Site icon TUNGATARANGA

ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಮನೋಭಾವ ಬೆಳೆಸಬೇಕು: ರಾಮಕೃಷ್ಣ ವಿದ್ಯಾನಿಕೇತನದ ಮಕ್ಕಳ ರಂಗೋತ್ಸವದಲ್ಲಿ ಡಿಡಿಪಿಐ ಪರಮೇಶ್ವರಪ್ಪ

ಶೈಕ್ಷಣಿಕ ವೀರವನಿತೆ ಶೋಭಾವೆಂಕಟರಮಣ:
ರಾಮಕೃಷ್ಣ ವಿದ್ಯಾಸಂಸ್ಥೆಯ ಹಾಗೂ ಗುರುಕುಲಗಳ ಜವಾಬ್ದಾರಿಯನ್ನು ಹೊತ್ತು ಶಿಕ್ಷಕ ಮನಸ್ಸಿನ ಕಾರ್ಯದರ್ಶಿ ಶೋಭಾ ವೆಂಕಟರಮಣ ಅವರ ಸತತ ಪ್ರಯತ್ನದಿಂದ ರಾಜ ಹಾಗೂ ರಾಷ್ಟ್ರಮಟ್ಟದಲ್ಲಿ ಹಿರಿಮೆಯ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ವೆಂಕಟರಮಣ ಅವರು ಹಾಕಿಕೊಟ್ಟ ಹಾದಿಯಲ್ಲಿ ಸಂಸ್ಥೆಯನ್ನು ಅತ್ಯಂತ ವ್ಯವಸ್ಥಿತವಾಗಿ ಬೆಳೆಸುತ್ತಿರುವ ಶೋಭಾ ವೆಂಕಟರಮಣ ಅವರು ಶೈಕ್ಷಣಿಕ ವ್ಯವಸ್ಥೆಯ ವೀರವನಿತೆ.
-ಎಸ್.ಚಂದ್ರಕಾಂತ್, ಹಿರಿಯ ಸಂಪಾದಕರು, ಶಿವಮೊಗ್ಗ

ಶಿವಮೊಗ್ಗ, ನ.೨೭:
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಮಕ್ಕಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಮಾಡುವಂತೆ ಬೆಳೆಸುವ ಕರ್ತವ್ಯ ಶಿಕ್ಷಕರು, ಪೋಷಕರ ಹೊಣೆಗಾರಿಕೆಯ ವಿಷಯವಾಗಿದೆ. ಬದಲಾದ ದಿನಮಾನದಲ್ಲಿ ಶಿಕ್ಷಣದ ಜೊತೆ ಸೃಜನಶೀಲತೆ ಕಾರ್ಯಚಟುವಟಿಕೆಗಳಿಗೆ ಹೆಚ್ಚು ತೊಡಗುವಂತೆ ಮಕ್ಕಳನ್ನು ಪ್ರೇರೆಪಿಸಬೇಕಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪರಮೇಶ್ವರಪ್ಪ ತಿಳಿಸಿದರು.

https://youtu.be/n1NHMDPjL6A?si=Qas4chMEFFGQd8z6
ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಮನೋಭಾವ ಬೆಳೆಸಬೇಕು: ರಾಮಕೃಷ್ಣ ವಿದ್ಯಾನಿಕೇತನದ ಮಕ್ಕಳ ರಂಗೋತ್ಸವದಲ್ಲಿ ಡಿಡಿಪಿಐ ಪರಮೇಶ್ವರಪ್ಪ ರ ಅರ್ಥಗರ್ಬಿತ ಮಾತು ಕೇಳಿ, ವೀಡಿಯೋ ನೋಡಿ.– ತುಂಗಾತರಂಗ ದಿನಪತ್ರಿಕೆ, ಶಿವಮೊಗ್ಗ


ಅವರು ಗೋಪಾಳದ ರಾಮಕೃಷ್ಣ ವಿದ್ಯಾನಿಕೇತನ ವಾರ್ಷಿಕೋತ್ಸವ ಸಮಾರಂಭದ ಮಕ್ಕಳ ರಂಗೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ, ದೇಶದ ಸಂಸ್ಕೃತಿಯ ಭವ್ಯ ಪರಂಪರೆಯ ಪ್ರತೀಕವಾಗಿ ರಾಮಕೃಷ್ಣ ವಿದ್ಯಾನಿಕೇತನ ಸಂಸ್ಥೆ ಬೆಳೆದಿದೆ. ಅಂತೆಯೇ ಮಕ್ಕಳಿಗೆ ಆದ್ಯಾತ್ಮದ ಜೊತೆ ವೈಜ್ಞಾನಿಕ ಶಿಕ್ಷಣವನ್ನು ನೀಡುವ ಉದ್ದೇಶವನ್ನು ಹೊಂದಿರುವುದು ಸ್ವಾಗತಾರ್ಹ ಎಂದರು.


