ಶಿವಮೊಗ್ಗ ವಿನೋಬನಗರ ಶಿವಾಲಯದಲ್ಲಿ ಎಲ್ಲರ ನಗೆಗಡಲಲ್ಲಿ ತೇಲಿಸಿದ ಸುಖೀ ಸಂಸಾರ ನಾಟಕದ ಮೊದಲ ಮಿಂಚು ನೋಡಿ. ಇದು ಕಲೆ ಬೆಳೆಸಲು ತಗೆದ ಪುಟ್ಟ ವೀಡಿಯೋ…,
ಶಿವಮೊಗ್ಗ,ಡಿ.1:
ಶಿವಮೊಗ್ಗ ವಿನೋಬನಗರದ ಶ್ರೀ ವೀರಶೈವ ಸೇವಾ ಸಮಿತಿ ಆಶ್ರಯದಲ್ಲಿ ಶಿವಾಲಯದ ಆವರಣದಲ್ಲಿ ನಡೆದ ಉಜ್ಜಯಿನಿ ಜಗದ್ಗುರುಗಳ ಇಷ್ಟಲಿಂಗ ಪೂಜೆ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಸಂಜೆ ಹಮ್ಮಿಕೊಂಡಿದ್ದ ಗುರೂ ಇನ್ಸ್ಟಿಟ್ಯೂಟ್ ಹುಬ್ಬಳ್ಳಿ ಅಭಿನಯಿಸಿದ ಯಶವಂತ್ ಸರದಶಪಾಂಡೆ ಅವರ ಹೊಚ್ಚಹೊಸ ಹಾಸ್ಯ ನಾಟಕ ಸೂಪರ್ ಸಂಸಾರ ಅತ್ಯಂತ ಯಶಸ್ವಿಯಾಗಿ ಜನ ಮೆಚ್ಚುಗೆಗೆ ಪಾತ್ರವಾಯಿತು.
ನಾಟಕದಲ್ಲಿರುವ ಏಳು ಪಾತ್ರಗಳಲ್ಲಿ ಸರದೇಶಪಾಂಡೆ ಅವರು ಕಟ್ಟಿಟ್ಟ ಕಥೆಯೊಂದನ್ನು ಆಧರಿಸಿ ಅದರೊಳಗಿನ ವಿಶೇಷ ಚೇತನರ ಬದುಕು, ನಂತರದ ತಿರುವುಗಳ ನಡುವೆ ಸಂಸಾರದ ಬಾಂಧವ್ಯ, ಪ್ರೀತಿ ವಿಶ್ವಾಸ, ಗಂಡ ಹೆಂಡತಿ ನಡುವಿನ ಇರಬೇಕಾದ ಮನೋಧರ್ಮ, ವೈಕಲ್ಯಗಳನ್ನು ಮೀರಿದ ಪ್ರೀತಿ ಅಭಿವ್ಯಕ್ತಿಪಡಿಸಿದ್ದು ಇದರ ವಿಶೇಷತೆ ಎನ್ನಬಹುದು.
