Site icon TUNGATARANGA

ನ್ಯಾ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಶೀಘ್ರವೇ ಜಾರಿಗೊಳಿಸಲು ಧರಣಿ

ಶಿವಮೊಗ್ಗ,ಡಿ.೦೨: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಶೀಘ್ರವೇ ಜಾರಿಗೊಳಿಸಬೇಕೆಂದು ಆಗ್ರಹಿಸಿ ಡಾ.ಬಿ.ಆರ್.ಅಂಬೇಡ್ಕರ್ ಆದಿ ಜಂಬವ ರಾಜ್ಯ ಸಮಿತಿ, ಜಿಲ್ಲಾ ಹೊಲೆಯ ಮಾದಿಗ ಜಾತಿಗಳ ಹಿತರಕ್ಷಣಾ ಸಮಿತಿ, ಬಿಎಸ್‌ಪಿ ಸಂಘಟನೆಗಳು ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.

ಪರಿಶಿಷ್ಟರ ಬದುಕು ಅತಂತ್ರದಲ್ಲಿದೆ. ಮಲ ಹೋರುವುದು ಸೇರಿದಂತೆ ಇನ್ನು ಹೀನ ಕಸೂಬುಗಳನ್ನು ಮಾಡುತ್ತಾ ಬಂದಿದ್ದಾರೆ. ಎಲ್ಲಾ ರಂಗಗಳಲ್ಲಿಯೂ ಹಿಂದೆ. ಉಳಿದಿದ್ದಾರೆ. ಜೀವನ ಭದ್ರತೆ ಇಲ್ಲ. ಸಂವಿಧಾನಾತ್ಮಕವಾಗಿ ಸಿಗುವ ಸೌಲಭ್ಯಗಳು ದೊರೆಯುತ್ತಿಲ್ಲ. ಒಳ ಮೀಸಲಾತಿ ಜಾರಿ ಆಗಬೇಕಾಗಿದೆ. ಈ ಹಿನ್ನಲೆಯಲ್ಲಿ ಸದಾಶಿವ ಆಯೋಗದ ವರದಿಯನ್ನು ಬಿಡುಗಡೆ ಮಾಡಿ ಕೇಂದ್ರ ಸರ್ಕಾರದ ಅನುಮತಿ ಪಡೆದು ಜಾರಿಗೊಳಿಸಬೇಕು ಎಂದು ಧರಣಿನಿರತರರು ಆಗ್ರಹಿಸಿದರು.

ಪರಿಶಿಷ್ಟರಿಗೆ ಕೈಗಾರಿಕೋದ್ಯಮಕ್ಕೆ ಪ್ರೋತ್ಸಾಹ ನೀಡಬೇಕು. ಖರ್ಚಾಗದೆ ಉಳಿದ ಅನುದಾನವನ್ನು ಮುಂದಿನ ಬಜೆಟ್‌ಗೆ ಸೇರಿಸಬೇಕು. ಉಪಯೋಜನೆಗೆ ಸೇರಿಸಲು ಕಾಯ್ದೆ ರೂಪಿಸಬೇಕು. ಶೈಕ್ಷಣಿಕ ಅಸಮಾನತೆ ನಿವಾರಿಸಬೇಕು. ಕೈಗಾರಿಕೋದ್ಯಮಕ್ಕೆ ಸಾಲ ಸೌಲಭ್ಯ ನೀಡುವುದರ ಜೊತೆಗೆ ಶೇ.೮೦ರಷ್ಟು ಸಹಾಯಧನ ನೀಡಬೇಕು, ಸ್ಥಾಪನೆಗೆ ಇರುವ ಕಠಿಣ ನಿರ್ಬಧಗಳನ್ನು ತೆಗೆದು ಹಾಕಬೇಕು. ಕೂಡಲೇ ವರದಿಯನ್ನು ಜಾರಿಗೊಳಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಪ್ರತಿಭಟನೆಯಲ್ಲಿ ಮೂರು ಸಂಘಟನೆಗಳ ಪ್ರಮುಖರಾದ ಸಾವಕ್ಕನವರ್, ಅಶೋಕ್‌ಕುಮಾರ್, ಚಂದ್ರಪ್ಪ, ಪ್ರೊ.ರಾಚಪ್ಪ, ಚೆನ್ನವೀರಪ್ಪ ಗಾಮನಕಟ್ಟಿ, ನರಸಪ್ಪ, ಹನುಮಂತಪ್ಪ, ಶಿವಕುಮಾರ್, ಹಾರ‍್ನನಳ್ಳಿ ಹಳದಪ್ಪ, ಕರಿಸಬಪ್ಪ, ಎನ್.ಪ್ರಕಾಶ್, ಎ.ಡಿ.ಶಿವಪ್ಪ, ಲಕ್ಷ್ಮೀಪತಿ ಸೇರಿದಂತೆ ಹಲವರಿದ್ದರು.

Exit mobile version