ ವ್ಹೀಲಿಂಗ್ ಮಾಡುತ್ತಿದ್ದು, ಈ ಬಗ್ಗೆ ಗುನ್ನೆ ಸಂಖ್ಯೆ 0107/2023 ಕಲಂ 279 ಐಪಿಸಿ, 184, 189, 177 ಐಎಂವಿ ಕಾಯ್ದೆ ಮತ್ತು 51 ಸಿಎಂವಿ ರೂಲ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತದೆ.
ಪ್ರಕರಣದ ತನಿಖಾಧಿಕಾರಿಗಳಾದ ತಿರುಮಲೇಶ್, ಪಿಎಸ್ಐ ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ರವರು ಬೈಕ್ ಗಳ ಚಾಲಕರು & ಮಾಲೀಕ ಸೇರಿ 3 ಜನ ಆರೋಪಿತರ ವಿರುದ್ದ ಘನ ನ್ಯಾಯಾಲಯಕ್ಕೆ ದೋಷರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.


ಘನ ನ್ಯಾಯಾಲಯದಲ್ಲಿ ಕಿರಣ್ ಕುಮಾರ್ ಸಹಾಯಕ ಸರ್ಕಾರಿ ಅಭಿಯೋಜಕರು ಪ್ರಕರಣದ ವಾದ ಮಂಡಿಸಿದ್ದು, ಘನ 3ನೇ ಎಸಿಜೆ & ಜೆಎಂಎಫ್ ಸಿ, ಶಿವಮೊಗ್ಗ, ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಪ್ರಕರಣದ ಆರೋಪಿತರ ವಿರುದ್ಧ ಆರೋಪ ದೃಢ ಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಧೀಶರಾದ ಮಾಯಪ್ಪರವರು ಆರೋಪಿ 1) ಫೈಸಲ್ ಅಹ್ಮದ್, 20 ವರ್ಷ, ಇಲಿಯಾಸ್ ನಗರ ಶಿವಮೊಗ್ಗ ಟೌನ್ ಈತನಿಗೆ 11,000 ರೂ, ದಂಡ, 2) ಸೂಫಿಯಾನ್ ಖಾನ್, 21 ವರ್ಷ ಟ್ಯಾಂಕ್ ಮೊಹಲ್ಲಾ , ಶಿವಮೊಗ್ಗ ಟೌನ್ ಈತನಿಗೆ 8000 ರೂ ದಂಡ ಮತ್ತು ಬೈಕಿನ ಆರ್ ಸಿ ಮಾಲೀಕನಾದ 3) ಮೊಹಮ್ಮದ್ ಸೈಫುಲ್ಲಾ, 50 ವರ್ಷ, ಇಲಿಯಾಸ್ ನಗರ ಶಿವಮೊಗ್ಗ ಟೌನ್ ಈತನಿಗೆ 4500 ರೂ ದಂಡ ವಿಧಿಸಿ ಅದೇಶಿಸಿರುತ್ತದೆ.

Exit mobile version