Site icon TUNGATARANGA

ಹಣವಂತಿಕೆಗಿಂತ ಬದುಕಲ್ಲಿ ಏನು ಬೇಕು ಎಂದಿರುವುದೇ ಉಜ್ಜಯನಿ ಪೀಠ/ ಶಿವಮೊಗ್ಗ ವಿನೋಬನಗರ ಶಿವಾಲಯದ ಇಷ್ಟಲಿಂಗ ಮಹಾಪೂಜೆ : ಭಕ್ತಿ ಪ್ರಧಾನ ಸಮಾರಂಭ- ವೀಡಿಯೋ ನೋಡಿ


ಶಿವಮೊಗ್ಗ ವಿನೋಬನಗರ ಶಿವಾಲಯದ ಇಷ್ಟಲಿಂಗ ಮಹಾಪೂಜೆಯಲ್ಲಿ ಷ||ಬ್ರ||ಡಾ|| ಅಭಿನವ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿ

https://youtu.be/gmw2YmHymmA?si=opcFN4aYlVIz7TDb
ಶಿವಮೊಗ್ಗ ವಿನೋಬನಗರದ ಶಿವಾಲಯದಲ್ಲಿಂದು ಉಜ್ಜಯನಿ ಜಗದ್ಗುರು ಶ್ರೀಗಳಿಂದ ಇಷ್ಟಲಿಂಗ ಪೂಜೆಯ ವಿಹಂಗಮ ನೋಟ- ತುಂಗಾತರಂಗ


ಶಿವಮೊಗ್ಗ,ನ.30:


ಗಾಳಿ ನೀರು ಬೆಳಕು ಎಲ್ಲರಿಗೂ ಒಂದೇ ಇರುವಾಗ ಮನುಷ್ಯನಲ್ಲಿ ಭೇದ ಭಾವವಿಲ್ಲ ಎಲ್ಲರೂ ಒಂದೇ ಎನ್ನುವುದೇ ಸದ್ಭರ್ಮ ಪೀಠ ಎಂದು ತಾವರೆಕರೆ ಶಿಲಾಮಠದ ಷ||ಬ್ರ||ಡಾ|| ಅಭಿನವ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದ್ದಾರೆ.


ಅವರು ಇಂದು ವಿನೋಬನಗರ ಶಿವಾಲಯದ ಆವರಣದಲ್ಲಿ ಶ್ರೀ ವೀರಶೈವ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರರ ಇಷ್ಟಲಿಂಗ ಮಹಾಪೂಜೆ ಪಂಚಮ ಕಳಸಾರೋಹಣ ವಾರ್ಷಿಕೋತ್ಸವ ಹಾಗೂ ಧರ್ಮ ಜಾಗೃತಿ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.


ಹಿಂದಿನ ಕಾಲದಿಂದಲೂ ಉಜ್ಜಯಿನಿ ಪೀಠ ನ್ಯಾಯ ದೊರಕಿಸುವ ಪೀಠವಾಗಿದೆ. ಎಲ್ಲರೂ ಹಣವಂತನಾಗೂ ಎಂದು ಆರ್ಶೀವದಿಸಿದರೆ, ಈ ಪೀಠವು ನ್ಯಾಯವಂತನಾಗು, ನೀತಿವಂತನಾಗು, ಸಮಾಜಕ್ಕೆ ಕೊಡುಗೆಯಾಗಿ ಬಾಳು ಎಂದು ಆರ್ಶೀವದಿಸುತ್ತದೆ. ನಾವೇ ಚೆನ್ನಾಗಿಲ್ಲ ಎಂದಾದರೆ ಆತನಿಗೆ ಯಾವುದು ಚೆನ್ನಾಗಿರುವುದಿಲ್ಲ. ಒಬ್ಬೊಬ್ಬರಿಗೆ ಒಂದೊಂದು ರೀಚಾರ್ಜ್ ಮಾಡಬೇಕಾಗುತ್ತದೆ. ಪ್ರತಿಯೊಬ್ಬರಲ್ಲೂ ಜ್ಞಾನದ ದಾಹ ಇರಬೇಕು. ಆಧ್ಯಾತ್ಮಿಕವಾಗಿ ರೀಚಾರ್ಜ್‌ವಾಗಬೇಕು. ಮತ್ತೊಬ್ಬ ಬಿದ್ದಾಗ ಮುಜುಗರ ಪಟ್ಟು ಆತನನ್ನು ಎಬ್ಬಿಸಿ ಸಾಂತ್ವನ ಹೇಳುವವನೇ ನಿಜವಾದ ಮನುಷ್ಯ ಎಂದರು.
ಮನುಷ್ಯನಾಗಿ ಮಾನವೀಯ ಮೌಲ್ಯಗಳನ್ನು ಪಾಲಿಸಬೇಕು. ಶಿವಲಿಂಗ ಕಲ್ಲಿನದ್ದು ಆಗಿದೆ. ಅದು ಅಸೂಯೆ ಪಡುವುದಿಲ್ಲ, ದ್ವೇಷ ಸಾಧನೆ ಮಾಡುವುದಿಲ್ಲ. ಅದಕ್ಕೆ ಹಿರಿಯರು ಕಲ್ಲಾಗಿ ಬಿಡು ಎನ್ನುತ್ತಾರೆ. ಕಲ್ಲಾದರೆ ನೀನು ದೇವರಾಗಬಹುದು ಎಂದು ಹೇಳುತ್ತಾರೆ. ಮನುಷ್ಯನಿಗೆ ಅಸೂಯೆ ಬಿಟ್ಟು ಮೊದಲು ಮಾನವೀಯತೆಯನ್ನು ರೂಢಿಸಿಕೊಂಡು ಬದುಕುವುದನ್ನು ಕಲಿಯಬೇಕು ಎಂದರು.


