Site icon TUNGATARANGA

Shimoga/ ತುಂಗಾ ನದಿ ಮಲೀನವಾಗುತ್ತಿದ್ದರೂ ಪಾಲಿಕೆ ಅತ್ಯಂತ ದಿವ್ಯ ನಿರ್ಲಕ್ಷ್ಯ ಆಮ್ ಆದ್ಮಿ ಅರೋಪ

ಶಿವಮೊಗ್ಗ,ನ.30:

ತುಂಗಾ ನದಿ ಮಲೀನವಾಗುತ್ತಿದ್ದರೂ ಕೂಡ ಪಾಲಿಕೆ ಅತ್ಯಂತ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ.
ಇಂದು ಬೆಳಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ

ಆಪ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಜೀರ್ ಅಹಮ್ಮದ್ ತುಂಗಾ ನದಿ ದಿನ ದಿನಕ್ಕೂ ಮಲೀನವಾಗುತ್ತಿದೆ. ಪಾಲಿಕೆ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಇದಕ್ಕೆ ಉದಾಹರಣೆ ಎಂದರೆ ಕಳೆದ ೫ ವರ್ಷ

ಆಡಳಿತದಲ್ಲಿದ್ದ ಬಿಜೆಪಿ ಪಕ್ಷ ಒಂದು ದಿನವೂ ತುಂಗಾ ನದಿಯ ಸ್ವಚ್ಛತೆ ಬಗ್ಗೆ ಮಾತನಾಡಲಿಲ್ಲ. ಆದರೆ ತಮ್ಮ ಪಾಲಿಕೆ ಅವಧಿ ಮುಗಿಯುವ ಕೊನೆ ದಿನ ಕಾಟಾಚಾರಕ್ಕಾಗಿ ತುಂಗಾ ನದಿ ಸ್ವಚ್ಛತೆ ಬಗ್ಗೆ ಮಾತನಾಡಿರುವುದು ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದರು

.
ನದಿ ನೀರು ಕುಡಿಯಲು ಮತ್ತು ಬಳಸಲು ಕೂಡ ಯೋಗ್ಯವಲ್ಲ. ಇಡೀ ನಗರದ ಕೊಳಚೆ ನೀರು ನದಿಗೆ ನೇರವಾಗಿ ಸೇರುತ್ತಿದೆ. ಗಂಗಾ ಸ್ನಾನ ತುಂಗಾ ಪಾನ ಎನ್ನುವುದು ಸುಳ್ಳಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಯಾವ ಕೆಲಸವೂ ಆಗಲಿಲ್ಲ.

ಕೋಟ್ಯಂತರ ರೂ ಹಣ ದುರುಪಯೋಗವಾಗಿದೆ. ಇಡೀ ನದಿ ಕೊಳಚೆಯಿಂದ ಕೂಡಿದೆ ಎಂದರು.
ಆಮ್ ಆದ್ಮಿ ಪಾರ್ಟಿ ಇದನ್ನು ಖಂಡಿಸುತ್ತದೆ. ಮತ್ತು ತುಂಗಾ ನದಿಯ ಉಳಿವಿಗಾಗಿ

ತನ್ನ ಹೋರಾಟ ಕೈಗೊಳ್ಳಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆಮ್ ಆದ್ಮಿ ಪಾರ್ಟಿ ಪ್ರಮುಖರಾದ ಮಂಜುನಾಥ ಪೂಜಾರಿ, ಸುರೇಶ್ ಕೋಟೆಕರ್, ರಘು, ಶೇಖರಪ್ಪ, ಸಾತ್ವಿಕ್ ಮೊದಲಾದವರಿದ್ದರು.

Exit mobile version