ಅಂಗವಿಕಲತೆ ಶಾಪವಲ್ಲ ಎಂದು ಡಾ. ಧನಂಜಯ ಸರ್ಜಿ ಹೇಳಿದ್ದಾರೆ.
ಅವರು ಇಂದು ನಗರದ ಸ್ಕೌಟ್ ಭವನದಲ್ಲಿ ಶಿವಮೊಗ್ಗ ರೌಂಡ್ ಟೇಬಲ್ ೧೬೬ ಹಾಗೂ ಸರ್ಜಿ ಫೌಂಡೇಷನ್ ಶಿವ ಮೊಗ್ಗ ಇವರ ಆಶ್ರಯದಲ್ಲಿ ವಿಶೇಷಚೇತನ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಕಿಡ್ಸ್ ಪಿಯೆಸ್ಟಾ-೨೦೨೩ (ಮಕ್ಕಳ ಜಾತ್ರೆ) ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರೌಂಡ್ ಟೇಬಲ್ ಮಾದರಿ ಕಾರ್ಯ ಮಾಡುತ್ತಿದೆ. ಇಡೀ ದೇಶದಲ್ಲಿ ಒಂದು ದಿನಕ್ಕೆ ಎರಡು ಕ್ಲಾಸ್ರೂಂ ಕಟ್ಟುವ ಕೆಲಸ ಮಾಡುವುದರ ಜೊತೆಗೆ ರಕ್ತದಾನ ಶಿಬಿರ, ನೇತ್ರದಾನ ಶಿಬಿರ, ಅಂಗಾಂಗ ದಾನ ಶಿಬಿರ ಏರ್ಪಡಿಸುತ್ತಾ ಬಂದಿದೆ. ಒಬ್ಬ ಮನುಷ್ಯ ಸತ್ತ ನಂತರ ಎರಡು ಕಣ್ಣುಗಳನ್ನು ದಾನ ಮಾಡಿದಲ್ಲಿ ನಾಲ್ಕು ಜನರಿಗೆ ದೃಷ್ಟಿ ಬರುತ್ತದೆ. ೮ಜನರಿಗೆ ಅಂಗಾಂಗ ದಾನ ಮಾಡಬಹುದು. ದೇಶದಲ್ಲಿ ಒಂದು ವರ್ಷಕ್ಕೆ ಅಂಗಾಂಗಗಳು ಸಿಗದೆ ಸುಮಾರು ೫ ಲಕ್ಷ ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಅಂಗಾಂಗ ದಾನ ಮಾಡಿದರೆ ಜೀವಕ್ಕೆ ಜೀವ ಕೊಟ್ಟಂತಾಗುತ್ತದೆ. ದೇಹದ ೭೫ ಅಂಗಾಂಗಳನ್ನು ದಾನ ಮಾಡ ಬಹುದಾಗಿದೆ. ವಿಶ್ವದಲ್ಲಿ ೧.೬ ಬಿಲಿಯನ್ ವಿಕಲಚೇತನರಿದ್ದಾರೆ ಎಂದರು.
ಅಂತರಾಷ್ಟ್ರೀಯ ಪ್ಯಾರಾ ಓಲಿಂಪಿಕ್ನಲ್ಲಿ ಪದಕ ಪಡೆದ ಕಿಶನ್ ಗಂಗೊಳ್ಳಿ ಸನ್ಮಾನ ಸ್ವೀಕರಿಸಿ ಮಾತನಾಡಿ, ದೇಹದ ನ್ಯೂನತೆಗಳು ದೊಡ್ಡದಲ್ಲ. ಅವಕಾಶಗಳೇ ಮುಖ್ಯ ಆತ್ಮಸ್ಥೈರ್ಯ ಇದ್ದರೆ ಏನು ಬೇಕಾದರೂ ಸಾಧಿಸಬಹುದು. ಸಮಾಜಕ್ಕೆ ನಿಮ್ಮ ಕೊಡುಗೆ ಏನು? ಸಮಾಜಕ್ಕಾಗಿ ನೀವೇನು ಮಾಡಿ ದ್ದೀರಾ ಎಂದು ಯೋಚಿಸಿ ಎಂದರು.
ಇನ್ನೋರ್ವ ಪದಕ ವಿಜೇತೆ ವೃತ್ತಿ ಜೈನ್ ಮಾತನಾಡಿ, ವಿಕಲ ಚೇತನ ಎಂಬುದು ಒಂದು ನ್ಯೂನತೆ ಅಲ್ಲ. ನಿಖರವಾದ ಗುರಿ ಇಟ್ಟುಕೊಂಡರೆ ಯಾವುದೂ ಕಷ್ಟವಲ್ಲ. ಬೇರೆ ದೇಶಕ್ಕೆ ಹೋಗಿ ನಮ್ಮ ದೇಶವನ್ನು ಪ್ರತಿನಿದಿ ಸುವಾಗಿ ನಮಗೆ ಅತ್ಯಂತ ಆನಂದವಾಯಿತು. ಪದಕ ಗಳಿಸುವುದರ ಜೊತೆಗೆ ಪ್ರಧಾನಿಯವರ ಜೊತೆಗಿನ ಸಭೆ ನಮ್ಮ ಜೀವನದ ಅತ್ಯಂತ ಅಮೂಲ್ಯ ಕ್ಷಣ ಎಂದರು.
ಮುಖ್ಯ ಅತಿಥಿಗಳಾಗಿ ನೋನಿ ಸಂಸ್ಥೆಯ ಎಂಡಿ ಡಾ. ಶ್ರೀನಿವಾಸಮೂರ್ತಿ, ದೇವಾ ನಂದ್, ಅನಿಲ್ರಾಜ್, ರಮೇಶ್ ಶಾಸ್ತ್ರಿ, ಶುಶ್ರುತ,, ರೌಂಡ್ ಟೇಬಲ್ ಅಧ್ಯಕ್ಷ ವಿಶ್ವಾಸ್ ಕಾಮತ್, ಈಶ್ವರ್ ಸರ್ಜಿ ಮತ್ತಿತರರು ಇದ್ದರು. ಕಾರ್ಯಕ್ರಮದಲ್ಲಿ ನೇತ್ರದಾನಿಗಳು ಪ್ರಮಾಣ ವಚನ ಸ್ವೀಕರಿಸಿದರು. ವಿಶೇಷ ಚೇತನ ಮಕ್ಕಳಿಗೆ ವಿವಿಧ ತಿನಿಸು, ಮನ ರಂಜನೆ ಕಾರ್ಯಕ್ರಮ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.