Site icon TUNGATARANGA

ಭಾಗವಾನ್ ಆಶ್ರಮ ಧ್ವಂಸ ತಪ್ಪಿಸ್ಥತರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಅಗ್ರಹ

ಶಿವಮೊಗ್ಗ,ಡಿ.೦೧: ಶಿವಮೊಗ್ಗ ನಗರದ ೧೩ನೇ ವಾರ್ಡಿನ ಮೀನಾಕ್ಷಿ ಭವನ್ ಹಿಂಭಾಗದ ಟಿ.ಜಿ.ಎನ್. ಲೇಔಟ್ ಹಿಂಭಾಗದ ಆಶ್ರಮದ ರಸ್ತೆಯಲ್ಲಿರುವ ಭಾಗವಾನ್ ಆಶ್ರಮವನ್ನು ಧ್ವಂಸ ಮಾಡಿರುವವರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಲೆನಾಡು ಕೇಸರಿ ಪಡಿ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.


ಈ ಭಗವಾನ್ ಆಶ್ರಮವು ಅವುದೂತ ಪರಂಪರೆಗೆ ಸೇರಿದ್ದು, ಲಕ್ಷಾಂತರ ಜನರ ಶ್ರದ್ಧಾ ಕೇಂದ್ರವಾಗಿದೆ. ಅನೇಕ ತಲೆಮಾರುಗಳಿಂದ ಈ ಜಾಗದಲ್ಲಿ ಸತ್ಸಂಗ, ಪೂಜಾ ಪುನಸ್ಕಾರಗಳು ಅನ್ನ ಸಂತರ್ಪಣೆ ಅದರಲ್ಲೂ ವಿಶೇಷವಾಗಿ ದತ್ತ ಜಯಂತಿ ಸಂದರ್ಭದಲ್ಲಿ ಇಡಿ ನಗರ ಮತ್ತು ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ಗುರುಬಂಧುಗಳು ಬಂದು ಸೇವೆ ಸಲ್ಲಿಸುತ್ತಿದ್ದಾರೆ.

ಈ ಶ್ರದ್ಧಾ ಕೇಂದ್ರವು ಹಳೆಯ ಹಂಚಿನ ಮತ್ತು ಮಣ್ಣಿನ ಗೋಡೆಯ ಕಟ್ಟಡವಾಗಿದ್ದರಿಂದ ಶಿಥಿಲಾವಸ್ಥೆಯಲ್ಲಿದ್ದು, ಮಳೆಗಾಲದ ಸಂದರ್ಭದಲ್ಲಿ ಬೀಳುವ ಹಂತದ್ದಲ್ಲಿದ್ದಾಗ, ಆ ಜಾಗದ ಮುಂಭಾಗದಲ್ಲಿ ತಾತ್ಕಲಿಕ ಶೆಡ್‌ನಲ್ಲಿ ಗುರುಗಳ ಪಾದುಕೆಯನ್ನು ಪ್ರತಿಷ್ಠಾಪಿಸಿ ನಿತ್ಯವು ಪೂಜೆ ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ ನ.೨೧ರಂದು ಕೆಲವು ಭೂ ಮಾಪಿಯ ಪಟ್ಟಭದ್ರ ಹಿತಾಸಕ್ತಿಗಳು

ಏಕಾಏಕಿ ಒಂದು ತಂಡವಾಗಿ ಬಂದು ಗೂಂಡಾವರ್ತನೆಯಿಂದ ಈ ಜಾಗದ ಹಕ್ಕುದಾರಿಕೆ ನಮ್ಮ ಬಳಿ ಇದೆ ಎಂದು ಸುಳ್ಳು ಹೇಳುತ್ತಾ ಜೆಸಿಬಿ ಯಂತ್ರ ಬಳಸಿ ದ್ವಂಸಮಾಡಿರುತ್ತಾರೆ. ನಂತರ ಭಕ್ತರು ಮತ್ತು ಟ್ರಸ್ಟಿಗಳು ಹಾಗೂ ಸ್ಥಳಿಯರು ಈ ಸಂಬಂಧ ಸದರಿ ಕೋಟೆ ಠಾಣೆಯಲ್ಲಿ ದೂರು ಸಲ್ಲಿಸಿದ್ದು ಭಕ್ತರ ಸಹಾಯದಿಂದ ತಾತ್ಕಲಿಕ ಶೆಡ್‌ನಲ್ಲಿ ದೇವರನ್ನು ಪುನಃ ಪ್ರತಿಷ್ಠಾಪಿಸಿರುತ್ತಾರೆ.

ಈ ವ್ಯಕ್ತಿಗಳು ಈ ಕ್ಷಣದ ವರೆಗೆ ನ್ಯಾಯಲಯದ ಆದೇಶವಾಗಲಿ, ಹಕ್ಕುದಾರಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಠಾಣೆಗೆ ಕೊಟ್ಟಿರುವುದಿಲ್ಲ. ಈಗಲೂ ಸಹ ಭಯದ ವಾತಾವರಣ ನಿರ್ಮಿಸುತ್ತಿದ್ದು, ಇವರ ಮೇಲೆ ಕಾನೂನಾತ್ಮಕ ಕ್ರಮ ಕೈಗೊಂಡು ರಕ್ಷಣೆಯನ್ನು ಕೊಡಬೇಕಾಗಿ ಮಲೆನಾಡು ಕೇಸರಿ ಪಡೆಯ ಅಧ್ಯಕ್ಷರು ಮತ್ತು ಸದಸ್ಯರು ಜಿಲ್ಲಾಧಿಕಾರಿಗಳಲ್ಲಿ ವಿನಂತಿಸಿದ್ದಾರೆ.

Exit mobile version