Site icon TUNGATARANGA

ತಾಕತ್ತಿದ್ರೆ ಬಿಜೆಪಿಯವರು ರಾಜ್ಯಕ್ಕೆ ಬರಬೇಕಾದ ಬರಪರಿಹಾರದ ಹಣ ತರಲಿ ನೋಡೋಣ ಸಚಿವ ಮಧು ಬಂಗಾರಪ್ಪರಿಂದ ಆಕ್ರೋಶದ ಒತ್ತಾಯ ಏಕೆ ಗೊತ್ತಾ?

ಶಿವಮೊಗ್ಗ,ನ.27:

ಬರಗಾಲದಂತಹ ಸಂಕಷ್ಟದ ಸಂದರ್ಭದಲ್ಲಿ ವಿಪಕ್ಷಗಳು ಸರ್ಕಾರ ಬೀಳಿಸುವ ಚಿಂತನೆ ಬಿಟ್ಟು ಆಡಳಿತ ಪಕ್ಷದೊಂದಿಗೆ ಸಹಕರಿಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಬರಗಾಲ ಕಾಲಿಟ್ಟಿದೆ. ವಿರೋಧ ಪಕ್ಷಗಳು ಬರಗಾಲ ನಿರ್ವಹಣೆಗೆ ಸಂಬಂಧಿಸಿದಂತೆ ಸಲಹೆ ನೀಡುವುದನ್ನು ಬಿಟ್ಟು ಹತಾಶರಾಗಿ ಪದೇ ಪದೇ ಸರ್ಕಾರ ಬೀಳುತ್ತದೆ. ಬೀಳಿಸುತ್ತೇವೆ ಎಂದು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಸುಮಾರು 17 ಸಾವಿರ ಕೋಟಿ ರೂ ಮೊತ್ತದ ನಷ್ಟಕ್ಕೆ ಕೇಂದ್ರದಿಂದ ಪರಿಹಾರ ಕೇಳಿದ್ದೇವೆ. ಕೇಂದ್ರ ಈ ಬಗ್ಗೆ ನಿರ್ಲಕ್ಷ್ಯ ತಾಳಿದೆ. ರಾಜ್ಯದ ಬಿಜೆಪಿ ನಾಯಕರು ಕೇಂದ್ರಕ್ಕೆ ಹೋಗಿ ಪರಿಹಾರ ತರಲಿ, ಅದನ್ನು ಬಿಟ್ಟು ರಾಜ್ಯ ಸರ್ಕಾರವನ್ನು ಟೀಕಿಸುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು ಅಡಿಕೆಯನ್ನೇ ರೈತರು ಬೆಳೆಯುವುದು ಬೇಡ ಎಂದಿದ್ದರು. ಈಗ ಅಡಿಕೆ ಬೆಳೆಗಾರರ ಪರವಾಗಿ ಮಾತನಾಡುತ್ತಿದ್ದಾರೆ. ಎಲ್ಲಿ ಹೋಯಿತು 500 ಕೋಟಿ ರೂ. ವೆಚ್ಚದ ಅಡಿಕೆ ಸಂಶೋಧನಾ ಕೇಂದ್ರ. ಕೇಂದ್ರ ಸಚಿವ ಅಮಿತ್ ಅವರೂ ಭರವಸೆ ನೀಡಿದ್ದರು. ಅವರು ಈಗ ಉತ್ತರ ಹೇಳಬೇಕಲ್ಲವೇ ಎಂದು ಪ್ರಶ್ನೆ ಮಾಡಿದರು.

ಬಿಜೆಪಿಯವರು ಕೆಟ್ಟ ಸ್ವಭಾವದಲ್ಲಿಯೇ ಇದ್ದಾರೆ. ಅವರು ಎಂದೂ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲೇ ಇಲ್ಲ. ಹಿಂಬಾಗಿಲ ಮೂಲಕ ಅಧಿಕಾರ ಹಿಡಿದವರು. ಕಾಟಾಚಾರಕ್ಕೆ ಸಮೀಕ್ಷೆ ಮಾಡಿದರು. ಈ ಸಮೀಕ್ಷೆಯನ್ನು ಏನು ಮಾಡಿದ್ದಾರೆ. ಅದನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಪರಿಹಾರ ತಂದು ಕೊಡಲಿ ಎಂದು ಸವಾಲು ಹಾಕಿದರು.

ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸಿಬಿಐಗೆ ನೀಡಿದ್ದು ಸಚಿವ ಸಂಪುಟವೇ. ಈಗ ವಾಪಸ್ ಪಡೆದಿರುವುದೂ ಸಂಪುಟ ಸಭೆಯ ನಿರ್ಧಾರವೇ. ಅದರಲ್ಲೇನಿದೆ ವ್ಯತ್ಯಾಸ? ಬಿಜೆಪಿ ಮುಖಂಡರ ಕೇಸನ್ನೂ ಸಿಬಿಐನಿಂದ ವಾಪಸ್ ಪಡೆಯಬೇಕೆಂದರೆ ಹೇಳಲಿ ಎಂದು ವ್ಯಂಗ್ಯವಾಡಿದರು.

Exit mobile version