Site icon TUNGATARANGA

ಕರ್ನಾಟಕ ರಾಜ್ಯ 16 ವರ್ಷದೊಳಗಿನವರ ಕ್ರಿಕೆಟ್ ತಂಡಕ್ಕೆ ಶಿವಮೊಗ್ಗದ ಪ್ರದ್ಯುಮ್ನ ಎ.ಎನ್. ಆಯ್ಕೆ

ಶಿವಮೊಗ್ಗ: ಕರ್ನಾಟಕ ರಾಜ್ಯ ೧೬ ವರ್ಷದೊಳಗಿನವರ ಕ್ರಿಕೆಟ್ ತಂಡಕ್ಕೆ ಶಿವಮೊಗ್ಗದ ಪ್ರದ್ಯುಮ್ನ ಎ.ಎನ್. ಆಯ್ಕೆಯಾಗಿರುತ್ತಾನೆ.


ನಗರದ ಎಂ.ವಿ.ಎಸ್. ಶೆಟ್ಟಿ ಕ್ರಿಕೆಟ್ ಅಕಾಡೆಮಿಯ ಸ್ವಾಮಿ ಕುಮಾರ್ ಅವರಲ್ಲಿ ಕ್ರಿಕೆಟ್ ತರಬೇತಿ ಪಡೆದು ಹಾಲಿ ಬೆಂಗಳೂರಿನ ದಿ ಸ್ಪೋರ್ಟ್ಸ್ ಸ್ಕೂಲ್‌ನಲ್ಲಿ ೧೦ನೇ ತರಗತಿ ಓದುತ್ತಿರುವ ಪ್ರದ್ಯುಮ್ನ ಎ.ಎನ್. ಖ್ಯಾತ ಕ್ರಿಕೆಟ್ ಆಟಗಾರ ಆರ್. ಅನಂತ್ ಅವರ ಮಾರ್ಗದರ್ಶನದಲ್ಲಿ

ಹೆಚ್ಚಿನ ತರಬೇತಿ ಪಡೆಯುತ್ತಿದ್ದಾನೆ.
ಶಿವಮೊಗ್ಗದ ವಕೀಲರಾದ ಎ.ಎನ್. ವಾದಿರಾಜ ರಾವ್ ಮತ್ತು ಎನ್.ಎಸ್. ವಿಜಯ ದಂಪತಿಗಳ ಪುತ್ರನಾಗಿದ್ದು ೯ನೇ ತರಗತಿಯ ತನಕ ಗೋಪಾಳದ ಶ್ರೀ ರಾಮಕೃಷ್ಣ ವಿದ್ಯಾನಿಕೇತನದ ವಿಧ್ಯಾರ್ಥಿಯಾಗಿರುತ್ತಾನೆ.


ಬಲಗೈ ಬ್ಯಾಟ್ಸ್‌ಮನ್ ಹಾಗೂ ಮಧ್ಯಮ ವೇಗದ ಬೌಲರ್ ಆಗಿರುವ ಪ್ರದ್ಯುಮ್ನ ಎ.ಎನ್. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲು ಇನ್ನಿಂಗ್ಸ್ ಆರಂಭಿಸಬಲ್ಲ ಭರವಸೆಯ ಆಲ್ ರೌಂಡರ್.


ಬಾಲಕನ ಈ ಸಾಧನೆಗೆ ಎಂ.ವಿ.ಎಸ್. ಶೆಟ್ಟಿ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರಾದ ಡಿ.ಎಸ್. ಅರುಣ್ ಹಾಗೂ ತರಬೇತುದಾರರಾದ ಸ್ವಾಮಿಕುಮಾರ್, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಶಿವಮೊಗ್ಗ ವಲಯ ಸಂಚಾಲಕರಾದ ಸದಾನಂದ್, ಚೇರ್‌ಮನ್ ರಾಜೇಂದ್ರ ಕಾಮತ್,

ನಿಕಟಪೂರ್ವ ಶಿವಮೊಗ್ಗ ವಲಯ ಸಂಚಾಲಕರಾದ ಡಿ.ಆರ್. ನಾಗರಾಜ್, ಸಂಸ್ಥೆಯ ಅಧಿಕಾರಿಗಳಾದ ಯಶವಂತ್ ನಾಯಕ್ ಹಾಗೂ ಶಿವಮೊಗ್ಗ ವಲಯದ ಎಲ್ಲಾ ಹಿರಿಯ ಮತ್ತು ಕಿರಿಯ ಕ್ರಿಕೆಟ್ ಆಟಗಾರರು ಹೃತ್ಪೂರ್ವಕ ಅಭಿನಂದನೆಯನ್ನು ಸಲ್ಲಿಸಿ ಶಿವಮೊಗ್ಗ ನಗರಕ್ಕೆ ಕೀರ್ತಿ ತಂದ ಪ್ರದ್ಯುಮ್ನ ಎ.ಎನ್. ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಲಿ ಎಂದು ಆಶಿಸಿ ಶುಭ ಹಾರೈಸಿರುತ್ತಾರೆ.

Exit mobile version