ಶಿವಮೊಗ್ಗ, ನವೆಂಬರ್ ೨೨, ( : ಜಿಲ್ಲಾ ಕಾರ್ಮಿಕ ಇಲಾಖೆಯು ಶಿವಮೊಗ್ಗ ಜಿಲ್ಲೆಯಲಿ ನ.೨೦ ರಂದು ಶಿವಮೊಗ್ಗ ನಗರ ಪ್ರದೇಶಗಳಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರನ್ನು ನೇಮಕ
ಮಾಡಿಕೊಳ್ಳುವುದರ ಕುರಿತು ತಪಾಸಣೆ ಹಾಗೂ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ತಪಾಸಣೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು/ ನ್ಯಾಯಾಧೀಶರಾದ ಸಿ.ಎನ್ ಚಂದನ್‌ರವರು ಹಾಜರಿದ್ದು, ವಾಣಿಜ್ಯ ಮಳಿಗೆಗಳ ಮಾಲೀಕರಿಗೆ ಬಾಲಕಾರ್ಮಿಕ ಹಾಗೂ
ಕಿಶೋರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬಾರದೆಂದು ಕರಪತ್ರಗಳನ್ನು ನೀಡುವುದರ ಮೂಲಕ ಅರಿವು ಮೂಡಿಸಲಾಯಿತು. ನಗರದ ವಿನೋಬನಗರ ೬೦ ಅಡಿ ರಸ್ತೆ, ಆಟೋಕಾಂಪ್ಲೆಕ್ಸ್ ಗಳಲ್ಲಿ ತಪಾಸಣೆಯನ್ನು ಹಮ್ಮಿಕೊಳ್ಳಲಾಯಿತು.
ತಪಾಸಣಾ ತಂಡದಲ್ಲಿ ಕಾರ್ಮಿಕ ನಿರೀಕ್ಷಕರಾದ ಭೀಮೇಶ್.ಪಿ ಶಿವಮೊಗ್ಗ-೦೨ನೇ ವೃತ್ತ, ಯೋಜನಾ ನಿರ್ದೇಶಕರಾದ ರಘುನಾಥ ಎ.ಎಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶ್ರೀಮತಿ ಆಶಾ, ಶ್ರೀಮತಿ ಶಾಂತಾಬಾಯಿ, ಸಮಾಜ ಕಲ್ಯಾಣ ಇಲಾಖೆಯ ಅಂಬರೀಶ್, ಶಿಕ್ಷಣ ಇಲಾಖೆಯ ಅಶೋಕ್ ಪಾಟೀಲ್, ಹಾಗೂ ಪೊಲೀಸ್ ಇಲಾಖೆ, ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು ಹಾಜರಿದ್ದರು