Site icon TUNGATARANGA

ಇಲ್ಲಿ ಓಡಾಡಬೇಡಿ ಜೋಕೆ, ‘ಅಪಾಯ’ ವಾದರೆ ಅದಕ್ಕೆ (ಮೆಸ್ಕಾಂ..,ನಗರಪಾಲಿಕೆ) ಯಾರು ಹೊಣೆ…?

ಶಿವಮೊಗ್ಗ, ನ.29:
ಶಿವಮೊಗ್ಗ ನಗರದ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿಯ ಶಿವಪ್ಪ ನಾಯಕ ಅರಮನೆ ಮುಂಭಾಗದಲ್ಲಿ ಸುಖಾ ಸುಮ್ಮನೆ ಓಡಾಡಬೇಡಿ. ಓಡಾಡುವುದು ಅನಿವಾರ್ಯವಾದರೆ ತಮ್ಮ ಪಾದ ಇಡುವ ಜಾಗವನ್ನು ನೀಟಾಗಿ ನೋಡುವ ಕೆಲಸ ಮಾಡಿ. ಇಂತಹದೊಂದು ಮಾತನ್ನು ಹೇಳಲೇ ಬೇಕಾಗಿರುವುದು ಅನಿವಾರ್ಯವಾಗಿದೆ.
ಈ ಭಾಗದ ಮುಂದಿನ ಫುಟ್ಬಾತ್ ಜಾಗದಲ್ಲಿರುವ ಕಂಬಗಳ ಪುಟ್ಲೆಟ್ ಲ್ಯಾಂಪ್ ಗಳು ಅಂದರೆ ದಾರಿ ದೀಪಗಳು ಕಂಬ ಮುರಿದು ಹಾಳಾಗಿವೆ.


ಕನಿಷ್ಠ ಮೂರು ಕಂಬಗಳು ಮುರಿದಿದ್ದು, ಕೆಳಗೆ ವಿದ್ಯುತ್ ತಂತಿ ಎಲ್ಲಾ ಪಿಲ್ಲಿಯಾಗಿದೆ ಕರೆಂಟ್ ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಆ ವ್ಯವಸ್ಥೆ ಇನ್ನೂ ಬದಲಾಗಿಲ್ಲ. ಅಕಸ್ಮಾತ್ ಹೆಚ್ಚು ಕಮ್ಮಿ ಆದರೆ ಯಾರು ಹೊಣೆಯಾಗುತ್ತಾರೆ. ಶಿವಮೊಗ್ಗದ ವಾಸವಿ, ಮಹಾವೀರ ಸೇರಿದಂತೆ ಹಲವು ಶಾಲೆಗಳನ್ನು ಹೊಂದಿರುವ ಈ ಜಾಗದಲ್ಲಿ ನಿತ್ಯ ಸಾವಿರಾರು ಮಕ್ಕಳು, ಪೋಷಕರು, ಅಲ್ಲಿನ ನಿವಾಸಿಗಳು, ದೇವಸ್ಥಾನಕ್ಕೆ ಹಾಗೂ ಅರಮನೆಗೆ ಬರುವ ಭಕ್ತರು ಮತ್ತು ಪ್ರವಾಸಿಗರು ಈ ತಂತಿಯನ್ನು ತುಳಿದರೆ ಮುಂದೆ ನಡೆಯುವ ಅನಾಹುತಕ್ಕೆ ಯಾರು ಕಾರಣ?


ಸ್ಥಳೀಯ ವ್ಯಕ್ತಿಯೊಬ್ಬರು ಈ ಬಗ್ಗೆ ವಿದ್ಯುತ್ ಇಲಾಖೆಯ ಗಮನಕ್ಕೆ ತಂದಾಗ ಇದು ನಮಗೆ ಸಂಬಂಧಿಸುವುದಿಲ್ಲ ಎಂದು ಹೇಳುತ್ತಾರಂತೆ. ನಗರಪಾಲಿಕೆ ಅವರು ಇತ್ತ ನೋಡುತ್ತಾರೆಯೇ? ದುರಂತ ಘಟನೆ ನಡೆಯುವ ಮುನ್ನ ಗಮನಹರಿಸುವವರು ಇತ್ತ ಬೇಗ ಹೋಗಿ ಸರಿಪಡಿಸಲಿ. ಇದಕ್ಕೆ ಹೊಡೆದಾರರು ಯಾರು ಎನ್ನುವುದನ್ನು ಹುಡುಕುವ ಬದಲು ಆ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಬದಲಾವಣೆ ಅಗತ್ಯವಾಗಿದೆ ಅಲ್ಲವೇ?

Exit mobile version