Site icon TUNGATARANGA

ನ.25  ಮುಡುಬಾದಲ್ಲಿ ಸಾಹಿತ್ಯ ಹುಣ್ಣಿಮೆ ಸಂಭ್ರಮ|ವಿವಿಧ ಕಾರ್ಯಕ್ರಮಗಳು ಪ್ರದರ್ಶನ

ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ವತಿಯಿಂದ ಪ್ರತಿ ಹುಣ್ಣಿಮೆಯಂದು ಏರ್ಪಡಿಸುವ ಸಾಹಿತ್ಯ ಹುಣ್ಣಿಮೆಯ ೨೧೯ ನೆಯ ತಿಂಗಳ ಕಾರ್ಯಕ್ರಮ ಹಾಗೂ ಗುರುನಾನಕ್ ಮತ್ತು ಕನಕ ಜಯಂತಿ ಕಾರ್ಯಕ್ರಮವನ್ನು  ನ. ೨೫ ರಂದು ಸಂಜೆ ೫-೩೦ ಕ್ಕೆ ಮಂಡಗದ್ದೆ ಸಮೀಪದ ಮುಡುಬದ ಜೇಡ್ ವ್ಯಾಲಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಮಂಡಗದ್ದೆ ಹೋಬಳಿ ಸಮಿತಿ ರಚನೆಯಾಗಿದ್ದು, ನಿವೃತ್ತಿ ಎ.ಎಸ್.ಐ ಬಿ.ಬಿ. ಮಂಜಪ್ಪ ಅವರು ಅಧ್ಯಕ್ಷರಾಗಿದ್ದಾರೆ. ನೂತನ ಸಮಿತಿಯ ಕಾರ್ಯಚಟುವಟಿಕೆಗಳ ಉದ್ಘಾಟನೆ ಈ ಸಂದರ್ಭದಲ್ಲಿ ನಡೆಯಲಿದೆ.

ಸಾಹಿತ್ಯ ಹುಣ್ಣಿಮೆಯಲ್ಲಿ ಭದ್ರಾವತಿಯ ಖ್ಯಾತ ಜನಪದ ಕಲಾವಿದರಾದ ಲಕ್ಷ್ಮಣರಾವ್ ಮತ್ತು ತಂಡದಿಂದ ಚೌಡಿಕೆ ಕಲಾ ಪ್ರದರ್ಶನ, ದೂರದರ್ಶನದ ಹರಟೆ ಖ್ಯಾತಿಯ ಹಾಸ್ಯ ಕಲಾವಿದರಾದ ಉಮೇಶ್ ಗೌಡ ಅವರ ಹಾಸ್ಯ, ಉಪನ್ಯಾಸಕರು, ಸಾಹಿತಿಗಳಾದ ಡಾ. ಶ್ರೀಪತಿ ಹಳಗುಂದ ಅವರು ಕಥೆ ಹೇಳುತ್ತಾರೆ. ಕವಿಗಳಾದ ಕೆ. ಎಸ್. ಮಂಜಪ್ಪ, ಡಿ. ಗಣೇಶ್, ಬಿ. ಟಿ. ಅಂಬಿಕಾ, ಗಾಯಕರಾದ ಮಂಡಗದ್ದೆಯ ಶ್ರೀಪತಿ ಭವ್ಯ, ಮತ್ತು ಗಣೇಶ್ ಹಾಡು ಹೇಳಲಿದ್ದಾರೆ.



ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲರಾದ ಪ್ರೊ.ಜೆ. ಎಲ್. ಪದ್ಮನಾಭ ಉದ್ಘಾಟಿಸಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿಗಳಾದ ಡಾ.ಬಿ.ಎಂ. ಜಯಶೀಲ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವೈ. ಗಣೇಶ್ ಮಾತನಾಡಲಿದ್ದಾರೆ. ಕಸಾಪ ತಾಲ್ಲೂಕು ಅಧ್ಯಕ್ಷರಾದ ಟಿ.ಕೆ.

ರಮೇಶ್ ಶೆಟ್ಟಿ, ಶಿಕ್ಷಕರ ಪತ್ತಿನ ಸಹಕಾರ ಸಂಸ್ಥೆ ಅಧ್ಯಕ್ಷರಾದ ಮಹಾಬಲೇಶ್ವರ ಹೆಗಡೆ, ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಅಧ್ಯಕ್ಷರಾದ ಲೀಲಾವತಿ ಜಯಶೀಲ, ತಾಲ್ಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ರೇಣುಕಾ ಹೆಗಡೆ, ಮಂಡಗದ್ದೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಜ್ಯೋತಿ, ಶಿಕ್ಷಣ ಸಂಪನ್ಮೂಲ ಅಧಿಕಾರಿಗಳಾದ ಜ್ಯೋತಿ, ಲೋಟಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿಗಳಾದ ಭಾಸ್ಕರ್ ಪಾಲ್, ಮುಖ್ಯ ಶಿಕ್ಷಕರಾದ ಅಶೋಕ ಡಿ., ಕಸಾಪ ಹೋಬಳಿ ಅಧ್ಯಕ್ಷರಾದ ಬಿ. ಬಿ. ಮಂಜಪ್ಪ ಸೇರಿದಂತೆ ಸುತ್ತಲಿನ ಗ್ರಾಮದ ಮುಖಂಡರು ಸಾಹಿತ್ಯ ಸಾಂಸ್ಕೃತಿಕ ಮನಸ್ಸುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕರಿಸಲು ಡಿ. ಮಂಜುನಾಥ ಮನವಿ ಮಾಡಿದ್ದಾರೆ.

Exit mobile version