Site icon TUNGATARANGA

ನ. 15-27: ಶಿವಮೊಗ್ಗದಲ್ಲಿ ಅಂತರ ರಾಜ್ಯ ಮಹಿಳಾ ಕ್ರಿಕೆಟ್ ಪಂದ್ಯಾವಳಿ

ಶಿವಮೊಗ್ಗ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ದೇಶೀಯ ಕ್ರಿಕೆಟ್ ಪ್ರೋತ್ಸಾಹಿಸಲು ಮತ್ತು ಮಹಿಳಾ ಕ್ರಿಕೆಟಿಗರನ್ನು ಬೆಳೆಸಲು  ದೇಶದಲ್ಲಿ 15 ವರ್ಷದೊಳಗಿನ ಬಾಲಕಿಯರ ಅಂತರ ರಾಜ್ಯ ಮಹಿಳಾ ಕ್ರಿಕೆಟ್É ಪಂದ್ಯಾವಳಿಯನ್ನು ಶಿವಮೊಗ್ಗದಲ್ಲಿ ನ. 17ರಿಂದ 25ರವರೆಗೆ ಏರ್ಪಡಿಸಿದೆ.

ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ  ವಿವರ ನೀಡಿದ  ರಾಜ್ಯ ಕ್ರಿಕೆಟ್ ಸಂಸ್ಥೆಯ ವಲಯ ಸಂಚಾಲಕ ಎಚ್. ಎಸ್. ಸದಾನಂದ, ರಾಷ್ಟ್ರದ 36 ತಂಡಗಳು ಇದರಲ್ಲಿ ಭಾಗವಹಿಸುತ್ತಿವೆ. ಈ ತಂಡಗಳನ್ನು ತಲಾ 6 ತಂಡಗಳಂತೆ 6 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಈ ಪೈಕಿ ‘ಎಫ್’ ಗುಂಪಿನ 6 ತಂಡಗಳ ಶಿವಮೊಗ್ಗದ ಟರ್ಫ್ ಅಂಕಣಗಳಲ್ಲಿ ನಡೆಯಲಿದೆ. ಪಂದ್ಯಾವಳಿಗಳು ಶಿವಮೊಗ್ಗದ ನವುಲೆ ರಸ್ತೆಯಲ್ಲಿರುವ ಕೆ.ಎಸ್.ಸಿ.ಎ. ಕ್ರೀಡಾಂಗಣದಲ್ಲಿ ಮತ್ತು ಜೆ.ಎನ್.ಎನ್.ಸಿ.ಇ.  ಮೈದಾನದಲ್ಲಿ ನಡೆಯಲಿವೆ ಎಂದರು.

 ಎಫ್ ಗುಂಪಿನಲ್ಲಿ ಬರೋಡಾ, , ಹಿಮಾಚಲ ಪ್ರದೇಶ, ಮಣಿಪುರ, ಪಾಂಡಿಚೇರಿ, ಪಂಜಾಬ್ ಹಾಗೂ ಉತ್ತರ ಪ್ರದೇಶ ರಾಜ್ಯಗಳ ತಂಡಗಳಿವೆ. ಕರ್ನಾಟಕ ರಾಜ್ಯ ಮಹಿಳಾ ತಂಡವು ‘ಇ’ ಗುಂಪಿನಲ್ಲಿ ಉತ್ತರ ಪ್ರದೇಶÀದಲ್ಲಿ ಆಡುತ್ತಿದ್ದು ದೆಹಲಿ, ಅಸ್ಸಾಂ, ಝಾಖರ್ಂಡ್, ನಾಗಾಲ್ಯಾಂಡ್ ಹಾಗೂ ಮೇಘಾಲಯ ರಾಜ್ಯ ತಂಡಗಳು ಈ ಗುಂಪಿನಲ್ಲಿ ಇವೆÉ. ಈ ಪಂದ್ಯಾವಳಿಗಳು ನ.17ರಿಂದ  25 ರವರೆಗೆ  ನಡೆಯಲಿದ್ದು, ಪಂದ್ಯಕ್ಕೂ ಮಧ್ಯ ಒಂದು ದಿವಸದ ವಿಶ್ರಾಂತಿ ಇರುತ್ತದೆ. ದಿನಂಪ್ರತಿ 3 ಪಂದ್ಯಗಳಂತೆ ಒಟ್ಟಾರೆ 15 ಪಂದ್ಯಗಳು ನಡೆಯಲಿವೆ ಎಂದರು.

ಈ ಪಂದ್ಯವನ್ನು ಬಿಳಿ ಬಣ್ಣದ ಬಾಲ್‍ನಲ್ಲಿ ಆಡಲಾಗುವುದು. ಆಟಗಾರರು ಬಣ್ಣದ ಪೆÇೀಷಾಕಿನಲ್ಲಿ ಆಡುತ್ತಾರೆ. ಪ್ರತಿ ತಂಡವು 35 ಓವರ್ ಮಿತಿಯಲ್ಲಿ ಒನ್ ಡೇ ಲಿಮಿಟೆಡ್ ಓವರ್ ಪಂದ್ಯಾವಳಿಯ ನಿಯಮಾವಳಿಯಂತೆ ನಡೆಯಲಿದೆ. ಬಿ.ಸಿ.ಸಿ.ಐ.ನ ತೀರ್ಪುಗಾರರು ಮತ್ತು ಪಂದ್ಯ ವೀಕ್ಷಕರ ನೇತ್ರೃತ್ವದಲ್ಲಿ ನಡೆಯಲಿದೆ. ಈ ಪಂದ್ಯಾವಳಿಯನ್ನು ವೀಕ್ಷಿಸಲು ರಾಷ್ಟ್ರೀಯ ಮಹಿಳಾ ತಂಡದ ಆಯ್ಕೆದಾರರು ಸಹ ಅಗಮಿಸುತ್ತಿದ್ದು, ಈ ಪಂದ್ಯಾವಳಿಗಳನ್ನು ಆಯೋಜಿಸಲು ಶಿವಮೊಗ್ಗ ವಲಯವು ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ರಾಜೆಶ್ ಕಾಮತ್, ಐಡಿಯಲ್ ಗೋಪಾಲಕೃಷ್ಣ ಹಾಜರಿದ್ದರು.

Exit mobile version