ನಮ್ಮ ಮಗುವಿನ ಸಾಮರ್ಥ್ಯವನ್ನು ಗಮನಿಸಿ ಅವನ ಆಸಕ್ತಿಯನ್ನು ನೋಡಿ ಪ್ರೋತ್ಸಾಹಿಬೇಕು. ಥಾಮಸ್ ಆಲ್ವಾ ಎಡಿಸನ್‌ರಿಗೆ ತಾಯಿ ನೀಡಿದ ಶಿಕ್ಷಣದಿಂದ ವಿಶ್ವವಿಖ್ಯಾತನಾಗಿದ್ದು ಹೇಗೆ ಎಂಬುದನ್ನು ಕಥೆಯ ರೂಪದಲ್ಲಿ ವಿವರಿಸಿದ ಅವರು ಮಕ್ಕಳನ್ನು ಬೆಳೆಸುವ ಹೊಣೆಗಾರಿಕೆ ಅತ್ಯಂತ ಸೂಕ್ಷ್ಮ ಎಂಬುದನ್ನು ಇಂದಿನ ದಿನಮಾನದಲ್ಲಿ ಸಮಾಜವೇ ಗಮನಿಸಬೇಕು. ಮಕ್ಕಳ ಮನದಲ್ಲಿ ಕೀಳಿರಿಮೆ ತುಂಬದಿರಿ. ಅವರಲ್ಲಿ ಸೆಲ್ಪ್ ಕಾನ್ಪಿಡೆನ್ಸ್ ಹಾಗೂ ಕಠಿಣ ಶ್ರಮದ ಓದನ್ನು ಅಳವಡಿಸಿಕೊಳ್ಳುವುದನ್ನು ಬೆಳೆಸಬೇಕು
ಸಾನಿಧ್ಯವಹಿಸಿ ಕಾರ್ಯಕ್ರಮವನ್ನು ಉದ್ಗಾಟಿಸಿದ ಕಲ್ಲುಗಂಗೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ವಿನಯಾನಂದ ಸರಸ್ವತಿ ಮಹಾರಾಜ್ ರವರು ತಮ್ಮ ಆಶೀರ್ವಚನದಲ್ಲಿ ಪರೋಪಕಾರದ ಮಹತ್ವ ಹಾಗೂ ಅದರಿಂದ ಲಭಿಸುವ ಜೀವನದ ಸಾರ್ಥಕತೆ ಬಗ್ಗೆ ಮಕ್ಕಳಲ್ಲಿ ತಿಳಿಹೇಳುವ ಕೆಲಸ ನಡೆಯಬೇಕಿದೆ. ಮಕ್ಕಳನ್ನು ಶಿಕ್ಷಕರ ಜೊತೆಗೆ ಪೋಷಕರು ಸಹ ನೈತಿಕತೆಯ ಪ್ರಾಮುಖ್ಯತೆಯೊಂದಿಗೆ ಬೆಳೆಸುವ, ಶಿಕ್ಷಣ ಕಲಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.


ಶಿವಮೊಗ್ಗ ಹಿರಿಯ ಪತ್ರಿಕಾ ಸಂಪಾದಕರಾದ ಎಸ್.ಚಂದ್ರಕಾಂತ್ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಾಮಕೃಷ್ಣ ವಿದ್ಯಾನಿಕೇತನದ ಕಾರ್ಯದರ್ಶಿ ಶೋಭಾ ವೆಂಕಟರಮಣ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಸಂಸ್ಥೆಯು ಜವಾಬ್ದಾರಿಯಂತೆ ಮಕ್ಕಳಲ್ಲಿ ಉನ್ನತ ಗುಣಮಟ್ಟದ ಶಿಕ್ಷಣದ ಜೊತೆ ಸೃಜನಶೀಲ ಚಟುವಟಿಕೆಗಳನ್ನು ಬಿಂಬಿಸುತ್ತಾ ಸಾಕಷ್ಟು ಪ್ರತಿಭೆಗಳನ್ನು ನಾಡಿದ ನೀಡಿದ ಹಿರಿಮೆಯನ್ನು ಹೊಂದಿದೆ. ಇದಕ್ಕೆ ಕಾರಣರಾದ ಶಿಕ್ಷಕರು ಹಾಗೂ ಪೋಷಕರು ಅಭಿನಂದನಾರ್ಹರು ಎಂದರು.


ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ನಾಗೇಶ್ ಅವರು ಅಧ್ಯಕ್ಷತೆಯ ವಹಿಸಿದ್ದರು. ವ್ಯವಸ್ಥಾಪಕರಾದ ಕೆ.ಹೆಚ್.ಅರುಣ್, ಜ್ಯೋತಿರ್ಬಾನು, ಮುಖ್ಯ ಶಿಕ್ಷಕ ತೀರ್ಥೆಶ್ ಹಾಗೂ ಇತರರು ಉಪಸ್ಥಿತರಿದ್ದರು. ಪ್ರಾಂಶುಪಾಲ ಟಿ.ವಿ.ಗಜೇಂದ್ರನಾಥ ಅವರು ವಂದಿಸಿದರು.

Exit mobile version