Site icon TUNGATARANGA

ಹೊಸಮನೆಯಲ್ಲಿ ಸಮುದಾಯ ಭವನ ಬೇಡ: ಪಾಲಿಕೆಯವರೇ ಅನುಮತಿ ನೀಡದಿರಿ: ಮನವಿ


ಶಿವಮೊಗ್ಗ,ನ.೧೮:
ಶಿವಮೊಗ್ಗ ನಗರಪಾಲಿಕೆ ವ್ಯಾಪ್ತಿಯಲ್ಲಿರುವ ಹೊಸಮನೆ ಬಡಾವಣೆ ಅತೀ ಹೆಚ್ಚು ಜನರನ್ನು ಹೊಂದಿರುವ ಸ್ಥಳವಾಗಿದ್ದು ಅಂತರಘಟ್ಟಮ್ಮ ಹಾಗೂ ದೊಡ್ಡಮ್ಮ ದೇವಾಲಯಕ್ಕೆ ಸೇರಿದ್ದ ಚಿಕ್ಕ ಜಾಗದಲ್ಲಿ ಸಮುದಾಯಭವನ ನಿರ್ಮಿಸಲು ಹಲವರು ಮುಂದಾಗಿದ್ದು,

ಅದಕ್ಕೊಸ್ಕರ ಪಾಲಿಕೆಯಲ್ಲಿ ದಾಖಲೆ ತಿದ್ದಿಸಿ ಭವನ ನಿರ್ಮಾಣದ ಅನುಮತಿಗೆ ಅರ್ಜಿ ಸಲ್ಲಿಸಿದ್ದಾರೆ. ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದೆಂದು ಹೊಸಮನೆ ನಾಗರೀಕ ಹಿತರಕ್ಷಣಾ ಸಮಿತಿ ಹಾಗೂ ಅಂತರಘಟ್ಟಮ್ಮ ದೇವಾಲಯ ಸಮಿತಿ ಆಗ್ರಹಿಸಿದೆ.


ಈ ಜಾಗದಲ್ಲಿ ಇರುವ ಕೆಂಚರಾಯಸ್ವಾಮಿ ದೇವಾಲಯವನ್ನು ತೆರವುಗೊಳಿಸಿ ಭವನ ಕಟ್ಟಲು ಮುಂದಾಗಿದ್ದು ಇದರಿಂದ ಅತಿ ಹೆಚ್ಚು ಕೂಲಿ ಕಾರ್ಮಿಕರೇ ಬದುಕುವ ಈ ಜಾಗದಲ್ಲಿ ಒಂದಿಬ್ಬರು ಪಾಲಿಕೆ ಸದಸ್ಯರು ಒತ್ತಡ ಹಾಕಿ ಇಡೀ ಪಾಲಿಕೆಯನ್ನು ತಮ್ಮ ಹತೋಟಿಗೆ ತೆಗೆದುಕೊಂಡು ದಾಖಲೆ ತಿದ್ದಿಸಿ ದೊಡ್ಡಮ್ಮ ದೇವಾಲಯ ಸಮಿತಿ ಅಧ್ಯಕ್ಷನ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಅಂತರಘಟ್ಟಮ್ಮ ದೇವಾಲಯ ಸಮಿತಿ ಅಧ್ಯಕ್ಷ ಎನ್ ಮಂಜುನಾಥ್ ಆರೋಪಿಸಿದ್ದಾರೆ.


ಈ ಬಗ್ಗೆ ಪಾಲಿಕೆ ನಮಗಾರಿಗೂ ಗೊತ್ತಿಲ್ಲದ ಉರ್ದು ಭಾಷಾ ಪತ್ರಿಕೆಯ ಜಾಹೀರಾತು ಪ್ರಕಟಿಸಿ ಮೋಸ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಸಮಿತಿಯ ಬಾಬು, ರಮೇಶ್, ರಮೇಶ್ ಬಾಬು, ಪಕೀರಪ್ಪ, ಶಿವಮೂರ್ತಪ್ಪ, ಉಮೇಶ್ ಹಾಗೂ ಇತರರಿದ್ದರು.

Exit mobile version