ಶಿವಮೊಗ್ಗ ಸರ್ಜಿ ಸಮೋಹದ ಡಾ|| ಧನಂಜಯ್ ಸರ್ಜಿ ಮಾತನಾಡಿ, ಕೃತಯುಗದಲ್ಲಿ ಮಂತ್ರ, ತ್ರೇತಾಯುಗದಲ್ಲಿ ತಂತ್ರ, ದ್ವಾಪರಯುಗದಲ್ಲಿ ವ್ಯೂಹ, ಕಲಿಯುಗದಲ್ಲಿ ಸಂಘಟನೆಯೇ ಶಕ್ತಿ ಎಂಬುದಕ್ಕೆ ಇವತ್ತಿನ ಸಮಾರಂಭ ಉದಾಹರಣೆಯಾಗಿದೆ. ನಾವು ಆಶೀರ್ವಾದ ಪಡೆಯಲು ಗುರುವಿನ ಬಳಿ ಬರುತ್ತೇವೆ. ವ್ಯಕ್ತಿಯನ್ನು ತಿದ್ದಿತೀಡುವ ಕಾರ್ಯವನ್ನು ಗುರುಗಳು ಮಾಡುತ್ತಾರೆ. ಲಕ್ಷಾಂತರ ಏಟು ಬೀಳುವ ಶಿಲೆ ವಿಗ್ರಹವಾಗಿ ಪೂಜಿಸಲ್ಪಡುವ ಆಗೆ ಮನುಷ್ಯನಿಗೆ ಕಷ್ಟಗಳು ಬಂದಷ್ಟು ಅವನು ಪರಿಪೂರ್ಣನಾಗುತ್ತಾನೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ನೂರಾರು ಮಹಿಳೆಯರಿಂದ ಶ್ರೀಗಳಿಗೆ ಪೂರ್ಣಕುಂಭ ಸ್ವಾಗತದೊಂದಿಗೆ ಅದ್ದೂರಿ ಮೆರವಣಿಗೆಯನ್ನು ಹಳೆ ಜೈಲು ಆವರಣದಿಂದ ಶಿವಾಲಯದವರೆಗೆ ಹಮ್ಮಿಕೊಳ್ಳಲಾಗಿತ್ತು.

ಧರ್ಮಜಾಗೃತಿ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಧೀಶ್ವರ ಶ್ರೀಶ್ರೀಶ್ರೀ೧೦೦೮ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ವಹಿಸಿದ್ದರು.
ಶ್ರೀ ಷ||ಬ್ರ||ಡಾ|| ಬಿಳಿಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಎಸ್. ಸಮಿತಿಯ ಪ್ರಮುಖರಾದ ಮುರುಗೇಶ್ ಕುಸುನೂರು, ಮಹೇಶ್‌ಮೂರ್ತಿ, ಹೆಚ್. ಮಲ್ಲಿಕಾರ್ಜುನ ಸ್ವಾಮಿ, ಉಮೇಶ್ ಹಿರೇಮಠ್, ಎ.ಎಂ. ಚಂದ್ರಯ್ಯ, ಎಸ್.ಮುರುಗೇಶ್, ಹೆಚ್. ಹೆಚ್. ಎಂ. ರುದ್ರಯ್ಯ ಶಾಸ್ತ್ರಿ ಮುಖ್ಯ ಅತಿಥಿಗಳಾಗಿ ಟಿ.ವಿ ಈಶ್ವರಯ್ಯ, ಎಸ್. ಜ್ಯೋತಿಪ್ರಕಾಶ್, ಎಸ್.ಪಿ. ದಿನೇಶ್, ಎನ್. ಎಂ. ರುದ್ರಪ್ಪ, ರುದ್ರಮುನಿ ಸಜ್ಜನ್, ಎನ್.ಜೆ. ರಾಜಶೇಖರ್(Subash,
), ಎಚ್.ಸಿ.ಯೋಗೀಶ್, ಅನಿತಾ ರವಿಶಂಕರ್, ಎಸ್.ಎಸ್. ಮಹಾಲಿಂಗಯ್ಯ ಶಾಸ್ತ್ರಿ, ಮಾಲತೇಶ್ ಹಾಗೂ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Exit mobile version