ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಕಲ್ಯಾಣ ಮಂಡಳಿಯು ನೊಂದಾ ಯಿತ ಫಲಾನುಭವಿಗಳ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ (ಕಲಿಕಾ ಭಾಗ್ಯ) ಯೋಜನೆಯಡಿ ನೀಡುತ್ತಿದ್ದ ಸಹಾಯಧನದಲ್ಲಿ ಸುಮಾರು ೮೦% ಕಡಿತಗೊಳಿಸಿರುವುದು ರದ್ದುಪಡಿಸಿ ಕಳೆದ ವರ್ಷದ ಯೋಜನೆಯನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಅದೇಶಿಸಲು ಆಗ್ರಹಿಸಿ ನ. ೨೨ನೇ ಬುಧವಾರ ಬೆಳಗ್ಗೆ ೧೦ ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನಾ ಧರಣಿ ನಡೆಸಲಿದೆ.
ಅವರು ಇಂದು ಬೆಳಗ್ಗೆ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ
ಒಕ್ಕೂಟದ ಅಧ್ಯಕ್ಷ ವಿ. ವಿನೋದ್, ಸರ್ಕರದ ಈ ಆದೇಶದಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಮಾರಕವಾಗಿದೆ. ಇದನ್ನು ಪ್ರತಿಭಟಿಸಿ ಧರಣಿಗೆ ಕರೆ ನೀಡಲಾಗಿದೆ ಎಂದರು.
ಪ್ರಮುಖ ವೈದ್ಯಕೀಯ ವೆಚ್ಚ ಮತ್ತು ವೈದ್ಯಕೀಯ ಸಹಾಯಧನ (ಕಾರ್ಮಿಕರ ಆರೋಗ್ಯ ಭಾಗ್ಯ) ದಡಿ ನೊಂದಾಯಿತ ಫಲಾನುಭವಿ ಹಾಗೂ ಅವಲಂಬಿತರು ಖಾಸಗಿ ಆಸ್ಪತ್ರೆಗೆ ಯಾವುದೇ ಮುಂಗಡ ಹಣ ಪಾವತಿ ಮಾಡದೆ ನೊಂದಾಯಿತ ಫಾಲಾನುಭವಿಯ ಗುರುತಿನ ಚೀಟಿ ತೋರಿಸಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಅದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ಮಂಡಳಿಯು ಭರಿಸಬೇಕು.
ಅಪಘಾತ ಪರಿಹಾರ ಸಹಾಯ ಧನವನ್ನು ರೂ. ೮ ಲಕ್ಷ ಮತ್ತು ಸಂಪೂರ್ಣ ಶಾಶ್ವತ ದುರ್ಬಲತೆ ರೂ. ೫ ಲಕ್ಷ ಹಾಗೂ ಭಾಗಶಃ ದುರ್ಬಲತೆ ೩ ಲಕ್ಷ ನೀಡಬೇಕು. ಅಂತ್ಯಕ್ರಿಯೆ ವೆಚ್ಚವನ್ನು ರೂ.. ೨೫,೦೦೦ ನೀಡಬೇಕೆಂದು ಒತ್ತಾಯಿ ಸಿದರು.
ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ಒಕ್ಕೂಟದ ಉಪಾಧ್ಯಕ್ಷ ಸುರೇಶ್, ಕಾರ್ಯಕಾರಿ ಸಮಿತಿ ಸದಸ್ಯರಾದ ನೇತ್ರಾವತಿ, ಸಂಧ್ಯಾ, ಭದ್ರಾವತಿ ತಾಲೂಕು ಸಮಿತಿಯ ಆನಂದ, ಅವಿನಾಶ್, ಶಿವಕುಮಾರ್, ಶೇಖರಪ್ಪ ಮೊದಲಾ ದವರಿದ್ದರು.