ಈ ಸುದ್ದಿಯನ್ನೂ ಓದಿ
https://tungataranga.com/?p=25658
ಹಣವಂತಿಕೆಗಿಂತ ಬದುಕಲ್ಲಿ ಏನು ಬೇಕು ಎಂದಿರುವುದೇ ಉಜ್ಜಯನಿ ಪೀಠ/ ಶಿವಮೊಗ್ಗ ವಿನೋಬನಗರ ಶಿವಾಲಯದ ಇಷ್ಟಲಿಂಗ ಮಹಾಪೂಜೆ : ಭಕ್ತಿ ಪ್ರಧಾನ ಸಮಾರಂಭ- ವೀಡಿಯೋ ನೋಡಿ
ಲಿಂಕ್ ಬಳಸಿ ಸುದ್ದಿ ನೋಡಿ, ತಾವು ತುಂಗಾತರಂಗ ಗುಂಪಲ್ಲಿ ಇಲ್ದಿದ್ರೆ ಇಲ್ಲಿ ಸೇರಿ https://chat.whatsapp.com/HURi0BXGAC8G7NsgyLJXXt
ಈ ನಾಟಕವನ್ನು ಸುಮಾರು 2000ದಷ್ಟು ಜನ ವೀಕ್ಷಿಸಿ ಸಂಭ್ರಮಿಸಿದರು. ಆರಂಭದಿಂದಲೂ ಎರಡು ಮನೆಯ ಪರಸ್ಪರ ಮಾತುಕತೆ, ರಾತ್ರಿ ಕಣ್ಣು ಕಾಣದ ಯುವಕ, ಹಗಲು ಕಣ್ಣು ಕಾಣದ ಯುವತಿ, ಕಿವಿ ಕೇಳದ ಓರ್ವ ಯಜಮಾನ, ಮರೆವಿನ ಕಾಯಿಲೆಯಿಂದ ಬಳಲುವ ಮತ್ತೋರ್ವ ಯಜಮಾನ, ಹಾಗೆಯೇ ಇವರ ನಡುವೆ ಒಂದೇ ಒಂದು ಅಕ್ಷರ ಮಾತನಾಡುವ ತಾಕತ್ತಿರುವ ವೈಕಲ್ಯದ ಯುವಕನ ಪಾತ್ರ, ಇದನ್ನು ನಿಬಾಯಿಸಿ ಮದುವೆ ಮಾಡುವ ಯಶಸ್ವಿ ಯಜಮಾನತಿಯರ ಅಭಿನಯ ಸಂಭಾಷಣೆ ಕೇಳುತ್ತಾ ಹೋದರೆ ನಕ್ಕ ಪ್ರಮಾಣಕ್ಕೆ ಕೊರತೆ ಏನು ಕಾಣುವುದಿಲ್ಲ.
ಮಧ್ಯವಯಸ್ಕರು, ಯುವ ಹಾಗೂ ವೃದ್ಧರು ಅತ್ಯಂತ ಖುಷಿಯಿಂದಲೇ ಸಂಭಾಷಣೆಗಳನ್ನು ಕೇಳುತ್ತಾ ನಕ್ಕು ನಲಿದರು. ಸಂಸಾರವೆಂದರೆ ಹೇಗಿರಬೇಕೆಂಬುದನ್ನು ಎಳೆ ಎಳೆಯಾಗಿ ಬಿಚ್ಚಿದ ನಾಟಕದ ಪ್ರದರ್ಶನಕ್ಕೆ ಜನ ಮೆಚ್ಚುಗೆ ವ್ಯಕ್ತವಾಯಿತು.
ಇಡೀ ದಿನ ವಾರ್ಷಿಕೋತ್ಸವ ನಿಮಿತ್ತದ ಪೂಜೆ, ಧಾರ್ಮಿಕ ಪ್ರವಚನ ಹಾಗೂ ನಾಟಕದ ರಂಗಿನಲ್ಲಿ ಶಿವಮೊಗ್ಗದ ಶಿವಾಲಯ ಅದರಲ್ಲೂ ವಿಶೇಷವಾಗಿ ವೀರಶೈವ ಸೇವಾ ಸಮಿತಿ ಕೈಗೊಂಡ ಕ್ರಮಕ್ಕೆ ಭಕ್ತಾದಿಗಳು ಹಾಗೂ ಸಾರ್ವಜನಿಕರು ಅಭಿನಂದಿಸಿದ್ದಾರೆ.
ಬೆಳಿಗ್ಗೆಯಿಂದ ಮೂರು ಸಂದರ್ಭದಲ್ಲಿ ತಿಂಡಿ ಹಾಗೂ ಊಟದ ವ್ಯವಸ್ಥೆಯನ್ನು ಅತ್ಯಂತ ವ್ಯವಸ್ಥಿತವಾಗಿ Challenging, ಅದೊಂದು ವಿಶೇಷ ಪ್ರಯತ್ನದ ಕಾರ್ಯವೇ ಹೌದು.