ಶಿವಮೊಗ್ಗ: ಸಚಿವ ಸಂಪುಟ ಡಿ.ಕೆ. ಶಿವಕುಮಾರ್ ಅವರ ಸಿಬಿಐ ತನಿಖೆಯನ್ನು ವಾಪಾಸು ತೆಗೆದುಕೊಂಡಿರುವುದು ಇಡೀ ರಾಜ್ಯಕ್ಕೆ ಒಂದು ಕೆಟ್ಟ ಸಂದೇಶವಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ಕೆ. ಶಿವಕುಮಾರ್ ಅವರ ಹಗರಣಕ್ಕೆ ಸಂಬಂಧಿಸಿದಂತೆ ಸಂವಿಧಾನಬದ್ಧ ಸಂಸ್ಥೆಯಿಂದ ತನಿಖೆ ನಡೆಯುತ್ತಿದೆ. ತನಿಖೆ ಮುಗಿಯುವ ಹಂತಕ್ಕೆ ಬಂದಿದ್ದು ಇನ್ನೇನು ತೀರ್ಪು ಪ್ರಕಟವಾಗಬೇಕು ಎನ್ನುವಷ್ಟರಲ್ಲಿ ಸಚಿವ ಸಂಪುಟ ಸಭೆ ಇದನ್ನು ವಾಪಾಸು
ತೆಗೆದುಕೊಂಡಿರುವುದು ಕಾನೂನುಬಾಹಿರ ಆಗಿರುತ್ತದೆ. ನ್ಯಾಯಾಂಗ ಕೂಡ ಇದನ್ನು ಗಮನಿಸುತ್ತದೆ. ಈ ಪ್ರಕರಣವನ್ನು ರಾಜಕೀಯಗೊಳಿಸುವ ಕುತಂತ್ರ ಎಂದರು.
ಈ ಹಿನ್ನೆಲೆಯಲ್ಲಿ ಪ್ರತಿರೋಧ ತೀರ್ಪು ಬಂದರೆ ಅಚ್ಚರಿ ಪಡಬೇಕಾಗಿಲ್ಲ. ಹೈಕೋರ್ಟಿನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಒಂದು ಸಂವಿಧಾನ ಬದ್ಧ ಸಂಸ್ಥೆಯನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಖಂಡನೀಯ. ತಪ್ಪನ್ನು ಮುಚ್ಚಿಹಾಕುವ ಯತ್ನವಿದು ಎಂದರು.